Friday, November 6, 2026
spot_img
More
    spot_img
    HomeSportsCricketಏಷ್ಯಾಕಪ್‌ ಸೆಮಿಫೈನಲ್:‌ ಕೇವಲ 1 ರನ್‌ ಟಾರ್ಗೆಟ್‌ ನೀಡಿ ಬಾಂಗ್ಲಾದೇಶದ ವಿರುದ್ಧ ಹೀನಾಯ ಸೋಲುಂಡ ಭಾರತ

    ಏಷ್ಯಾಕಪ್‌ ಸೆಮಿಫೈನಲ್:‌ ಕೇವಲ 1 ರನ್‌ ಟಾರ್ಗೆಟ್‌ ನೀಡಿ ಬಾಂಗ್ಲಾದೇಶದ ವಿರುದ್ಧ ಹೀನಾಯ ಸೋಲುಂಡ ಭಾರತ

    ದೋಹಾದ ವೆಸ್ಟ್‌ ಎಂಡ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಏಷ್ಯಾಕಪ್‌ ರೈಸಿಂಗ್‌ ಸ್ಟಾರ್ಸ್ 2025 ಟೂರ್ನಿಯ ಅತಿರೋಚಕ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಎ ಹಾಗೂ ಬಾಂಗ್ಲಾದೇಶ ಎ ತಂಡಗಳು ಮುಖಾಮುಖಿಯಾಗಿದ್ದು, ಸೂಪರ್‌ ಓವರ್‌ನಲ್ಲಿ ಬಾಂಗ್ಲಾದೇಶ ರೋಚಕ ಗೆಲುವನ್ನು ಕಂಡಿದೆ.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 194 ರನ್‌ ಕಲೆಹಾಕಿ ಭಾರತಕ್ಕೆ 195 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತ ಸಹ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 194 ರನ್‌ ಕಲೆಹಾಕಿತು.

    ಹೀಗೆ ಡ್ರಾ ಆದ ಪಂದ್ಯದಲ್ಲಿ ಸೂಪರ್‌ ಓವರ್‌ ಜಾರಿಗೆ ಬಂತು. ಭಾರತದ ಸೂಪರ್‌ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಕ್ರಮವಾಗಿ ನಾಯಕ ಜಿತೇಂದ್ರ ಶರ್ಮಾ ಹಾಗೂ ಅಶುತೋಶ್‌ ಶರ್ಮಾ ಡಕ್‌ಔಟ್‌ ಆಗುವ ಮೂಲಕ ಪೆವಿಲಿಯನ್‌ ಸೇರಿಕೊಂಡರು. ಈ ಮೂಲಕ ರಿಪಾನ್‌ ಎಸೆದ ಸೂಪರ್‌ ಓವರ್‌ನಲ್ಲಿ ಶೂನ್ಯಕ್ಕೆ ಆಗಿ 1 ರನ್‌ ಗುರಿ ನೀಡಿತು.

    ಅತ್ತ ಬಾಂಗ್ಲಾದೇಶ ಯಾಸಿರ್‌ ಅಲಿ ಸುಯಶ್‌ ಶರ್ಮಾ ಎಸೆದ ಮೊದಲ ಎಸೆತದಲ್ಲಿ ಲಾಂಗ್‌ಆನ್‌ನಲ್ಲಿ ನಮನ್‌ ಧೀರ್‌ಗೆ ಕ್ಯಾಚ್‌ ನೀಡಿ ಔಟ್‌ ಆದರು. ಬಳಿಕ ಅಕ್ಬರ್‌ ಅಲಿಗೆ ಎಸೆತ ಎಸೆದ ಸುಯಶ್‌ ವೈಡ್‌ ಎಸೆಯುವ ಮೂಲಕ ಒಂದು ಉಚಿತ ರನ್‌ ಬಿಟ್ಟುಕೊಟ್ಟರು. ಈ ಮೂಲಕ 1 ರನ್‌ ಟಾರ್ಗೆಟ್‌ ಮುಟ್ಟಿದ ಬಾಂಗ್ಲಾದೇಶ ಫೈನಲ್‌ಗೆ ಲಗ್ಗೆ ಇಟ್ಟಿತು.

    ಚನ್ನಪಟ್ಟಣ: ತಂದೆಯಿಂದಲೇ ಮಗಳ ಮೇಲೆ ಅತ್ಯಾಚಾರ; ರೆಡ್‌ಹ್ಯಾಂಡ್‌ ಆಗಿ ಪತ್ನಿಗೆ ಸಿಕ್ಕಿಬಿದ್ದ ಪಾಪಿ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search