Tuesday, November 3, 2026
spot_img
More
    spot_img
    HomeSportsCricketಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ; ಅಪ್ಪನಿಂದಾಗಿ ಆ ಕೆಟ್ಟ ಆಟಗಾರನಿಗೆ ಅವಕಾಶ...

    ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಗೆ ಕರ್ನಾಟಕ ತಂಡ ಪ್ರಕಟ; ಅಪ್ಪನಿಂದಾಗಿ ಆ ಕೆಟ್ಟ ಆಟಗಾರನಿಗೆ ಅವಕಾಶ ಎಂದ ನೆಟ್ಟಿಗರು!

    ಸದ್ಯ ರಣಜಿ ಟ್ರೋಫಿ ನಡೆಯುತ್ತಿದ್ದು, ಇದರ ನಡುವೆಯೇ ಕರ್ನಾಟಕ ರಾಜ್ಯ ಕ್ರಿಕೆಟ್‌ ಅಸೋಸಿಯೇಷನ್‌ ಇದೇ ತಿಂಗಳ 26ರಿಂದ ನಡೆಯಲಿರುವ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿಗೆ 16 ಆಟಗಾರರ ತಂಡವನ್ನು ಪ್ರಕಟಿಸಿದೆ.

    ಮಯಾಂಕ್‌ ಅಗರ್ವಾಲ್‌ಗೆ ನಾಯಕತ್ವ ನೀಡಲಾಗಿದ್ದು, ಕರುಣ್‌ ನಾಯರ್‌ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ ಹಾಗೂ ಕೆಎಲ್‌ ಶ್ರೀಜಿತ್‌ ವಿಕೆಟ್‌ ಕೀಪರ್‌ ಆಗಿ ಆಯ್ಕೆಯಾಗಿದ್ದಾರೆ.

    ಇನ್ನು ತಂಡ ಸಮತೋಲನದಿಂದ ಕೂಡಿದೆ ಎಂಬ ಮೆಚ್ಚುಗೆಯನ್ನು ಕೆಲ ನೆಟ್ಟಿಗರು ವ್ಯಕ್ತಪಡಿಸಿದ್ದು, ಇನ್ನೂ ಕೆಲವರು ಶರತ್ ಬಿಆರ್‌ ಆಯ್ಕೆಯನ್ನು ಖಂಡಿಸಿದ್ದಾರೆ. ಲುವ್ನಿತ್‌ ಸಿಸೋಡಿಯಾ ರೀತಿಯ ಆಟಗಾರನಿಗೆ ತಂಡದಲ್ಲಿ ಸ್ಥಾನವಿಲ್ಲ, ಆದರೆ ತಂದೆಯ ಬೆಂಬಲದಿಂದಾಗಿ ಶರತ್‌ ಬಿಆರ್‌ಗೆ ಮತ್ತೊಮ್ಮೆ ಅವಕಾಶ ಸಿಕ್ಕಿದೆ ಎಂದು ಎಕ್ಸ್‌ ವೇದಿಕೆಯಲ್ಲಿ ಕಾಮೆಂಟ್‌ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

    ಪ್ರಕಟಗೊಂಡ ತಂಡ: ಮಯಾಂಕ್‌ ಅಗರ್ವಾಲ್‌ ( ನಾಯಕ ) ಹಾಡ್ಲಿ ನೊರೊನಾ, ಶ್ರೀಜಿತ್‌ ಕೆಎಲ್‌ ( ವಿಕೆಟ್‌ ಕೀಪರ್‌ ), ಸ್ಮರಣ್‌ ಆರ್‌, ಅಭಿನವ್‌ ಮನೋಹರ್‌, ಶ್ರೇಯಸ್‌ ಗೋಪಾಲ್‌, ಶಿಖರ್‌ ಶೆಟ್ಟಿ, ವೈಶಾಖ್‌ ವಿಜಯಕುಮಾರ್‌, ವಿದ್ವತ್‌ ಕಾವೇರಪ್ಪ, ವಿದ್ಯಾಧರ್‌ ಪಾಟೀಲ್‌, ಶ್ರೀವತ್ಸ ಆರ್‌ ಆಚಾರ್ಯ, ಶುಭಾಂಗ್‌ ಹೆಗ್ಡೆ, ಪ್ರವೀಣ್‌ ದುಬೆ, ಶರತ್‌ ಬಿಆರ್‌ ( ವಿಕೆಟ್‌ ಕೀಪರ್‌ ) ಹಾಗೂ ದೇವದತ್‌ ಪಡಿಕ್ಕಲ್.

    ‌Ashes 2025: ಸಣ್ಣ ಬೂದಿಗಾಗಿ ಆಸ್ಟ್ರೇಲಿಯಾ – ಇಂಗ್ಲೆಂಡ್‌ ನಡುವೆ ರಕ್ತಪಾತ; ಏನಿದು ಬೂದಿಯ ಕಪ್?‌ ಇದಕ್ಕಾಗಿ ಯಾಕೆ ಇಷ್ಟು ಕಿತ್ತಾಟ?


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search