ಲೀಡ್ಸ್: ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ( india vs england ) ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಮುಕ್ತಾಯವಾಗಿದ್ದು, ಭಾರತ 6 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಯಶಸ್ವಿ ಜೈಸ್ವಾಲ್, ನಾಯಕ ಶುಭ್‌ಮನ್ ಗಿಲ್ ಹಾಗೂ ರಿಷಭ್ ಪಂತ್ ಶತಕದ ನೆರವಿನಿಂದ 471 ರನ್ ಕಲೆಹಾಕಿತು. ಅತ್ತ ಇಂಗ್ಲೆಂಡ್ 465 ರನ್‌ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿದೆ.
ಭಾರತದ ಮೊದಲ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಆರಂಭಿಕರಾಗಿ ಯಶಸ್ವಿ ಜೈಸ್ವಾಲ್ ಹಾಗೂ ಕೆಎಲ್ ರಾಹುಲ್ ಕಣಕ್ಕಿಳಿದರು. ಕೆಎಲ್ ರಾಹುಲ್ 42 ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ 101 ರನ್ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ ಡಕ್‌ಔಟ್ ಆದರೆ, ಶುಭ್‌ಮನ್ ಗಿಲ್ 147, ರಿಷಭ್ ಪಂತ್ 134 ರನ್ ಬಾರಿಸಿ ಅಬ್ಬರಿಸಿದರು. ಗಿಲ್ ಹಾಗೂ ಪಂತ್ ಬಳಿಕ ಕಣಕ್ಕಿಳಿದ ಆಟಗಾರರು ಪೆವಿಲಿಯನ್ ಪರೇಡ್ ನಡೆಸಿದ ಪರಿಣಾಮ ಉತ್ತಮ ಆರಂಭ ಪಡೆದುಕೊಂಡಿದ್ದ ಭಾರತ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವಿಫಲತೆಯಿಂದ ಇನ್ನೂ ದೊಡ್ಡ ಇನ್ನಿಂಗ್ಸ್ ಕಟ್ಟಬಹುದಾದ ಅವಕಾಶ ಕಳೆದುಕೊಂಡಿತು.
430 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ 471 ರನ್‌ಗೆ ಆಲ್‌ಔಟ್ ಆಯಿತು. ಗಿಲ್ ಔಟ್ ಆದ ಬಳಿಕ ಕಣಕ್ಕಿಳಿದ ಕರುಣ್ ನಾಯರ್ ಡಕ್‌ಔಟ್ ಆದರೆ, ರವೀಂದ್ರ ಜಡೇಜಾ 11 ರನ್, ಶಾರ್ದೂಲ್ ಠಾಕೂರ್ 1, ಜಸ್‌ಪ್ರೀತ್ ಬುಮ್ರಾ ಡಕ್‌ಔಟ್, ಪ್ರಸಿದ್ಧ್ ಕೃಷ್ಣ 1 ಹಾಗೂ ಮೊಹಮ್ಮದ್ ಸಿರಾಜ್ ಅಜೇಯ 3 ರನ್ ಗಳಿಸಿದರು.
ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 4 ವಿಕೆಟ್, ಬ್ರೈಡನ್ ಕಾರ್ಸ್ 3 ವಿಕೆಟ್, ಜೋಶ್ ಟಂಗ್ ಹಾಗೂ ಬೆನ್ ಸ್ಟೋಕ್ಸ್ ತಲಾ ಒಂದೊಂದು ವಿಕೆಟ್ ಪಡೆದರು.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಜಾಕ್ ಕ್ರಾವ್ಲಿ 4, ಬೆನ್ ಡಕೆಟ್ 62 ರನ್ ಗಳಿಸಿದರು. ಇನ್ನುಳಿದಂತೆ ಓಲ್ಲಿ ಪೋಪ್ 106 ರನ್, ಜೋ ರೂಟ್ 28, ಹ್ಯಾರಿ ಬ್ರೂಕ್ 99, ಬೆನ್ ಸ್ಟೋಕ್ಸ್ 20, ಜೇಮಿ ಸ್ಮಿತ್ 40, ಕ್ರಿಸ್ ವೋಕ್ಸ್ 38, ಬ್ರೈಡನ್ ಕಾರ್ಸ್ 22, ಜೋಶ್ ಟಂಗ್ 11 ಹಾಗೂ ಶೋಯೆಬ್ ಬಷೀರ್ ಅಜೇಯ 1 ರನ್ ಕಲೆಹಾಕಿದರು.
ಭಾರತದ ಪರ ಜಸ್‌ಪ್ರೀತ್ ಬುಮ್ರಾ 5 ವಿಕೆಟ್, ಪ್ರಸಿದ್ಧ್ ಕೃಷ್ಣ 3 ವಿಕೆಟ್ ಹಾಗೂ ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು.
ಕೃಷಿ ಎಐ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Kuberaa Boxoffice Collection: 120 ಕೋಟಿ ಬಜೆಟ್‌ನ ಕುಬೇರಾ 2 ದಿನಕ್ಕೆ ಗಳಿಸಿದ್ದೆಷ್ಟು?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


