ಕ್ರಿಕೆಟ್ ಜಗತ್ತಿನ ಅತಿ ದೊಡ್ಡ ಹಣಾಹಣಿ ಎಂದೇ ಹೆಸರನ್ನು ಸಂಪಾದಿಸಿರುವ ಆಶಸ್ ಟೆಸ್ಟ್ ಸರಣಿ ನಾಳೆಯಿಂದ ( ನವೆಂಬರ್ 21 ) ಶುರುವಾಗುತ್ತಿದೆ. ಒಟ್ಟು 5 ಟೆಸ್ಟ್ ಪಂದ್ಯಗಳುಳ್ಳ ಸರಣಿ ಇದಾಗಿದ್ದು 2026ರ ಜನವರಿ 4ರಂದು ಮುಕ್ತಾಯಗೊಳ್ಳಲಿದೆ.
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳಿಗೆ ಪ್ರತಿಷ್ಠೆಯ ಸರಣಿಯಾಗಿರುವ ಇದರಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿದ್ದು, ಈ ಬಾರಿ ಯಾವ ತಂಡ ಗೆಲ್ಲಲಿದೆ ಎನ್ನುವ ಕುತೂಹಲ ಮೂಡಿದೆ. ಇನ್ನು ಗೆಲ್ಲುವ ತಂಡ ಎನಿಸಿಕೊಂಡಿದ್ದ ಆಸ್ಟ್ರೇಲಿಯಾಗೆ ಸರಣಿ ಆರಂಭವಾಗುವ ಮುನ್ನವೇ ನಾಯಕ ಪ್ಯಾಟ್ ಕಮಿನ್ಸ್ ಗಾಯಕ್ಕೊಳಗಾದ ಕಾರಣ ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಈ ಸಲುವಾಗಿ ಟೆಸ್ಟ್ ಕ್ರಿಕೆಟ್ ಕಂಡ ಸಾರ್ವಕಾಲಿಕ ಅತ್ಯುತ್ತಮ ನಾಯಕರಲ್ಲಿ ಓರ್ವರಾದ ಸ್ಟೀವ್ ಸ್ಮಿತ್ ಹೆಗಲಿಗೆ ನಾಯಕತ್ವದ ಜವಾಬ್ದಾರಿಯನ್ನು ಆಸ್ಟ್ರೇಲಿಯಾ ಕ್ರಿಕೆಟ್ ಹಾಕಿದ್ದು, ಸ್ಮಿತ್ ಮಾರ್ಗದರ್ಶನದಲ್ಲಿ ಮೊದಲ ಪಂದ್ಯದಲ್ಲಿ ಆಸೀಸ್ ಕಣಕ್ಕಿಳಿಯಲಿದೆ. ಇನ್ನು ನಾಳೆ ಇರುವ ಪಂದ್ಯಕ್ಕೆ ಒಂದು ದಿನ ಮುಂಚಿತವಾಗಿಯೇ ಆಡುವ ಬಳಗವನ್ನು ಪ್ರಕಟಿಸಿರುವ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ತೊಡೆ ತಟ್ಟಿದೆ.
ನಾಳಿನ ಪಂದ್ಯಕ್ಕೆ ಪ್ರಕಟಗೊಂಡ ಆಸ್ಟ್ರೇಲಿಯಾ ಆಡುವ ಬಳಗ ಹೀಗಿದೆ: ಉಸ್ಮಾನ್ ಖವಾಜಾ, ಜೇಕ್ ವೆದರಾಲ್ಡ್, ಮಾರ್ನಸ್ ಲಾಬುಷೇನ್, ಸ್ಟೀವ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ನಥಾನ್ ಲಯಾನ್, ಬ್ರೆಂಡನ್ ಡಾಗೆಟ್, ಸ್ಕಾಟ್ ಬೋಲ್ಯಾಂಡ್
ಪಂದ್ಯ ನಾಳೆ ( ನವೆಂಬರ್ 21 ) ಆಸ್ಟ್ರೇಲಿಯಾದಲ್ಲಿ ಬೆಳಗ್ಗೆ 10.20ಕ್ಕೆ ಆರಂಭವಾಗಲಿದ್ದು, ಭಾರತದಲ್ಲಿ ಬೆಳಗ್ಗೆ 7.50ಕ್ಕೆ ನೇರಪ್ರಸಾರ ವೀಕ್ಷಿಸಲು ಲಭ್ಯವಿರಲಿದೆ. ಈ ಪಂದ್ಯ ಪರ್ತ್‌ನಲ್ಲಿ ನಡೆಯಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


