ರಾಜಕುಮಾರ’, ‘ಕೆಜಿಎಫ್’, ‘ಸಲಾರ್’, ‘ಕಾಂತಾರ’ದಂತಹ ಬ್ಲಾಕ್‌ಬಸ್ಟರ್ ಸಿನಿಮಾಗಳ ನಿರ್ಮಾಣದ ಹೊಂಬಾಳೆ ಫಿಲ್ಮ್ಸ್ ಇತ್ತೀಚೆಗೆ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿದೆ. 250 ದಿನಗಳಿಗೂ ಹೆಚ್ಚು ಕಾಲ ನಡೆಯಲಾದ ಶೂಟಿಂಗ್ ಮತ್ತು ಮೂರು ವರ್ಷಗಳ ನಿರಂತರ ಪರಿಶ್ರಮದ ಬಗ್ಗೆ ವಿಶೇಷ ದೃಶ್ಯಗಳನ್ನು ಒದಗಿಸಲಾಗಿದೆ. ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಸೇರಿದಂತೆ ತಂಡದ ಪರ್ತಿಗಳ ಶ್ರಮ ಮತ್ತು ರಿಷಬ್ ಶೆಟ್ಟಿಯ ನಿಖರತೆ ಈ ಮೇಕಿಂಗ್ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ,,ಈ ಸಿನಿಮಾವನ್ನು ಅಕ್ಟೋಬರ್ 2ರಂದು ಕನ್ನಡ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪ್ರಾದೇಶಿಕ ಸಾಂಸ್ಕೃತಿಕತೆಯನ್ನು ಸಮ್ಮಿಲನಗೊಳಿಸಿ ಭಾರತೀಯ ಸಿನಿಮಾಗಳ ಹೊಸ ಗಡಿಗಳನ್ನು ಸೇರುವ ಕೆಲಸ ‘ಕಾಂತಾರ ಚಾಪ್ಟರ್ 1’ ಮಾಡುತ್ತಿದೆ.
ಸುಮಾರು 3 ವರ್ಷಗಳ ಕಾಲ ಸಿನಿಮಾ ತಯಾರಿಯಲ್ಲಿದ್ದ ಈ ತಂಡ, ಶೂಟಿಂಗ್ ಮಾತ್ರವೇ 250 ದಿನಗಳ ಕಾಲ ನಿರಂತರವಾಗಿ ನಡೆಸಿದೆ. ಸಾವಿರಾರು ಸಿಬ್ಬಂದಿ ಹಗಲಿರುಳು ದುಡಿದು, ಪ್ರತಿ ಹಂತದಲ್ಲೂ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಛಾಯಾಗ್ರಾಹಕ ಅರವಿಂದ್ ಕಶ್ಯಪ್, ಸಂಗೀತ ನಿರ್ದೇಶಕ ಬಿ.ಅಜನೀಶ್ ಲೋಕನಾಥ್, ಮತ್ತು ಪ್ರೊಡಕ್ಷನ್ ಡಿಸೈನರ್ ವಿನೇಶ್ ಬಂಗ್ಲನ್ ಸೇರಿದಂತೆ ಟೀಂ ಎಲ್ಲೆಡೆ ಶ್ರೇಷ್ಠತೆ ತೋರಿದೆ.‘ಕಾಂತಾರ ಚಾಪ್ಟರ್ 1’ ಸಿನಿಮಾದ ಶೂಟಿಂಗ್ ಹೇಗಿತ್ತು, ಅದಕ್ಕೆ ಎಷ್ಟು ಶ್ರಮವಿತ್ತು ಎಂಬುದನ್ನು ತೋರಿಸುವ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿದೆ. ಈ ವಿಡಿಯೋದಲ್ಲಿ ಮೂಡಿರುವ ದೃಶ್ಯಗಳು ಪ್ರೇಕ್ಷಕರಲ್ಲಿ ಕುತೂಹಲ ಮತ್ತು ಭಾವುಕತೆಯನ್ನು ಮೂಡಿಸುತ್ತಿದೆ.
ನಮ್ಮ ಮಣ್ಣಿನ ಕಥೆಯನ್ನು ಇಡೀ ಪ್ರಪಂಚಕ್ಕೆ ಹೇಳಬೇಕೆಂಬುದು ನನ್ನ ಕನಸು. ಕಳೆದ ಮೂರು ವರ್ಷಗಳ ಪರಿಶ್ರಮ, 250 ದಿನಗಳ ಶೂಟಿಂಗ್ ಸಮಯದಲ್ಲಿ ಎದುರಾದ ಎಲ್ಲ ಕಷ್ಟಗಳ ನಡುವೆಯೂ, ನಾನು ನಂಬಿದ ದೈವ ನನ್ನ ಕೈ ಬಿಡಲಿಲ್ಲ. ನನ್ನ ತಂಡ ಮತ್ತು ನಿರ್ಮಾಪಕರು ಕೂಡ ನನ್ನೊಂದಿಗೆ ಇದ್ದರು. ಪ್ರತಿದಿನ ಸೆಟ್‌ನಲ್ಲಿ ಸಾವಿರಾರು ಜನರನ್ನು ಎದುರಿಸಿದಾಗ, ಇದು ಸೇನೆಯಲ್ಲ, ಶಕ್ತಿಯೇ ಅನಿಸುತ್ತಿತ್ತು. ಕಾಂತಾರ ಪ್ರಪಂಚಕ್ಕೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಸ್ವಾಗತ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಅನುಶ್ರೀ ಮದುವೆಯಾಗಲಿರುವ ಹುಡುಗನ ಫೋಟೊ ವೈರಲ್; ಯಾರು ವರ?
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


