ಜೈಪುರ: ರಾಜಸ್ತಾನ ವಿಧಾನಸಭೆಯಲ್ಲಿ ನಿನ್ನೆ (ಫೆಬ್ರವರಿ 21) ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರ ನಡುವೆ ಭಾರೀ ವಾಗ್ದಾಳಿಯೇ ನಡೆದಿದೆ.
ಸದನ ನಡೆಯುತ್ತಿದ್ದ ಸಂದರ್ಭದಲ್ಲಿ ಬಿಜೆಪಿಯ ಸಚಿವ ಅವಿನಾಶ್ ಗೆಹ್ಲೋಟ್ ಇಂದಿರಾ ಗಾಂಧಿ ಯೋಜನೆಯೊಂದರ ಬಗ್ಗೆ ಮಾತನಾಡುತ್ತಾ ಕಾಂಗ್ರೆಸ್ ಶಾಸಕರ ಕಡೆ ಕೈ ಜೋಡಿಸಿ ʼನಿಮ್ಮಜ್ಜಿ ಇಂದಿರಾಗಾಂಧಿಯ ಯೋಜನೆ….ʼ ಎಂದು ಹೇಳಲು ಆರಂಭಿಸಿದರು.
ಹೀಗೆ ʼನಿಮ್ಮಜ್ಜಿ ಇಂದಿರಾಗಾಂಧಿʼ ಎನ್ನುತ್ತಿದ್ದಂತೆ ರೊಚ್ಚಿಗೆದ್ದ ಕಾಂಗ್ರೆಸ್‌ನ ಶಾಸಕರು ವಾಗ್ದಾಳಿ ನಡೆಸಿದರು. ಕೆಲ ಕಾಲ ಸದನದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಸ್ಪೀಕರ್ ಸಹ ಪರಿಸ್ಥಿತಿಯನ್ನು ನಿಯಂತ್ರಿಸಲು ಯತ್ನಿಸಿದರು.
ಈ ಗಲಾಟೆಯ ಪರಿಣಾಮವಾಗಿ ಕಾಂಗ್ರೆಸ್‌ನ ಗೋವಿಂದ್ ಸಿಂಗ್ ದೋಟಸಾರ, ರಾಮಕೇಶ್ ಮೀನಾ, ಹಕೀಮ್ ಅಲಿ ಖಾನ್, ಅಮೀನ್ ಕಾಗ್ಜಿ, ಜಾಕಿರ್ ಹುಸೇನ್ ಗಸಾವತ್ ಮತ್ತು ಸಂಜಯ್ ಕುಮಾರ್ ಈ ಆರು ಶಾಸಕರನ್ನು ಸದನದಿಂದ ಅಮಾನತು ಮಾಡಲಾಗಿದ್ದು, ಕಾಂಗ್ರೆಸ್ ಶಾಸಕರು ಇದರ ವಿರುದ್ಧ ಧರಣಿ ಮಾಡಿದ್ದಾರೆ.
ಇನ್ನು ಇಂದಿರಾ ಗಾಂಧಿ ಅವರ ಬಗ್ಗೆ ಮಾತನಾಡುವಾಗ ಮಾಜಿ ಪ್ರಧಾನಿ ಅಥವಾ ಕಾಂಗ್ರೆಸ್ ನಾಯಕಿ ಎಂದು ಬಳಕೆ ಮಾಡುವ ಬದಲು ನಿಮ್ಮಜ್ಜಿ ಇಂದಿರಾಗಾಂಧಿ ಎಂದು ಅವಿನಾಶ್ ಗೆಹ್ಲೋಟ್ ನಾಲಿಗೆ ಹರಿಬಿಟ್ಟಿರುವ ಬಗ್ಗೆ ವಿವಿಧೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


