ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸ್ವಲ್ಪವಾದರೂ ಮಾನ ಮಾರ್ಯಾದೆ ಅಥವಾ ಕನಿಷ್ಟ ಪಕ್ಷ ಸಾರ್ವಜನಿಕ ಜೀವನದಲ್ಲಿ ಗೌರವ ಇಟ್ಟುಕೊಂಡಿದ್ದರೆ, ವಸತಿ ಇಲಾಖೆಯಲ್ಲಿ ನಡೆದಿರುವ ಆಕ್ರಮದ ಬಗ್ಗೆ ತನಿಖೆಗೆ ಆದೇಶ ನೀಡಲಿ ಎಂದು ಪ್ರತಿಪಕ್ಷದ ನಾಯಕ ಆರ್.ಆಶೋಕ್ ( R Ashok ) ಬಹಿರಂಗ ಸವಾಲು ಹಾಕಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ವಸತಿ ಇಲಾಖೆಯಲ್ಲಿ ಮನೆ ಹಂಚಿಕೆಗೆ ಫಲಾನುಭವಿಗಳು ಹಣ ನೀಡಬೇಕು ಎಂದು ಸ್ವತಃ ಕಾಂಗ್ರೆಸ್ ಪಕ್ಷದ ಶಾಸಕ ಬಿ.ಆರ್ ಪಾಟೀಲ್ ಅವರೇ ಇದನ್ನು ಬಹಿರಂಗಪಡಿಸಿದ್ದಾರೆ. ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ಎಂದು ಪ್ರಶ್ನೆ ಮಾಡಿದರು.
ವಸತಿ ಇಲಾಖೆಯಲ್ಲಿ ಲಂಚ ಕೊಡದೇ ಮನೆ ಸಿಗುವುದಿಲ್ಲ. ಶಾಸಕರೇ ಇದರ ಬಗ್ಗೆ ಮಾತಾಡಿದ್ದಾರೆ, ಆಡಿಯೋ ಇದೆ. ಇದು ಸ್ಯಾಂಪಲ್ ಮಾತ್ರ, ಮನೆ ಬೇಕಾ ಲಂಚ ಕೊಡಿ.
ಸಿಎಂಗೆ ಗೌರವ ಇದ್ದರೆ, ಮಾನಮರ್ಯಾದೆ ಇದ್ದರೆ, ಕೂಡಲೇ ಇದನ್ನು ತನಿಖೆಗೆ ಕೊಡಲಿ. ಇಲ್ಲದ ಸಬೂಬು ಹೇಳುವುದು ಬೇಡ ಎಂದು ವಾಗ್ದಾಳಿ ನಡೆಸಿದರು.
ಆಡಳಿತ ಪಕ್ಷದವರೇ ಆಡಳಿತ ಪಕ್ಷದ ವಿರುದ್ಧ ಆಪಾದನೆ ಮಾಡುತ್ತಿದ್ದಾರೆ. ಇದು ಭ್ರಷ್ಟ ಸರ್ಕಾರ, 60% ಸರ್ಕಾರ. ಎಲ್ಲಾ ಇಲಾಖೆಗಳಲ್ಲೂ ಅಕ್ರಮ ನಡೆಯುತ್ತಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಪತ್ರ ಬರೆದಿರುವುದು ಇದಕ್ಕೆ ಸಾಕ್ಷಿ ಎಂದು ಕಿಡಿಕಾರಿದರು.
ಇನ್ನು ಮುಸ್ಲಿಮರಿಗೆ 15% ಮೀಸಲಾತಿ ವಿಚಾರದಲ್ಲಿ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಸ್ಪಷ್ಟೀಕರಣ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ತಪ್ಪು ಮುಚ್ಚಿಕೊಳ್ಳಲು ಜಮೀರ್ ಏನೇನೋ ಹೇಳುವುದು ಬೇಡ. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವಧಿಯಲ್ಲಿ ಸಂಪುಟ ಉಪಸಮಿತಿ ತೀರ್ಮಾನ ಮಾಡಿದ್ದರೆ, ತನಿಖೆಗೆ ಕೊಡಲಿ. ತಪ್ಪು ಮುಚ್ಚಿಕೊಳ್ಳಲು ಏನೇನೋ ಹೇಳುವುದು ಸರಿಯಲ್ಲ, ತಪ್ಪಾಗಿದ್ದರೆ ತನಿಖೆ ಮಾಡಿಸಲಿ ಎಂದು ಆಗ್ರಹಿಸಿದರು.
ಕೃಷಿ ಎಐ ಕನ್ನಡ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Siddaramaiah: ಸೋಮವಾರ ಸಂಜೆ ದೆಹಲಿಗೆ ಸಿಎಂ ಸಿದ್ದರಾಮಯ್ಯ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


