Tuesday, November 3, 2026
spot_img
More
    spot_img
    HomeChampions Trophy 2025ಇಂಗ್ಲೆಂಡ್‌ ಆಯಿತು ಈಗ ಬಾಂಗ್ಲಾ ಕೂಡ ಕೊಹ್ಲಿಯನ್ನು ತೊಡೆದುಹಾಕಿದೆ; ವಿರಾಟ್‌ ಫಾರ್ಮ್‌ ಬಗ್ಗೆ ರೈನಾ ಕಾಮೆಂಟ್‌

    ಇಂಗ್ಲೆಂಡ್‌ ಆಯಿತು ಈಗ ಬಾಂಗ್ಲಾ ಕೂಡ ಕೊಹ್ಲಿಯನ್ನು ತೊಡೆದುಹಾಕಿದೆ; ವಿರಾಟ್‌ ಫಾರ್ಮ್‌ ಬಗ್ಗೆ ರೈನಾ ಕಾಮೆಂಟ್‌

    ಬೆಂಗಳೂರು: ಸದ್ಯ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ನಡೆಯುತ್ತಿದ್ದು, ಭಾರತ ಟೂರ್ನಿಯಲ್ಲಿನ ತನ್ನ ಮೊದಲ ಪಂದ್ಯ ಗೆಲ್ಲುವ ಮೂಲಕ ಶುಭಾರಂಭ ಮಾಡಿದೆ.

    ಹೌದು, ಟೂರ್ನಿಯ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದ ಭಾರತ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 49.4 ಓವರ್‌ಗಳಲ್ಲಿ ವಿಕೆಟ್‌ ನಷ್ಟಕ್ಕೆ 228 ರನ್‌ ಕಲೆಹಾಕಿ 229 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತ 46.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 231 ರನ್‌ ಕಲೆಹಾಕಿತು. ಈ ಮೂಲಕ ಭಾರತ 6 ವಿಕೆಟ್‌ಗಳ ಗೆಲುವನ್ನು ಕಂಡಿತು.

    ಪಂದ್ಯದಲ್ಲಿ ಶುಬ್‌ಮನ್‌ ಗಿಲ್‌ ಶತಕ ಬಾರಿಸಿದರೆ, ರೋಹಿತ್‌ ಶರ್ಮಾ 41 ಹಾಗೂ ಕೆಎಲ್‌ ರಾಹುಲ್‌ 41 ರನ್‌ ಕಲೆಹಾಕಿದರು. ಆದರೆ ವಿರಾಟ್‌ ಕೊಹ್ಲಿ ಮಾತ್ರ 38 ಎಸೆತಗಳನ್ನು ಎದುರಿಸಿ 22 ರನ್‌ ಕಲೆಹಾಕಿದರು. ಈ ಮೂಲಕ ವಿರಾಟ್‌ ಕೊಹ್ಲಿ ರನ್‌ ಕಲೆಹಾಕಲು ಪರದಾಡಿದರು.

    ಹೀಗೆ ವಿರಾಟ್‌ ಕೊಹ್ಲಿ ವಿಫಲವಾಗಿರುವುದರ ಕುರಿತು ಭಾರತದ ಮಾಜಿ ಕ್ರಿಕೆಟಿಗ ಸುರೇಶ್‌ ರೈನಾ ಮಾತನಾಡಿದ್ದು, “ವಿರಾಟ್‌ ಕೊಹ್ಲಿ ಫಾರ್ಮ್‌ ತಂಡಕ್ಕೆ ಕಾಳಜಿಯಾಗಿದೆ. ಈ ರೀತಿ ಕೊಹ್ಲಿ ಔಟ್‌ ಆಗಿದ್ದನ್ನು ನಾವು ಕಂಡೇ ಇಲ್ಲ. ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲಿ ಆದಿಲ್‌ ರಶೀದ್‌ ಎದುರಿಸುವಲ್ಲಿ ವಿಫಲರಾದ ಕೊಹ್ಲಿಯನ್ನು ಬಾಂಗ್ಲಾದೇಶ ಸಹ ತೊಡೆದುಹಾಕಿತು” ಎಂದು ಹೇಳಿದರು.

    ಇನ್ನು ಇದೇ ಭಾನುವಾರ (ಫೆಬ್ರವರಿ 23) ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಕೊಹ್ಲಿ ಉತ್ತಮ ಪ್ರದರ್ಶನ ನೀಡಿ ಟೀಕಾಕಾರರ ಬಾಯಿ ಮುಚ್ಚಿಸುತ್ತಾರಾ ಎಂಬುದನ್ನು ನೋಡಬೇಕಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search