Monday, November 2, 2026
spot_img
More
    spot_img
    HomeCrimeಶಿವಮೊಗ್ಗ ಜೈಲಿಗೆ ಹೋಗುವ ಬಾಳೆಗೊನೆಯಲ್ಲಿ ಗಾಂಜಾ, ಸಿಗರೇಟ್: ಎಸ್ಪಿ ಹೇಳಿದ್ದೇನು?

    ಶಿವಮೊಗ್ಗ ಜೈಲಿಗೆ ಹೋಗುವ ಬಾಳೆಗೊನೆಯಲ್ಲಿ ಗಾಂಜಾ, ಸಿಗರೇಟ್: ಎಸ್ಪಿ ಹೇಳಿದ್ದೇನು?

    ಕರ್ನಾಟಕದ ವಿವಿಧ ಜೈಲುಗಳ ಅಕ್ರಮ ಚಟುವಟಿಕೆ ಆಗಾಗ ಬಯಲಾಗುತ್ತಿದೆ. ಪರಪ್ಪನ ಅಗ್ರಹಾರದಲ್ಲಿ ಕೈದಿಗಳ ಐಷಾರಾಮಿ ಜೀವನ ಶೈಲಿ ಸುದ್ದಿಯಲ್ಲಿ ಇರುವಾಗಲೇ ಈಗ ಶಿವಮೊಗ್ಗ ಜೈಲು ಸುದ್ದಿಯಲ್ಲಿದೆ.

    ಶಿವಮೊಗ್ಗ ಎಸ್ಪಿ ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಜೈಲಿಗೆ ಗಾಂಜಾ ಮತ್ತು ಸಿಗರೇಟು ಪೂರೈಕೆ ಆಗುತ್ತಿದೆ ಎಂದು ಹೇಳಿದ್ದು, ಈ ಕುರಿತ ಫೋಟೋವನ್ನು ಸಹ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ.

    ಗುರುವಾರ ಬೆಳಗ್ಗೆ ಶಿವಮೊಗ್ಗ ಕೇಂದ್ರ ಕಾರಾಗೃಹದ ಎಸ್‌ಡಿಎ ಒಬ್ಬರನ್ನು ತಪಾಸಣೆ ಮಾಡಿದ್ದು, ಆತನು ಗಾಂಜಾ ಇಟ್ಟುಕೊಂಡಿರುವುದು ಕಂಡು ಬಂದಿರುತ್ತದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ತುಂಗನಗರ ಠಾಣೆ ಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿರುತ್ತದೆ ಮತ್ತು 170 ಗ್ರಾಂ ಮಾದಕ ವಸ್ತು ಗಾಂಜಾ ವಶ ಪಡಿಸಿಕೊಳ್ಳಲಾಗಿದೆ.

    ಹೇಗೆ ಸಾಗಣೆಯಾಗುತ್ತದೆ ಗಾಂಜಾ, ಸಿಗರೇಟ್?: ಜೈಲಿನೊಳಗೆ ವಿವಿಧ ಮಾದರಿಯಲ್ಲಿ ಗಾಂಜಾ, ಸಿಗರೇಟ್ ಸಾಗಣೆ ಮಾಡಲಾಗುತ್ತಿದೆ. ಈಗ ಬಾಳೆಗೊನೆಯ ದಿಂಡು ಕೊರೆದು ಅದರೊಳಗೆ ಮಾದಕ ವಸ್ತು ಪೂರೈಕೆ ಮಾಡುವುದು ಪತ್ತೆಯಾಗಿದೆ.

    ಎಸ್ಪಿ ತಮ್ಮ ಪೋಸ್ಟ್‌ನಲ್ಲಿ ದಿನಾಂಕ 19/11/25ರಂದು ಶಿವಮೊಗ್ಗ ಕೇಂದ್ರ ಕಾರಾಗೃಹಕ್ಕೆ ತೆಗೆದುಕೊಂಡು ಹೋಗುವ ಬಾಳೆಗೊನೆಯ ದಿಂಡು ಕೊರೆದು ಅದರೊಳಗೆ ಗಾಂಜಾ & ಸಿಗರೇಟು ಟೇಪ್‌ನಲ್ಲಿ ಸುತ್ತಿಟ್ಟಿರುವುದು ಪತ್ತೆ ಹಚ್ಚಲಾಗಿದೆ ಎಂದು ಹೇಳಿದ್ದಾರೆ.

    ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿರುತ್ತದೆ. 123 ಗ್ರಾಂ ಗಾಂಜಾ & 40 ಸಿಗರೇಟ್ ವಶಕ್ಕೆ ಪಡೆಯಲಾಗಿರುತ್ತದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

    ಕೆಲವು ದಿನಗಳ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಕೆ ಮಾಡುವ ವಿಡಿಯೋಗಳು ವೈರಲ್ ಆಗಿತ್ತು. ಆಗ ಸರ್ಕಾರ ತನಿಖೆಗೆ ಆದೇಶಿತ್ತು. ನಟ ದರ್ಶನ್ ರಾಜಾತಿಥ್ಯ ಪ್ರಕರಣದ ಬಳಿಕ ರಾಜ್ಯದ ಜೈಲುಗಳಲ್ಲಿ ನಿಯಮಗಳು ಇನ್ನಷ್ಟು ಕಠಿಣಗೊಳಿಸಲಾಗಿದೆ ಎಂದು ಸರ್ಕಾರ ಹೇಳುತ್ತಿದೆ.

    ಆದರೆ ಜೈಲಿಗೆ ಗಾಂಜಾ, ಸಿಗರೇಟು ಬೇರೆ ಬೇರೆ ರೀತಿಯಲ್ಲಿ ಸರಬರಾಜು ಆಗುತ್ತಿದೆ ಎಂಬುದು ತಿಳಿದುಬರುತ್ತಲೇ ಇದೆ. ಜೈಲಿನ ಸಿಬ್ಬಂದಿ ಕೈವಾಡವಿಲ್ಲದೇ ಇದು ನಡೆಯುವುದಿಲ್ಲ. ಸಿಬ್ಬಂದಿಗಳು ಇದರಲ್ಲಿ ಶಾಮೀಲಾಗಿರುವುದು ಜೈಲಿನ ವ್ಯವಸ್ಥೆಗೆ ಹಿಡಿದಿರುವ ಕನ್ನಡಿಯಾಗಿದೆ.

    ಪರಪ್ಪನ ಅಗ್ರಹಾರ ಜೈಲು ಮೊಬೈಲ್ ಬಳಕೆ ಪ್ರಕರಣ ಬೆಳಕಿಗೆ ಬಂದಾಗ ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿತ್ತು, ‘ಪರಪ್ಪನ ಅಗ್ರಹಾರದ ಜೈಲಿನ ನಾಲ್ಕು ಗೋಡೆಗಳ ನಡುವೆ ಐಷಾರಾಮಿ ರೆಸಾರ್ಟ್‌ ನಡೆಸುತ್ತಿದೆ Indian National Congress – Karnataka ಸರ್ಕಾರ!!’ ಎಂದು ಲೇವಡಿ ಮಾಡಿತ್ತು.

    ‘ಖೈದಿಗಳಿಂದ ಬೇಕಾಬಿಟ್ಟಿಯಾಗಿ ವಸೂಲಿ ಮಾಡಿ ಸೆರೆಮನೆಯನ್ನು ಅರಮನೆಯನ್ನಾಗಿಸಿ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಸಂಪೂರ್ಣ ಹಾಳುಮಾಡಿರುವುದೇ ಕಾಂಗ್ರೆಸ್‌ ಸರ್ಕಾರದ ಎರಡುವರೆ ವರ್ಷದ ಏಕೈಕ ಸಾಧನೆ’ ಎಂದು ಟೀಕಿಸಿತ್ತು.

    ‘ಕರ್ನಾಟಕದ ಘನತೆಯನ್ನು ತನ್ನ ನಿರ್ಲಜ್ಜ ಆಡಳಿತ ಹಾಗೂ ವ್ಯಾಪಕ ಭ್ರಷ್ಟಾಚಾರದಿಂದ ಕುಗ್ಗಿಸಿರುವ ಕಾಂಗ್ರೆಸ್‌ ತೊಲಗಿದರೆ ಮಾತ್ರ ಕರ್ನಾಟಕಕ್ಕೆ ಉಳಿಗಾಲ’ ಎಂದು ಬಿಜೆಪಿ ಹೇಳಿತ್ತು.

    ಇನ್ನೊಂದು ಪೋಸ್ಟ್‌ನಲ್ಲಿ ಬಿಜೆಪಿ, ‘ಪರಪ್ಪನ ಅಗ್ರಹಾರ ಜೈಲಿನಲ್ಲಿ Indian National Congress – Karnataka ಸರ್ಕಾರ ನೀಡುತ್ತಿರುವ ರೆಸಾರ್ಟ್ ಮಾದರಿಯ ಸೌಲಭ್ಯಗಳಿಗೆ ಕಡಿವಾಣ ಹಾಕಲು ಜೈಲು ಸುಧಾರಣಾ ವರದಿಯನ್ನು ತರಿಸಿಕೊಂಡು ಧೂಳು ಹಿಡಿಯಲು ಬಿಡಲಾಗಿದೆ’ ಎಂದು ಆರೋಪಿಸಿತ್ತು.

    ‘2014, 2017 ಮತ್ತು 2024ರ ವರದಿಗಳ ನಂತರವೂ ಗೃಹ ಸಚಿವ DR. G Parameshwara ಅವರು ಯಾವುದೇ ಸುಧಾರಣೆಯನ್ನು ಕಾರಾಗೃಹಗಳಲ್ಲಿ ತಂದಿಲ್ಲ. ಈಗ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾಕು ಎನ್ನುವಂತೆ ಮತ್ತೆ ಎಡಿಜಿಪಿ ಅವರ ನೇತೃತ್ವದಲ್ಲಿ ಮತ್ತೊಂದು ಸಮಿತಿ ರಚಿಸಿ ಕೈಕಟ್ಟಿ ಕೂತಿದ್ದಾರೆ’ ಎಂದು ದೂರಿತ್ತು.

    ‘Siddaramaiah ಸರ್ಕಾರಕ್ಕೆ ಸರ್ಕಾರಿ ಇಲಾಖೆಗಳಿಗಿಂತಲೂ ಪರಪ್ಪನ ಅಗ್ರಹಾರ “ರೆಸಾರ್ಟ್” ನಿಂದಲೇ ಅತಿಹೆಚ್ಚು ಆದಾಯ ಬರುತ್ತಿರುವಂತೆ ಕಾಣುತ್ತದೆ. ಹೀಗಾಗಿ ಜೈಲನ್ನೇ ರೆಸಾರ್ಟ್ ಆಗಿ ಬದಲಿಸಿದ್ದಾರೆ’ ಎಂದು ಆರೋಪ ಮಾಡಿತ್ತು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search