ನಿವೃತ್ತ ಡಿಜಿಪಿ ಓಂ ಪ್ರಕಾಶ್ ಅವರ ಹತ್ಯೆ ಸದ್ಯ ಪೊಲೀಸ್ ಇಲಾಖೆ ಹಾಗೂ ಎಚ್‌ಎಸ್‌ಆರ್ ಲೇಔಟ್ ಜನರನ್ನು ಬೆಚ್ಚಿ ಬೀಳಿಸಿದೆ. ತನ್ನ ವೃತ್ತಿ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆಯೂ ಇಲ್ಲದ ಹಾಗೆ ಕೆಲಸ ನಿರ್ವಹಿಸಿದ್ದ ಓಂ ಪ್ರಕಾಶ್ ತನ್ನ ಮನೆಯಲ್ಲಿಯೇ ಹೆಣವಾಗಿ ಬಿದ್ದಿರುವುದನ್ನು ಕಂಡು ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.
ಸದ್ಯ ಮೃತದೇಹದ ಮರಣೋತ್ತರ ಪರೀಕ್ಷೆ ಮುಕ್ತಾಯವಾಗಿದ್ದು, ಅತ್ತ ಎಚ್‌ಎಸ್‌ಆರ್ ಪೊಲೀಸರು ಪುತ್ರ ಕಾರ್ತಿಕೇಶ್ ನೀಡಿದ ದೂರಿನ ಮೇಲೆ ನಿನ್ನೆಯೇ ವಶಕ್ಕೆ ಪಡೆಯಲಾಗಿದ್ದ ಪತ್ನಿ ಪಲ್ಲವಿ ಹಾಗೂ ಪುತ್ರಿ ಕೃತಿಯ ವಿಚಾರಣೆ ಆರಂಭಿಸಿದ್ದಾರೆ. ಮೂಲಗಳ ಮಾಹಿತಿ ಪ್ರಕಾರ ಕೊಲೆ ಮಾಡುವ ಮುನ್ನ ಖಾರದಿ ಪುಡಿ ಹಾಗೂ ಎಣ್ಣೆಯನ್ನು ಎರಚಿ ಹಿಂಸಿಸಲಾಗಿದೆ ಎನ್ನಲಾಗಿದೆ.
ಇನ್ನು ಇಂದಿನ ವಿಚಾರಣೆಯಲ್ಲಿ ತಾಯಿ ಪಲ್ಲವಿ ಕೊಲೆಯನ್ನು ತಾನೊಬ್ಬಳೇ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಮೊದಲಿಗೆ ತನ್ನ ಹಾಗೂ ಪತಿಯ ನಡುವೆ ಜಗಳ ಆರಂಭವಾಯಿತು ಎಂದ ಪಲ್ಲವಿ ಜಗಳ ಅತಿರೇಕವಾದಾಗ ತಾನೇ ಮಗಳನ್ನು ಮೂರನೇ ಮಹಡಿಗೆ ಕಳುಹಿಸಿ ಲಾಕ್ ಮಾಡಿದ್ದೆ ಎಂದು ಹೇಳಿಕೊಂಡಿದ್ದಾರೆ. ಕೊಲೆಯನ್ನು ಸಂಪೂರ್ಣವಾಗಿ ತಾನೇ ಮಾಡಿದ್ದು ಇದರಲ್ಲಿ ಮಗಳು ಶಾಮೀಲಾಗಿಲ್ಲ ಎಂದಿದ್ದಾರೆ.
ಈ ಮೂಲಕ ಪಲ್ಲವಿ ಮಗಳನ್ನು ಸೇಫ್ ಮಾಡಲು ಯತ್ನಿಸುತ್ತಿದ್ದಾರಾ ಎಂಬ ಅನುಮಾನಗಳು ಮೂಡಿದ್ದು, ಪೊಲೀಸರು ಓಂ ಪ್ರಕಾಶ್ ಪುತ್ರಿ ಕೃತಿ ವಿಚಾರಣೆ ನಡೆಸಿದಾಗ ಏನು ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡಬೇಕಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


