Saturday, August 8, 2026
spot_img
More
    spot_img
    HomeTop Storyಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಬರಲ್ಲ ಕಾವೇರಿ ನೀರು

    ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದು ಬರಲ್ಲ ಕಾವೇರಿ ನೀರು

    ಬೆಂಗಳೂರು: ಮುಖ್ಯ ಪೈಪ್‌ ಲೈನ್‌ ನೀರು ನಿಲುಗಡೆ ಕಾಮಗಾರಿ ನಡೆಯುತ್ತಿರುವ ಕಾರಣದಿಂದಾಗಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ( ಜನವರಿ 22 ) ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

    Advertisement

    ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ನಾಲ್ಕನೇ ಹಂತ 2ನೇ ಹೆಗ್ಗನಹಳ್ಳಿಯಿಂದ ಜಿಕೆವಿಕೆ ಕಡೆಗೆ ಸಾಗುವ 1800 ಮಿ.ಮೀ ವ್ಯಾಸದ ನೀರಿನ ಮುಖ್ಯ ಪೈಪ್‌ನ ನೀರು ನಿಲುಗಡೆ ಮಾಡುವ ಕಾಮಗಾರಿ ಆರಂಭವಾಗುತ್ತಿದ್ದು, ಇದರಿಂದ ಇಂದು ಹಲವು ಏರಿಯಾಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ.

    ಇನ್ನು ಇಂದು ( ಜನವರಿ 22 ) ಬೆಳಗ್ಗೆ 5 ಗಂಟೆಯಿಂದ ನಾಳೆ (ಜನವರಿ 23) ಬೆಳಗ್ಗೆ 5 ಗಂಟೆವರೆಗೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ಯಾವ್ಯಾವ ಪ್ರದೇಶಗಳಲ್ಲಿ ಈ ವ್ಯತ್ಯಯವಿರಲಿದೆ ಎಂಬ ಪಟ್ಟಿ ಮುಂದಿದೆ..

    ಆರ್.ಆರ್.ನಗರ, ಐಡಿಯಲ್ ಹೋಮ್ಸ್, ಕೆಂಚೇನಹಳ್ಳಿ, ಕೋಡಿಪಾಳ್ಯ, ಚನ್ನಸಂದ್ರ, ಕೆಂಗೇರಿ, ನಾಗದೇವನಹಳ್ಳಿ, ಮರಿಯಪ್ಪನಪಾಳ್ಯ, ನಾಗರಬಾವಿ, ಮಲ್ಲತ್ತಹಳ್ಳಿ, ಕೊಟ್ಟಿಗೆಪಾಳ್ಯ, ಹೇರೋಹಳ್ಳಿ, ಹೆಗ್ಗನಹಳ್ಳಿ, ಸುಂಕದಕಟ್ಟೆ, ರಾಜಗೋಪಾಲನಗರ, ಲಕ್ಷ್ಮೀ ದೇವಿನಗರ, ಲಗ್ಗೆರೆ, ಪೀಣ್ಯ ಕೈಗಾರಿಕಾ ಪ್ರದೇಶ, ಪೀಣ್ಯ, ಟಿ.ದಾಸರಹಳ್ಳಿ, ಹೆಚ್ಎಂಟಿ ಲೇಔಟ್, ಬಾಗಲಗುಂಟೆ, ಅಬ್ಬಿಗೆರೆ, ಬ್ಯಾಟರಾಯನಪುರ, ಅಮೃತಹಳ್ಳಿ, ಜಕ್ಕೂರು, ಕೆಂಪಾಪುರ, ಯಲಹಂಕ ಓಲ್ಡ್ & ನ್ಯೂಟೌನ್, ವಿದ್ಯಾರಣ್ಯಪುರ, ಸಿಂಗಾಪುರ, ಜಾಲಹಳ್ಳಿ, ಬಿಇಎಲ್ ರಸ್ತೆ, ಮುತ್ಯಾಲನಗರ, ಜೆ.ಪಿ.ಪಾರ್ಕ್, ದಾಸರಹಳ್ಳಿ, ಮಹಾಲಕ್ಷ್ಮಿಲೇಔಟ್, ಸುಬ್ರಹ್ಮಣ್ಯನಗರ, ಗಾಯತ್ರಿನಗರ, ಜೆ.ಸಿ.ನಗರ, ಕುರುಬರಹಳ್ಳಿ, ನಂದಿನಿ ಲೇಔಟ್, ಪ್ರಕಾಶನಗರ, ಗೊರಗುಂಟೆಪಾಳ್ಯ, ಕಾಮಾಕ್ಷಿಪಾಳ್ಯ, ಬಸವೇಶ್ವನಗರ, ಶಿವನಹಳ್ಳಿ, ಮಂಜುನಾಥನಗರ, ಶಂಕರಮಠ, ಮಹಾಲಕ್ಷ್ಮೀಪುರಂ, ಶಂಕರನಗರ, ಕಮಲಾನಗರ, ವಿಜಯನಗರ, ಆರ್‌ಪಿಸಿ ಲೇಔಟ್, ಚೋಳರಪಾಳ್ಯ, ಹಂಪಿನಗರ, ಅಗ್ರಹಾರ ದಾಸರಹಳ್ಳಿ, ರಾಜಾಜಿನಗರ 6ನೇ ಬ್ಲಾಕ್ ಪ್ರದೇಶ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading