ಬೆಂಗಳೂರು: ತೆಲುಗಿನಲ್ಲಿ ಲೀಡರ್, ಫಿದಾ ರೀತಿಯ ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನಿರ್ದೇಶಿಸಿ ಕ್ಲಾಸ್ ನಿರ್ದೇಶಕ ಎನಿಸಿಕೊಂಡಿರುವ ಶೇಖರ್ ಕಮ್ಮುಲ ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ.
ಕುಬೇರಾ ( kuberaa ) ಎಂಬ ಚಿತ್ರವನ್ನು ಶೇಖರ್ ಕಮ್ಮುಲ ನಿರ್ದೇಶಿಸಿದ್ದು, ಚಿತ್ರದಲ್ಲಿ ನಾಯಕನಾಗಿ ಧನುಷ್, ನಾಯಕಿಯಾಗಿ ರಶ್ಮಿಕಾ ಮಂದಣ್ಣ ಹಾಗೂ ತೆಲುಗಿನ ನಾಗಾರ್ಜುನ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಶ್ರೀಮಂತ ಹಾಗೂ ಬಡವನೋರ್ವನ ನಡುವೆ ನಡೆಯುವ ಬೆಕ್ಕು – ಇಲಿಯಾಟದ ಚಿತ್ರಕಥೆಯನ್ನೊಂದಿರುವ ಕುಬೇರಾ ಒಳ್ಳೆಯ ಸಂದೇಶವಿರುವ ಸಿನಿಮಾ ಎಂದು ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಕುಬೇರಾ ಚಿತ್ರಕ್ಕೆ 120 ಕೋಟಿ ಬಂಡವಾಳ ಹೂಡಿಕೆ ಮಾಡಲಾಗಿದ್ದು, ವಿಶ್ವದಾದ್ಯಂತ ಮೊದಲ ದಿನ 30.05 ಕೋಟಿ ರೂ ಗ್ರಾಸ್ ಕಲೆಕ್ಷನ್ ಮಾಡಿದೆ. ಎರಡನೇ ದಿನ 22.77 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಮೂಲಕ ಮೊದಲೆರಡು ದಿನಗಳಲ್ಲಿ ಕುಬೇರಾ 52.82 ಕೋಟಿ ರೂ ಗ್ರಾಸ್ ಕಲೆಕ್ಷನ್ ಮಾಡಿದೆ.
ನೆಟ್ ಕಲೆಕ್ಷನ್ ವಿಚಾರಕ್ಕೆ ಬಂದರೆ ಮೊದಲ ದಿನ 15.25 ಕೋಟಿ ರೂ ಗಳಿಕೆ ಮಾಡಿದ್ದರೆ, ಎರಡನೇ ದಿನ 11.55 ಕೋಟಿ ರೂ ಮಾಡಿದೆ. ಈ ಮೂಲಕ ಎರಡು ದಿನಗಳಲ್ಲಿ 26.80 ನೆಟ್ ಕಲೆಕ್ಷನ್ ಮಾಡಿರುವ ಕುಬೇರಾ 66 ಕೋಟಿ ನೆಟ್ ಕಲೆಕ್ಷನ್ ಮಾಡಿದರೆ ಲಾಭ ಗಳಿಸಲು ಆರಂಭಿಸಲಿದೆ. ಅಲ್ಲಿಗೆ ಕುಬೇರಾ ಹಿಟ್ ಟ್ಯಾಗ್ ಪಡೆಯಲು ಇನ್ನೂ 40 ಕೋಟಿ ನೆಟ್ ಕಲೆಕ್ಷನ್ ಮಾಡಬೇಕಾಗಿದೆ.
ಕೃಷಿ ಕನ್ನಡ ಎಐ ವೆಬ್‌ಸೈಟ್‌ಗಾಗಿ ಈ ಲಿಂಗ್ ಕ್ಲಿಕ್ ಮಾಡಿ
200% ಮಾದಪ್ಪನಾಣೆಗೂ ಡಿಕೆಶಿ ಸಿಎಂ ಆಗ್ತಾರೆ: ಶಾಸಕ ಇಕ್ಬಾಲ್ ಭವಿಷ್ಯ | DK Shivakumar
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


