Tuesday, August 11, 2026
spot_img
More
    spot_img
    HomeLatest newsಬಂಗಾರ ಸ್ಥಿರ, ಬೆಳ್ಳಿ 5,000 ರೂ ಏರಿಕೆ! ವರ್ಷದ ಕೊನೆಯಲ್ಲಿ ಆಭರಣ ಪ್ರಿಯರಿಗೆ ಶಾಕ್ ನೀಡಿದ...

    ಬಂಗಾರ ಸ್ಥಿರ, ಬೆಳ್ಳಿ 5,000 ರೂ ಏರಿಕೆ! ವರ್ಷದ ಕೊನೆಯಲ್ಲಿ ಆಭರಣ ಪ್ರಿಯರಿಗೆ ಶಾಕ್ ನೀಡಿದ ಬಿಳಿ ಲೋಹ.

    ನವದೆಹಲಿ: ಭಾರತೀಯರಿಗೆ ಚಿನ್ನವೆಂದರೆ ಕೇವಲ ಆಭರಣವಲ್ಲ, ಅದೊಂದು ಭಾವನೆ ಮತ್ತು ನಂಬಿಕಸ್ತ ಹೂಡಿಕೆ. ಆದರೆ, ಕಳೆದ ಕೆಲವು ದಿನಗಳಿಂದ ಸತತವಾಗಿ ಏರಿಕೆ ಕಾಣುತ್ತಿದ್ದ ಬಂಗಾರ ಮತ್ತು ಬೆಳ್ಳಿಯ ಬೆಲೆಗಳು ಜನಸಾಮಾನ್ಯರ ನಿದ್ದೆಗೆಡಿಸಿತ್ತು. ಬಂಗಾರ ಅಷ್ಟೇ ಅಲ್ಲದೆ, ಬೆಳ್ಳಿ ಬೆಲೆಯಲ್ಲಿ ಬರೋಬ್ಬರಿ ₹5,000 ರೂಪಾಯಿಗಳ ಭರ್ಜರಿ ಜಿಗಿತ ಕಂಡುಬಂದಿದ್ದು, ಬಿಳಿ ಲೋಹವು ಜನಸಾಮಾನ್ಯರ ಕೈಗೆಟುಕದಂತಾಗಿದೆ.ಆದರೆ, ಇಂದು ಆಭರಣ ಪ್ರಿಯರಿಗೆ ಸ್ವಲ್ಪ ನಿಟ್ಟುಸಿರು ಬಿಡುವ ಸುದ್ದಿ ಸಿಕ್ಕಿದೆ.

    Advertisement

    ಸತತ ಏರಿಕೆಯ ನಂತರ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸ್ಥಿರವಾಗಿದೆ. ಅಂದರೆ, ದರ ಏರಿಕೆಯ ಓಟಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ.ಮಾರುಕಟ್ಟೆಯ ಇಂದಿನ ಲೇಟೆಸ್ಟ್ ದರಗಳನ್ನು ಗಮನಿಸುವುದಾದರೆ, 24 ಕ್ಯಾರಟ್‌ ಅಪರಂಜಿ ಚಿನ್ನದ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗದೆ ಸ್ಥಿರತೆ ಕಾಯ್ದುಕೊಂಡಿದೆ. ಇಂದು 1 ಗ್ರಾಂ ಚಿನ್ನದ ಬೆಲೆ ₹13,418 ಆಗಿದ್ದು, ನಿನ್ನೆಯ ಬೆಲೆಯೇ ಮುಂದುವರಿದಿದೆ. ಅದರಂತೆ, 8 ಗ್ರಾಂ (1 ಪವನ್) ಚಿನ್ನಕ್ಕೆ ₹1,07,344, 10 ಗ್ರಾಂ ಬಂಗಾರಕ್ಕೆ ₹1,34,180 ಹಾಗೂ 100 ಗ್ರಾಂ ಚಿನ್ನಕ್ಕೆ ಭರ್ಜರಿ ₹13,41,800 ದರ ನಿಗದಿಯಾಗಿದೆ. ಬೆಲೆ ಏರಿಕೆಯ ಭೀತಿಯಲ್ಲಿದ್ದ ಹೂಡಿಕೆದಾರರಿಗೆ ದರದಲ್ಲಿನ ಈ ಸ್ಥಿರತೆ ಸದ್ಯಕ್ಕೆ ಸಣ್ಣ ಸಮಾಧಾನ ತಂದಿದೆ.

    ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

    ಬೆಂಗಳೂರು ₹1,34,180

    ನಾಗ್ಪುರ ₹1,34,180

    ಮುಂಬೈ ₹1,34,180

    ಚೆನ್ನೈ ₹1,35,280

    ಕೋಲ್ಕತ್ತಾ ₹1,34,180

    ಪಾಟ್ನಾ ₹1,34,230

    ಸೂರತ್‌ ₹1,34,230

    ಚಂಡೀಗಢ ₹1,34,330

    ಲಕ್ನೋ ₹1,34,330

    ವಿಸಾ, ಮಾಸ್ಟರ್ ಕಾರ್ಡ್‌ಗೆ ಗೂಗಲ್ ಪೇ ಟಕ್ಕರ್! ಆಕ್ಸಿಸ್ ಬ್ಯಾಂಕ್ ಜೊತೆಗೂಡಿ ಭಾರತದಲ್ಲಿ ಮೊದಲ ಜಾಗತಿಕ ಕಾರ್ಡ್ ಲಾಂಚ್


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading