ಹಸಿರು ಎಲೆಗಳ ತರಕಾರಿಗಳು ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಎಂದು ಎಲ್ಲರಿಗೂ ಗೊತ್ತು. ಅವುಗಳಲ್ಲೇ ಪಾಲಕ್ ಸೊಪ್ಪು (Spinach) ಅಗ್ರಸ್ಥಾನದಲ್ಲಿದೆ! ಮೂಲತಃ ಪರ್ಷಿಯನ್ ಬೆಳೆಯಾದ ಇದು, ಈಗ ಭಾರತೀಯರ ಪ್ರತಿ ಅಡುಗೆಮನೆಯ ಅವಿಭಾಜ್ಯ ಅಂಗವಾಗಿದೆ.
ಹಸಿರು ಎಲೆಗಳ ತರಕಾರಿಗಳು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಅವು ಪೌಷ್ಟಿಕಾಂಶಗಳ ಉತ್ತಮ ಮೂಲವಾಗಿದ್ದು, ಅವುಗಳಲ್ಲಿ ಪಾಲಕ್ ಸೊಪ್ಪು (Spinach) ಪ್ರಮುಖವಾದುದು.ಪಾಲಕ್ ಸೊಪ್ಪಿನಲ್ಲಿ ಹಲವು ವಿಧಗಳಿದ್ದು, ಎಲ್ಲವೂ ಅವುಗಳ ಅಧಿಕ ಪೋಷಕಾಂಶಗಳಿಗಾಗಿ ಹೆಸರುವಾಸಿಯಾಗಿವೆ. ವಿಶೇಷವಾಗಿ ಚಳಿಗಾಲದಲ್ಲಿ, ಹೆಚ್ಚಿನ ಭಾರತೀಯ ಮನೆಗಳಲ್ಲಿ ಪಾಲಕ್ ಸೊಪ್ಪಿನ ಅಡುಗೆ ಇರುತ್ತದೆ.
ಚಳಿಗಾಲಕ್ಕೆ ಪಾಲಕ್ ಸೊಪ್ಪಿನ ಅವಶ್ಯಕತೆ ಏನು?
ಚಳಿಗಾಲ (Winter) ಬಂದಾಗ ಶೀತ, ಜ್ವರ, ಕೆಮ್ಮು ಮತ್ತು ಸೋಂಕುಗಳು ನಮ್ಮ ಆರೋಗ್ಯವನ್ನು ಬೇಗನೆ ಬಾಧಿಸುತ್ತವೆ. ಈ ಸಮಯದಲ್ಲಿ ದೇಹಕ್ಕೆ ಉತ್ತಮ ಗುಣಮಟ್ಟದ ಆಹಾರ ಮತ್ತು ರೋಗನಿರೋಧಕ ಶಕ್ತಿ (Immunity) ಅತಿ ಮುಖ್ಯ. ಈ ಸಮಸ್ಯೆಗಳನ್ನು ತಡೆಯಲು ಪಾಲಕ್ ಸೊಪ್ಪು ಅತ್ಯುತ್ತಮ ಆಹಾರವಾಗಿದೆ.
ಪಾಲಕ್‌ನಲ್ಲಿ ಏನೆಲ್ಲಾ ಪೋಷಕಾಂಶಗಳಿವೆ?
ಪಾಲಕ್ ಸೊಪ್ಪು ಹೆಚ್ಚಿನ ಪ್ರಮಾಣದ ಪೋಷಕಾಂಶಗಳಿಂದ ಕೂಡಿದೆ. ಇದನ್ನು ‘ಪೌಷ್ಟಿಕಾಂಶಗಳ ಉತ್ತಮ ಮೂಲ’ ಎಂದೇ ಕರೆಯಬಹುದು. ಇದು ನಮ್ಮ ದೇಹಕ್ಕೆ ಬೇಕಾದ ಬಹುಮುಖ್ಯ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ,ಸಾಕಷ್ಟು ಪ್ರಮಾಣದ ಕಬ್ಬಿಣ (Iron), ಕ್ಯಾಲ್ಸಿಯಂ, ಮೆಗ್ನೀಷಿಯಂ, ಸೋಡಿಯಂ, ರಂಜಕ, ಕ್ಲೋರಿನ್.ವಿಟಮಿನ್ ಎ (Vitamin A), ವಿಟಮಿನ್ ಸಿ (Vitamin C), ವಿಟಮಿನ್ ಕೆ (Vitamin K) ಮತ್ತು ಆಂಟಿ-ಆಕ್ಸಿಡೆಂಟ್‌ಗಳು,ಪ್ರೋಟೀನ್ ಕೂಡ ಇದೆ.
ಚಳಿಗಾಲದಲ್ಲಿ ಪಾಲಕ್ ಸೊಪ್ಪು ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನೆಗಳೇನು
ಪೋಷಕಾಂಶಗಳ ಆಗರ;ಇದರಲ್ಲಿ ಕಾರ್ಬೋಹೈಡ್ರೇಟ್‌ಗಳು ಇದ್ದರೂ, ಅಧಿಕ ಪ್ರಮಾಣದಲ್ಲಿರುವ ನಾರಿನಾಂಶವು (Fiber) ದೇಹಕ್ಕೆ ಅತ್ಯಗತ್ಯ ಪೋಷಣೆ ನೀಡುತ್ತದೆ.ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಇ, ವಿಟಮಿನ್ ಕೆ1, ವಿಟಮಿನ್ ಬಿ9, ಕಬ್ಬಿಣಾಂಶ (Iron), ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ನಂತಹ ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿರುತ್ತವೆ.
ರೋಗ ನಿರೋಧಕ ಶಕ್ತಿ;ಪಾಲಕ್‌ನಲ್ಲಿರುವ ವಿಟಮಿನ್‌ಗಳು ಮತ್ತು ಖನಿಜಗಳು ದೇಹಕ್ಕೆ ಅಗತ್ಯವಾದ ಪೋಷಣೆ ನೀಡುವುದರ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
ವಿಶೇಷವಾಗಿ ಚಳಿಗಾಲದಲ್ಲಿ ಕಾಡುವ ಸೋಂಕು ಹಾಗೂ ಸಾಂಕ್ರಾಮಿಕ ರೋಗಗಳು ದೇಹಕ್ಕೆ ಅಂಟಿಕೊಳ್ಳದಂತೆ ನೋಡಿಕೊಳ್ಳಲು ಇದು ಸಹಕಾರಿ. ವಾತಾವರಣದ ಬದಲಾವಣೆಯಿಂದ ಉಂಟಾಗುವ ಶೀತ ಹಾಗೂ ಜ್ವರಗಳಂತಹ ಸಮಸ್ಯೆಗಳನ್ನು ನಿಯಂತ್ರಿಸಲು ಇದು ನೆರವಾಗುತ್ತದೆ.
ದೇಹದ ತೂಕ ಇಳಿಸಲು;ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದ್ದು, ದೇಹದ ತೂಕ ಇಳಿಸಲು ಸಹಾಯ ಮಾಡುತ್ತದೆ. ಪಾಲಕ್ ಸೊಪ್ಪಿನ ಸೇವನೆಯಿಂದ ದೇಹದ ಆರೋಗ್ಯವನ್ನು ಸಮತೋಲನದಲ್ಲಿ ಕಾಯ್ದುಕೊಳ್ಳಬಹುದಾಗಿದೆ.
ಮೂಳೆಗಳಿಗೆ ಸಹಾಯ ಮಾಡುವುದು;ಪಾಲಕ್ ಸೊಪ್ಪಿನಲ್ಲಿರುವ ವಿಟಮಿನ್ ಕೆ, ಪೊಟ್ಯಾಸಿಯಮ್, ಕ್ಯಾಲ್ಸಿಯಮ್ ಮತ್ತು ಇತರ ಜೀವಸತ್ವಗಳು ಮೂಳೆಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ.ಇದಲ್ಲದೆ, ಪಾಲಕ್ ಸೊಪ್ಪು ಇತರ ಮೂಲಗಳಿಂದ ದೊರೆಯುವ ಕ್ಯಾಲ್ಸಿಯಮ್ ಅನ್ನು ಹೀರಿಕೊಳ್ಳಲು ದೇಹಕ್ಕೆ ನೆರವಾಗುತ್ತದೆ.
ದೃಷ್ಟಿಯನ್ನು ಸುಧಾರಿಸುವುದು;ಪಾಲಕ್ ಸೊಪ್ಪಿನಲ್ಲಿ ಲುಟೀನ್ (Lutein) ಮತ್ತು ಝಿಕ್ಯಾಂಥಿನ್ (Zeaxanthin) ಎಂಬ ಪ್ರಮುಖ ಅಂಶಗಳು ಸಮೃದ್ಧವಾಗಿರುತ್ತವೆ.ಇವು ಕಣ್ಣಿನ ದೋಷಗಳನ್ನು ನಿವಾರಿಸಿ, ದೃಷ್ಟಿಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತವೆ. ನಿಯಮಿತವಾಗಿ ಪಾಲಕ್ ಸೊಪ್ಪನ್ನು ಸೇವಿಸುವುದರಿಂದ ದೃಷ್ಟಿದೋಷ, ಕಣ್ಣಿನ ಪೊರೆ ಸೇರಿದಂತೆ ಇನ್ನಿತರ ಕಣ್ಣಿನ ಸಮಸ್ಯೆಗಳು ಸುಧಾರಿಸುತ್ತವೆ.
ಸೈಬರ್ ವಂಚನೆ ತಡೆಗೆ TRAI ಮಹತ್ವದ ಕ್ರಮ: ಹಣಕಾಸು ಸಂಸ್ಥೆಗಳಿಗೆ ‘1600’ ಸರಣಿ ನಂಬರ್ ಕಡ್ಡಾಯ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


