ನಿನ್ನೆ (ಡಿಸೆಂಬರ್ 20) ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಹಾಗೂ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಯುಐ ತೆರೆಗೆ ಅಪ್ಪಳಿಸಿದ್ದು, ಎಲ್ಲೆಡೆ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.
ಸಿನಿಮಾ ನೋಡಿ ಹೊರಬಂದ ಪ್ರೇಕ್ಷಕರು ಚಿತ್ರದ ಬಗ್ಗೆ ಉತ್ತಮ ವಿಮರ್ಶೆಗಳನ್ನು ನೀಡಿದ್ದು, ಚಿತ್ರ ಮೊದಲ ದಿನ ಬಹುತೇಕ ಕಡೆ ತುಂಬಿದ ಪ್ರದರ್ಶನಗಳನ್ನು ಕಾಣಲು ಸಹಕಾರಿಯಾಯಿತು.
ಇನ್ನು ಬಿಡುಗಡೆಗೂ ಮುನ್ನ ಉಪೇಂದ್ರ ನಿರ್ದೇಶನದ ಚಿತ್ರ ಎಂಬ ಟ್ಯಾಗ್‌ಲೈನ್ ಅಡಿ ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡಿದ್ದ ಯುಐ ಗೆಲ್ಲಬೇಕೆಂದರೆ ಇಂತಹದ್ದೇ ʼಮೌತ್ ಟಾಕ್ʼ ಸಿನಿಮಾಗೆ ಬೇಕಿತ್ತು. ಇದರಿಂದಾಗಿ ಯುಐ ಮೊದಲ ದಿನ ದಾಖಲೆಯ ಪ್ರದರ್ಶನವನ್ನು ಕಂಡಿದ್ದು, ಕಳೆದ ವರ್ಷ ತೆರೆಕಂಡಿದ್ದ ಬ್ಲಾಕ್‌ಬಸ್ಟರ್ ಕಾಟೇರ ಚಿತ್ರದ ದಾಖಲೆಯನ್ನು ಮುರಿದುಹಾಕಿದೆ.
ಹೌದು, ಬುಕ್‌ಮೈಶೋನಲ್ಲಿ ಕಾಟೇರ ಚಿತ್ರ ಮೊದಲ ದಿನ ಅತಿಹೆಚ್ಚು ಟಿಕೆಟ್ ಮಾರಾಟವಾದ ಕನ್ನಡ ಸಿನಿಮಾ ಎಂಬ ದಾಖಲೆಯನ್ನು ಬರೆದಿತ್ತು. ಕಾಟೇರ ಚಿತ್ರದ 1,05,000 ಟಿಕೆಟ್‌ಗಳು ಮೊದಲ ದಿನ ಬುಕ್‌ಮೈಶೋನಲ್ಲಿ ಮಾರಾಟವಾಗಿದ್ದವು.
ಇದೀಗ ಯುಐ ಚಿತ್ರದ ಒಟ್ಟು 1,10,000 ಟಿಕೆಟ್‌ಗಳು ಮೊದಲ ದಿನ ಬುಕ್‌ಮೈಶೋನಲ್ಲಿ ಮಾರಾಟವಾಗಿದ್ದು, ಕಾಟೇರ ಚಿತ್ರದ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆದಿದೆ.
ಇನ್ನು ಈ ಹಿಂದೆ ಬುಕ್‌ಮೈಶೋನಲ್ಲಿ ದಿನವೊಂದಕ್ಕೆ ನಿರ್ದಿಷ್ಟ ಚಿತ್ರವೊಂದರ ಎಷ್ಟು ಟಿಕೆಟ್ ಮಾರಾಟವಾಯಿತು ಎಂಬ ಮಾಹಿತಿ ಲಭ್ಯವಿರುತ್ತಿರಲಿಲ್ಲ. ಈ ಹೊಸ ಆಪ್ಷನ್ ಅನ್ನು ಇತ್ತೀಚೆಗೆ ಪರಿಚಯಿಸಲಾಗಿದ್ದು, ಈ ಆಪ್ಷನ್ ಬಂದಾಗಿನಿಂದ ಮೊದಲ ದಿನ ಅತಿಹೆಚ್ಚು ಟಿಕೆಟ್ ಮಾರಾಟವಾದ ಕನ್ನಡ ಚಿತ್ರಗಳ ಟಾಪ್ 5 ಪಟ್ಟಿ ಕೆಳಕಂಡಂತಿದೆ..
- 1. ಯುಐ – 1,10,000
- 2. ಕಾಟೇರ – 1,05,000
- 3. ಮಾರ್ಟಿನ್ – 94000
- 4. ಭೀಮ – 64000
- 5. ಬಘೀರ – 54000
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


