ಟೆಹ್ರಾನ್: ಅಮೇರಿಕಾ ದಾಳಿಗೂ ಕೊಂಚವೂ ಜಗ್ಗದ ಇರಾನ್ ದೇಶ ಇಸ್ರೇಲ್ ಮೇಲೆ ದಾಳಿ ( iran – israel conflict ) ಮುಂದುವರಿಸಿದೆ. ಇರಾನ್ನ 3ಕ್ಕೂ ಹೆಚ್ಚು ಸ್ಥಳಗಳ ಮೇಲೆ ಅಮೇರಿಕಾ 30ಕ್ಕೂ ಅಧಿಕ ಖಂಡಾಂತರ ಕ್ಷಿಪಣಿಗಳಿಂದ ದಾಳಿ ನಡೆಸಿದೆ.
ಅಮೇರಿಕಾ ದಾಳಿ ಬಳಿಕ ಇರಾನ್ನ ಮೊದಲ ಪ್ರತೀಕಾರ ಇದಾಗಿದ್ದು, ಇಸ್ರೇಲ್ ಮೇಲೆ ಇರಾನ್ನ ಮಿಸೈಲ್ಗಳು ಅಪ್ಪಳಿಸಿವೆ. ಇರಾನ್ ಮಿಸೈಲ್ಗಳು ಅಪ್ಪಳಿಸುತ್ತಿದ್ದಂತೆ ಇಸ್ರೇಲ್ನ ಕೆಲವು ಭಾಗಗಳಲ್ಲಿ ಸೈರನ್ ಮೊಳಗಿದೆ. ನಾಗರಿಕರನ್ನು ಸುರಕ್ಷಿತ ಸ್ಥಳಗಳು ಹಾಗೂ ಬಂಕರ್ಗಳಿಗೆ ಸ್ಥಳಾಂತರಿಸಲಾಗಿದೆ. ಮುಂದಿನ ಸೂಚನೆ ಬರುವವರೆಗೂ ಬಂಕರ್ಗಳಿಂದ ಆಚೆ ಬರದಂತೆ ಸೂಚನೆ ನೀಡಲಾಗಿದೆ.
ಇನ್ನು ನಾಗರಿಕರನ್ನು ಗುರಿಯಾಗಿಸಿ ಇರಾನ್ ನಡೆಸಿದ ದಾಳಿಯಲ್ಲಿ 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಮೇರಿಕಾ ದಾಳಿಗೂ ಜಗ್ಗದ ಇರಾನ್, ಇಸ್ರೇಲ್ನ ಹೈಫಾ ನಗರ, ರಾಜಧಾನಿ ಟೆಲ್ ಅವೀವ್, ಜೆರುಸೇಲಂ ಸೇರಿದಂತೆ 10ಕ್ಕೂ ಹೆಚ್ಚು ನಗರಗಳ ಮೇಲೆ ಮಿಸೈಲ್ ದಾಳಿ ಮಾಡಿದೆ. ಮಿಸೈಲ್ ದಾಳಿಯಿಂದ ಇಸ್ರೇಲ್ನ ಗಗನಚುಂಬಿ ಕಟ್ಟಡಗಳೇ ಧ್ವಂಸವಾಗಿದ್ದು, ಇರಾನ್ ಮೇಲೆ ಇಸ್ರೇಲ್ ಮತ್ತೆ ದಾಳಿ ನಡೆಸಲು ಸಜ್ಜಾಗಿದೆ.
ಇನ್ನು ಇರಾನ್ ಹಾಗೂ ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧಕ್ಕೆ ಮಧ್ಯಪ್ರವೇಶಿಸಿರುವ ಅಮೇರಿಕಾವು ಇರಾನ್ನ 3 ಪರಮಾಣು ಸ್ಥಾವರಗಳ ಮೇಲೆ ಬಾಂಬ್ ದಾಳಿ ನಡೆಸಿದೆ. ಈ ಬಗ್ಗೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.
ನಮ್ಮ ಎಲ್ಲಾ ವಿಮಾನಗಳು ಇರಾನ್ನಿಂದ ಸುರಕ್ಷಿತವಾಗಿ ಹೊರಗೆ ಬಂದಿವೆ. ನಮ್ಮ ಸೈನಿಕರು ಕೂಡ ಸುರಕ್ಷಿತವಾಗಿ ಮನೆಗೆ ವಾಪಸ್ ಆಗಿದ್ದಾರೆ. ಅಮೇರಿಕಾದ ಯೋಧರಿಗೆ ಅಭಿನಂದನೆಗಳು. ಜಗತ್ತಿನಲ್ಲಿ ಬೇರೆ ಯಾವ ಸೈನ್ಯವೂ ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಕೃಷಿ ಎಐ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಕೊಳ್ಳೇಗಾಲ | ಹೂತಿದ್ದ ಹೆಣದ ಕೈ ಆಚೆ ಬಂದ ಕೇಸ್ಗೆ ಟ್ವಿಸ್ಟ್: ಪೊಲೀಸರು ಬಿಚ್ಚಿಟ್ರು ಸತ್ಯಾಂಶ; Kollegala
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


