ಬೆಳಗಾವಿ: ರಾಜ್ಯದಲ್ಲಿ ಹೃದಯಾಘಾತಕ್ಕೆ ಬಲಿಯಾದ ಪ್ರಕರಣಗಳು ಮುಂದುವರಿಯುತ್ತಲೇ ಇದ್ದು, ನಿನ್ನೆ ( ಜುಲೈ 20 ) ಬೆಳಗ್ಗೆ ಬೆಳಗಾವಿಯ ಕಾಕತಿ ಗ್ರಾಮದ ಯುವ ವಕೀಲ ಸಾವನ್ನಪ್ಪಿದ್ದಾರೆ.
36 ವರ್ಷದ ಶುಭಾಷ್ ಸಾವಿಗೀಡಾದ ದುರ್ದೈವಿ. ನಿನ್ನೆ ಹೊಟೇಲ್ನಲ್ಲಿ ಬೆಳಗಿನ ಉಪಹಾರ ಸೇವಿಸಿ ಮಾತ್ರೆ ತೆಗೆದುಕೊಳ್ಳಲು ಮುಂದಾಗಿದ್ದ ಸುಭಾಷ್ ಮಾತ್ರೆ ಸೇವಿಸುವಾಗಲೇ ಹೃದಯಾಘಾತ ಸಂಭವಿಸಿ ಕುಸಿದು ಬಿದ್ದಿದ್ದಾರೆ.
ಸುಭಾಷ್ ಅವರನ್ನು ಆಸ್ಪತ್ರೆಗೆ ಸಾಗಿಸುವ ಯತ್ನ ಮಡಲಾಯಿತಾದರೂ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದರು. ಇನ್ನು ಸುಭಾಷ್ ಕೌಂಟರ್ ಬಳಿ ಬಂದು ಬಾಟಲ್ನಲ್ಲಿ ನೀರು ಕುಡಿದು ಮಾತ್ರೆ ಸೇವಿಸಿದ್ದಾರೆ. ಬಳಿ ಇನ್ನೂ ಸ್ವಲ್ಪ ನೀರು ಕುಡಿದಿದ್ದಾರೆ. ಇದಾದ ನಂತರದ ಕ್ಷಣದಲ್ಲೇ ಸುಭಾಷ್ ಕೌಂಟರ್ ಹಿಡಿದು ಸುಸ್ತಿನಿಂದ ಕುಸಿದು ಬೀಳುವ ಹಾಗೆ ನಿಂತಿದ್ದರು. ಪುನಃ ತುಸು ಚೇತರಿಸಿಕೊಂಡು ಮತ್ತೆ ನೀರು ಕುಡಿದಿದ್ದು, ಕೆಲವೇ ಹೊತ್ತಿನಲ್ಲಿ ಕುಸಿದು ಬಿದ್ದಿದ್ದಾರೆ.
ಪ್ರತಿ ದಿನ 2 ವಾಲ್ನಟ್ ತಿಂದರೆ ದೊರೆಯುವ ಅಚ್ಚರಿದಾಯಕ ಆರೋಗ್ಯ ಲಾಭಗಳು
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


