Wednesday, November 4, 2026
spot_img
More
    spot_img
    HomeEntertainmentಧರ್ಮಸ್ಥಳದಲ್ಲಿ ʼನಕಲಿ ದೇವಮಾನವʼ ಕೂಗು: ಇನ್ಸ್ಟಾಗ್ರಾಮ್‌ ಸ್ಟಾರ್‌ - ಭಕ್ತರ ನಡುವೆ ಗಲಾಟೆ; ವಿಡಿಯೊ

    ಧರ್ಮಸ್ಥಳದಲ್ಲಿ ʼನಕಲಿ ದೇವಮಾನವʼ ಕೂಗು: ಇನ್ಸ್ಟಾಗ್ರಾಮ್‌ ಸ್ಟಾರ್‌ – ಭಕ್ತರ ನಡುವೆ ಗಲಾಟೆ; ವಿಡಿಯೊ

    ಧರ್ಮಸ್ಥಳ: ಸದ್ಯ ಧರ್ಮಸ್ಥಳ ಗ್ರಾಮ ಸರಣಿ ಕೊಲೆ ಹಾಗೂ ಅನೇಕ ಅತ್ಯಾಚಾರ ಆರೋಪಗಳಿಂದ ಭಾರೀ ಸುದ್ದಿಗೊಳಗಾಗಿದೆ. ಒಂದೆಡೆ ಗ್ರಾಮದಲ್ಲಿ ಸರಣಿ ಕೊಲೆ ನಡೆದಿದ್ದು ಹೂತಿಟ್ಟ ಹೆಣಗಳ ಅಸ್ತಿಪಂಜರವನ್ನು ಹೊರತೆಗೆಯಲು ಸಿದ್ಧ ಎಂದು ಈ ಹಿಂದೆ ಕೆಲಸ ಮಾಡುತ್ತದ್ದ ವ್ಯಕ್ತಿ ಹೇಳಿದ್ದು, ಸರ್ಕಾರ ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಿದೆ.

    ಮತ್ತೊಂದೆಡೆ ಈ ಪ್ರಕರಣದಿಂದಾರೂ ಸೌಜನ್ಯ ಪ್ರಕರಣಕ್ಕೆ ಏನಾದರೂ ಲೀಡ್‌ ದೊರಕಲಿ ಎಂದು ಸೌಜನ್ಯ ಸಾವಿಗೆ ನ್ಯಾಯಕ್ಕಾಗಿ ಹೋರಾಡುತ್ತಿರುವವರು ಆಶಯ ವ್ಯಕ್ತಪಡಿಸಿದ್ದಾರೆ. ಇನ್ನು ಇನ್ಟಾಗ್ರಾಮ್‌ನಲ್ಲಿ ಎರಡು ಲಕ್ಷಕ್ಕೂ ಅಧಿಕ ಹಿಂಬಾಲಕರನ್ನು ಹೊಂದಿರುವ ʼಕಬ್ಜ ಶರಣ್‌ʼ ಎಂಬಾತ ಸೌಜನ್ಯಗೆ ನ್ಯಾಯ ಸಿಗಲಿ ಎಂದು ಬೆಂಗಳೂರಿನ ನಾಗರಬಾವಿಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದಾರೆ.

    ಇಂದು ( ಜುಲೈ 21 ) ಕಬ್ಜ ಶರಣ್‌ ಹಾಗೂ ಆತನ ಜತೆ ಮಾರ್ಗ ಮಧ್ಯದಲ್ಲಿ ಇನ್ನೂ ಕೆಲವರು ಪಾದಯಾತ್ರೆಗೆ ಸೇರಿಕೊಂಡವರು ಧರ್ಮಸ್ಥಳ ತಲುಪಿದ್ದಾರೆ. ಹೀಗೆ ಧರ್ಮಸ್ಥಳ ಗ್ರಾಮ ತಲುಪಿದವರನ್ನು ಪ್ರವೇಶ ದ್ವಾರದ ಬಳಿಯೇ ಭಕ್ತರು ಅಡ್ಡಗಟ್ಟಿದ್ದಾರೆ. ಪಾದಯಾತ್ರೆ ವೇಳೆ ನಕಲಿ ಎಂದು ಘೋಷಣೆ ಕೂಗಿದ ಕಾರಣ ಅಸಮಾಧಾನಗೊಂಡ ಭಕ್ತರು ಕಬ್ಜ ಶರಣ್‌ ಹಾಗೂ ತಂಡದ ಜೊತೆ ಮಾತಿನ ಚಕಮಕಿ ನಡೆಸಿದ್ದಾರೆ.

    ಇನ್ನು ಈ ಕುರಿತು ವಿಡಿಯೊ ಮೂಲಕ ಕಬ್ಜ ಶರಣ್‌ ಪ್ರತಿಕ್ರಿಯಿಸಿದ್ದು, ನಾವು ನಕಲಿ ದೇವಮಾನವ ಘೋಷಣೆ ಕೂಗಿದ್ದೇವೆ ಎಂದು ಆರೋಪಿಸಿ ನಮ್ಮನ್ನು ತಡೆಯುತ್ತಿದ್ದಾರೆ, ನಮ್ಮದು ನ್ಯಾಯದ ಪರವಾದ ಹಾಗೂ ಅನ್ಯಾಯದ ವಿರುದ್ಧದ ಹೋರಾಟ, ನಾನು ಧರ್ಮಸ್ಥಳ ಮಂಜುನಾಥ ಸ್ವಾಮಿಯಲ್ಲಿ ಬೇಡಿಕೊಳ್ಳಲು ಬಂದಿದ್ದೇನೆ ಹೊರತು ಬೇರೆ ಉದ್ದೇಶವಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಮುಡಾ ಪ್ರಕರಣ: ಸಿದ್ದು ಪತ್ನಿ ವಿರುದ್ಧ ಇಡಿ ತನಿಖೆಗೆ ಸುಪ್ರೀಂ ನಕಾರ; ಸ್ನೇಹಮಯಿ ಕೃಷ್ಣ ಮೊದಲ ಪ್ರತಿಕ್ರಿಯೆ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search