Friday, November 6, 2026
spot_img
More
    spot_img
    HomeSportsCricketAshes 2025: ಸ್ಮಿತ್‌ ಆಡುವಾಗ ಸ್ಯಾಂಡ್‌ಪೇಪರ್‌ ಎಂದು ಟೀಕಿಸಿ ಎಂದ ಇಂಗ್ಲೆಂಡ್‌ ಕ್ರಿಕೆಟಿಗನ ಮರ್ಯಾದೆ ಕಳೆದ...

    Ashes 2025: ಸ್ಮಿತ್‌ ಆಡುವಾಗ ಸ್ಯಾಂಡ್‌ಪೇಪರ್‌ ಎಂದು ಟೀಕಿಸಿ ಎಂದ ಇಂಗ್ಲೆಂಡ್‌ ಕ್ರಿಕೆಟಿಗನ ಮರ್ಯಾದೆ ಕಳೆದ ಸ್ಮಿತ್;‌ ವಿಡಿಯೊ

    2018ರಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ಕೇಪ್‌ಟೌನ್‌ನಲ್ಲಿ ನಡೆದಿದ್ದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಬಾಲ್‌ ಟೆಂಪರಿಂಗ್‌ಗೆ ಸ್ಯಾಂಡ್‌ ಪೇಪರ್‌ ಬಳಸುವ ಮೂಲಕ ಆಸ್ಟ್ರೇಲಿಯಾ ಕ್ರಿಕೆಟಿಗರು ವಿಶ್ವ ಕ್ರಿಕೆಟ್‌ ಮುಂದೆ ತಲೆ ತಗ್ಗಿಸುವ ಕೆಲಸ ಮಾಡಿದ್ದರು.

    ಇದಾದ ಬಳಿಕ ನಡೆದ ಸುದ್ದಿಗೋಷ್ಟಿಯಲ್ಲಿ ಕಣ್ಣೀರು ಹಾಕಿದ್ದ ಆಸ್ಟ್ರೇಲಿಯನ್ನರು ಬಳಿಕ ತಮ್ಮ ತಪ್ಪಿನ ಅರಿವಾಗಿ ಗಟ್ಟಿ ಕೆರಿಯರ್‌ ಕಟ್ಟಿಕೊಳ್ಳುವಲ್ಲಿ ಯಶಸ್ವಿಯಾದರು. ಆದರೂ ಅದೊಂದು ಮಣ್ಣು ತಿನ್ನುವ ಕೆಲಸವನ್ನು ಆಸ್ಟ್ರೇಲಿಯಾ ವಿರೋಧಿಗಳು ಇನ್ನೂ ಸಹ ಟೀಕೆ ಮಾಡಲು ಉಪಯೋಗಿಸುತ್ತಿರುತ್ತಾರೆ.

    ಇದೀಗ ನಾಳೆಯಿಂದ ( ನವೆಂಬರ್‌ 21 ) ಆರಂಭವಾಗಲಿರುವ ಬಹು ನಿರೀಕ್ಷಿತ ಆಶಸ್‌ ಸರಣಿಯಲ್ಲೂ ಸಹ ಆ ಘಟನೆಯನ್ನು ಬಳಸಿ ಸ್ಮಿತ್‌ ಆತ್ಮವಿಶ್ವಾಸವನ್ನು ಕಡಿಮಾ ಮಾಡಿ ಎಂದು ಬೆನ್‌ ಸ್ಟೋಕ್ಸ್‌ ಪಡೆಗೆ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮಾಂಟಿ ಪನೇಸರ್‌ ಸಲಹೆಯನ್ನು ನೀಡಿದ್ದಾರೆ. ಇದೇ ಕೆಲಸವನ್ನೇನಾದರೂ ಇಂಗ್ಲೆಂಡ್‌ ಮಾಡಿದ್ದರೆ ಆಸ್ಟ್ರೇಲಿಯನ್ನರು ಸುಮ್ಮನೆ ಬಿಡುತ್ತಿದ್ದರೇ? ಪತ್ರಿಕೆಗಳಲ್ಲಿ ಮೋಸಗಾರರು ಬರುತ್ತಿದ್ದಾರೆ ಎಂದು ಮುಖಪುಟದಲ್ಲಿ ಮುದ್ರಿಸಿ ಅವಮಾನಿಸುತ್ತಿದ್ದರು ಎಂದು ಹೇಳಿದ್ದಾರೆ.

    ಈ ಹೇಳಿಕೆಗೆ ಇಂದು ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಪ್ರತಿಕ್ರಿಯಿಸಿದ ಸ್ಮಿತ್‌ ಮಾಸ್ಟರ್‌ಮೈಂಡ್‌ ಎಂಬ ಕ್ವಿಜ್‌ನಲ್ಲಿ ಮಾಂಟಿ ಪನೇಸರ್‌ ಭಾಗವಹಿಸಿ ಅಸಂಬದ್ಧ ಉತ್ತರಗಳನ್ನು ನೀಡಿ ನಗೆಪಾಟಲಿಗೀಡಾಗಿದ್ದನ್ನು ನೆನಪಿಸಿ ಕಾಲೆಳೆದು ಮರ್ಯದೆ ತೆಗೆದಿದ್ದಾರೆ.

    ಈ ಕೋಣೆಯಲ್ಲಿರುವ ಯಾರಾದರೂ ಮಾಂಟಿ ಪನೇಸರ್‌ ಭಾಗವಹಿಸಿದ್ದ ಮಾಸ್ಟರ್‌ಮೈಂಡ್‌ ಎಪಿಸೋಡ್‌ ನೋಡಿದ್ದೀರಾ ಎಂದು ಪ್ರಶ್ನಿಸಿ ಅದು ಹಾಸ್ಯಾಸ್ಪದವಾಗಿತ್ತು ಎಂದಿದ್ದಾರೆ. ಆ ರಸಪ್ರಶ್ನೆಯಲ್ಲಿ ಜರ್ಮನಿಯಲ್ಲಿ ನಿರ್ಮಾಣವಾದ ಒಲಿಂಪಿಕ್‌ ಕ್ರೀಡಾಂಗಣ ಯಾವ ನಗರದಲ್ಲಿದೆ ಎಂಬ ಪ್ರಶ್ನೆಗೆ ಆಥೆನ್ಸ್‌ ಎಂದು ಪನೇಸರ್‌ ಉತ್ತರಿಸಿದ್ದು, ಆದರೆ ಉತ್ತರ ಮ್ಯೂನಿಕ್ ಆಗಿತ್ತು. ಇನ್ನು 1819ರ ಪದ್ಯವೊಂದರಲ್ಲಿ ಕವಿ ಕೀಟ್‌ ಯಾವ ಸೀಸನ್‌ ಅನ್ನು ಮಂಜು ತುಂಬಿದ ಹಾಗೂ ಹಣ್ಣುಗಳಿಂದ ಕೂಡಿದ ಸೀಸನ್‌ ಎಂದಿದ್ದರು ಎಂಬ ಪ್ರಶ್ನೆಗೆ ಪನೇಸರ್‌ ಆಲಿವರ್‌ ಟ್ವಿಸ್ಟ್‌ ಎಂದಿದ್ದರು, ಆದರೆ ಇದಕ್ಕೆ ಉತ್ತರ ಆಟಮ್ನ್‌ ಆಗಿತ್ತು. ಇನ್ನು ಮತ್ತೊಂದು ಪ್ರಶ್ನೆ ಟಿವಿ ಸೀರಿಸ್‌ ಚೀರ್ಸ್‌ ಯಾವ ನಗರದಲ್ಲಿ ಚಿತ್ರಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪನೇಸರ್‌ ಅಮೆರಿಕಾ ಎಂದರು, ಆದರೆ ಉತ್ತರ ಬಾಸ್ಟನ್‌ ಆಗಿತ್ತು.

    ಈ ಮೂರು ಪ್ರಶ್ನೆಗಳಿಗೆ ಪನೇಸರ್‌ ಕೊಟ್ಟ ಉತ್ತರಗಳನ್ನು ಉಲ್ಲೇಖಿಸಿದ ಸ್ಮಿತ್‌ ಆಥೆನ್ಸ್‌ ಜರ್ಮನಿಯಲ್ಲಿದೆ ಎನ್ನುವ, ಆಲಿವರ್‌ ಟ್ವಿಸ್ಟ್‌ ಅನ್ನು ಸೀಸನ್‌ ಎನ್ನುವ ಹಾಗೂ ಅಮೆರಿಕಾವನ್ನು ಒಂದು ನಗರ ಎನ್ನುವ ವ್ಯಕ್ತಿಯ ಕಾಮೆಂಟ್‌ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಪನೇಸರ್‌ಗೆ ಭರ್ಜರಿ ಕೌಂಟರ್‌ ಕೊಟ್ಟಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search