ಬೆಂಗಳೂರಿನಲ್ಲಿ ದಿನಕ್ಕೊಂದು ಕ್ರೈಮ್ ಕುರಿತಾದ ದೂರು ದಾಖಲಾಗುತ್ತಲೇ ಇರುತ್ತದೆ. ಹಾಗೆಯೇ ಕೊಡಿಗೆಹಳ್ಳಿಯಲ್ಲಿ ನಡೆದಿರುವ ಪ್ರಕರಣ ಸದ್ಯ ನಗರದಲ್ಲಿ ಮಹಿಳಾ ಸಂರಕ್ಷಣೆಯ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಹೌದು, ಕೊಡಿಗೆಹಳ್ಳಿಯ ಚಿತ್ರಕಲಾ ಎಂಬುವರ ಪಕ್ಕದ ಮನೆಯಲ್ಲಿ ನಿರ್ಮಾಣ ಕಾರ್ಯಗಳು ನಡೆಯುತ್ತಿದ್ದು, ಈ ವೇಳೆ ತನ್ನ ಮನೆಯ ಕಾಂಪೌಂಡ್ ಅನ್ನು ತನ್ನ ಅನುಮತಿ ಇಲ್ಲದೇ ಕೊರೆದಿದ್ದನ್ನು ಪ್ರಶ್ನಿಸಿದ್ದಾರೆ. ಆದರೆ ಇಂತಹ ಸಣ್ಣ ಎಡವಟ್ಟನ್ನು ಮಾತಿನಲ್ಲಿ ಸರಿ ಮಾಡಿಕೊಳ್ಳುವ ಬದಲು ಪಕ್ಕದ ಮನೆಯ ಪವನ್ ಕುಮಾರ್ ಎಂಬಾತ ಏಕಾಏಕಿ ಗೂಂಡಾಗಿರಿ ಪ್ರದರ್ಶಿಸಿದ್ದಾನೆ.
ಆತ ಚಂದ್ರಕಲಾರನ್ನು ತಲೆಕೂದಲು ಹಿಡಿದು ನೆಲಕ್ಕೆ ಬಿಸಾಡಿ ಮನಸೋಇಚ್ಛೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾನೆ. ಇನ್ನು ಅದೇ ಸಮಯಕ್ಕೆ ಪವನ್ ಕುಮಾರ್ ಮನೆಯ ಇತರೆ ಸದಸ್ಯರು ಸ್ಥಳಕ್ಕಾಗಮಿಸಿದ್ದು, ಜಗಳವನ್ನು ತಡೆಗಟ್ಟುವ ಬದಲು ಅವರೂ ಸಹ ಪವನ್ ಕುಮಾರ್ ಜತೆ ಸೇರಿಕೊಂಡು ಚಂದ್ರಕಲಾ ಮೇಲೆ ಹಲ್ಲೆ ನಡೆಸಿದ್ದಾರೆ.
ಇನ್ನು ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಚಂದ್ರಕಲಾ ಹಲ್ಲೆ ನಡೆಸಿದ ಪವನ್ ಕುಮಾರ್ ಹಾಗೂ ಆತನ ಕುಟುಂಬದ ಇತರೆ ಸದಸ್ಯರ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಯ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಕುಟುಂಬದ ಅಮಾನವೀಯ ಹಾಗೂ ದರ್ಪದ ನಡೆಗೆ ಭಾರೀ ಖಂಡನೆ ವ್ಯಕ್ತವಾಗುತ್ತಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


