ನವದೆಹಲಿ;ಇದೀಗ ಸಾಮಾನ್ಯವಾಗಿ ಎಲ್ಲರ ಭಾರತೀಯರ ಬಳಿಯೂ ಆಧಾರ್ ಕಾರ್ಡ್ ಇದ್ದೇ ಇದೆ. ಆಧಾರ್ ಕಾರ್ಡ್ ಇಲ್ಲದಿದ್ದರೆ ಹಲವಾರು ಸೌಲಭ್ಯಗಳು ಸಿಗದೇ ಇರುವ ಹಿನ್ನೆಲೆಯಲ್ಲಿ ಇದನ್ನು ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿರುವ ಆಧಾರ್ ಕಾರ್ಡ್ ಇದ್ದರೆ ಈಗ ಹಲವಾರು ಕೆಲಸಗಳು ಸುಲಭ ಜೊತೆಗೆ ಸರ್ಕಾರಿ ಸೌಲಭ್ಯಗಳಿಗೆ ಇವು ಕಡ್ಡಾಯವಾಗಿ ಬೇಕು ಎನ್ನುವುದು ಎಲ್ಲರಿಗೂ ತಿಳಿದದ್ದೇ. ಅದೇ ರೀತಿ ಚಿಕ್ಕಮಕ್ಕಳಿಗೂ ಇದೀಗ ಆಧಾರ್ ಕಾರ್ಡ್‌ಗಳು ಇವೆ.

ದೇಶದ ಸುಮಾರು 7 ಕೋಟಿ ಮಕ್ಕಳ ಆಧಾರ್ ಕಾರ್ಡ್‌ಗಳು ಇನ್ನೂ ಬಯೋಮೆಟ್ರಿಕ್ ಅಪ್‌ಡೇಟ್ ಆಗಿಲ್ಲ ಎಂಬ ಆತಂಕದ ತಳಹದಿಯಲ್ಲಿ, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮಹತ್ವದ ಹೆಜ್ಜೆ ಹಾಕಿದೆ. ಈ ಸಮಸ್ಯೆ ಬಗೆಹರಿಸಲು, UIDAI ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳ ಆಧಾರ್ ಅಪ್‌ಡೇಟ್ ಮಾಡುವ ಯೋಜನೆ ರೂಪಿಸುತ್ತಿದೆ.UIDAI ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ್ ಕುಮಾರ್ ಪ್ರಕಾರ, ಈ ಯೋಜನೆ ಮುಂದಿನ 40 ರಿಂದ 60 ದಿನಗಳೊಳಗೆ ಪೂರ್ಣ ರೂಪದಲ್ಲಿ ಸಿದ್ಧವಾಗಲಿದೆ. ಶೀಘ್ರದಲ್ಲೇ ಶಾಲೆಗಳ ಮಟ್ಟದಲ್ಲಿ ಪೋಷಕರ ಒಪ್ಪಿಗೆ ಪಡೆದು ಮಕ್ಕಳ ಬಯೋಮೆಟ್ರಿಕ್ ಅಪ್‌ಡೇಟ್ ನಡೆಸಲಾಗುವುದು.5 ವರ್ಷದ ಮೇಲಿನ ಪ್ರತೀ ಮಗುವಿಗೆ ಬಯೋಮೆಟ್ರಿಕ್ ಅಪ್‌ಡೇಟ್ ಕಡ್ಡಾಯವಾಗಿದ್ದು, ಅದು ನಡೆಯದಿದ್ದರೆ ಆಧಾರ್ ಸಂಖ್ಯೆ ನಿಷ್ಕ್ರಿಯವಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ, 2 ತಿಂಗಳ ಬಳಿಕ ಹಂತ ಹಂತವಾಗಿ ದೇಶವ್ಯಾಪಿಯಾಗಿ ಯೋಜನೆ ಜಾರಿಗೆ ಬರಲಿದೆ.UIDAI ಬಯೋಮೆಟ್ರಿಕ್ ಮಾಹಿತಿ ನವೀಕರಣಕ್ಕಾಗಿ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದು, ಶೀಘ್ರದಲ್ಲೇ ದೇಶದಾದ್ಯಂತ ಈ ಕಾರ್ಯಾಚರಣೆ ಆರಂಭವಾಗಲಿದೆ.ಇದಕ್ಕಾಗಿ ಪ್ರತಿಯೊಂದು ಜಿಲ್ಲೆಗೆ ಬಯೋಮೆಟ್ರಿಕ್ ಯಂತ್ರಗಳನ್ನು ಕಳುಹಿಸಲಾಗುತ್ತದೆ ಅವು ಒಂದೊಂದು ಶಾಲೆಯಿಂದ ಮತ್ತೊಂದು ಶಾಲೆಗೆ ಹಂಚಿಕೆಯಾಗುತ್ತವೆ, ಮೂಲಕ ಹೆಚ್ಚಿನ ಮಕ್ಕಳನ್ನು ಸೆರೆಹಿಡಿಯಲು ಉದ್ದೇಶಿಸಲಾಗಿದೆ
NPS ವಾತ್ಸಲ್ಯ ಯೋಜನೆ ಸಂಪೂರ್ಣ ವಿವರ: ಮಕ್ಕಳ ಭವಿಷ್ಯಕ್ಕಾಗಿ ಪೋಷಕರಿಗೆ ಶ್ರೇಷ್ಠ ಹೂಡಿಕೆ ಆಯ್ಕೆ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


