Friday, November 6, 2026
spot_img
More
    spot_img
    HomeStateDistrictಕೊಳ್ಳೇಗಾಲ | ಹೂತಿದ್ದ ಹೆಣದ ಕೈ ಆಚೆ ಬಂದ ಕೇಸ್‌ಗೆ ಟ್ವಿಸ್ಟ್: ಪೊಲೀಸರು ಬಿಚ್ಚಿಟ್ರು ಸತ್ಯಾಂಶ;...

    ಕೊಳ್ಳೇಗಾಲ | ಹೂತಿದ್ದ ಹೆಣದ ಕೈ ಆಚೆ ಬಂದ ಕೇಸ್‌ಗೆ ಟ್ವಿಸ್ಟ್: ಪೊಲೀಸರು ಬಿಚ್ಚಿಟ್ರು ಸತ್ಯಾಂಶ; Kollegala

    ಚಾಮರಾಜನಗರ: ಜಿಲ್ಲೆಯ ಕೊಳ್ಳೇಗಾಲ ( Kollegala ) ತಾಲೂಕಿನ ಸಮೀಪದಲ್ಲೇ ಇರುವ ಸುವರ್ಣಾವತಿ ನದಿ ತೀರದಲ್ಲಿ ಮರಳಿನಿಂದಾಚೆ ಶವದ ಕೈ ಆಚೆ ಬಂದಿತ್ತು. ಬಳಿಕ ತಾಲೂಕಿನ ಬಸ್ತೀಪುರ ಗ್ರಾಮದಲ್ಲಿ ವಾಸವಿದ್ದ 29 ವರ್ಷದ ಸೋನಾಕ್ಷಿ ಎಂಬ ಮಹಿಳೆ ಒಂದು ವಾರದಿಂದ ಕಾಣಿಸುತ್ತಿಲ್ಲ ಎಂಬ ವಿಷಯವನ್ನಾಧರಿಸಿ ಸೋನಾಕ್ಷಿ ತಾಯಿಗೆ ಶವದ ಮೈ ಮೇಲಿದ್ದ ಚಿನ್ನಾಭರಣವನ್ನು ತೋರಿಸಿದಾಗ ಅದು ಸೋನಾಕ್ಷಿಯದ್ದೇ ಎಂದು ಗುರುತಿಸಿದರು.

    ಬಳಿಕ ಸಿಮ್ಸ್‌ ಆಸ್ಪತ್ರೆಯಲ್ಲಿದ್ದ ಮಗಳ ಶವವನ್ನೂ ಸಹ ತಾಯಿ ಗುರುತಿಸಿದ ಬಳಿಕ ಕೊಲೆ ಹಾಗೂ ಸಾಕ್ಷ್ಯನಾಶ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಇನ್ನು ಹೆಣ ಸಿಕ್ಕ ಜಾಗದಲ್ಲಿ ಸುತ್ತ ಪೂಜೆ ನಡೆದ ಅವಶೇಷಗಳಿದ್ದ ಕಾರಣ ಮಾಟ – ಮಂತ್ರದ ಅನುಮಾನಗಳೂ ಸಹ ಹುಟ್ಟಿಕೊಂಡಿದ್ದವು.

    ಕೊಳ್ಳೇಗಾಲದ ಮೋಳೆ ಗ್ರಾಮದ ವಿಜಯ್‌ಕುಮಾರ್‌ ಎಂಬಾತನನ್ನು ವಿವಾಹವಾಗಿದ್ದ ಸೋನಾಕ್ಷಿ ತನ್ನ ಪತಿ ಹಾಗೂ ತಾಯಿಯ ಜೊತೆ ಜಗಳ ಮಾಡಿಕೊಂಡು ಫೆಬ್ರವರಿಯಲ್ಲಿ ಪತಿ ಮನೆ ತೊರೆದಿದ್ದಳು. ಈ ಕುರಿತು ಪತಿ ದೂರನ್ನೂ ಸಹ ದಾಖಲಿಸಿದ್ದರು. ಜೂನ್‌ 12ರಂದು ಸೋನಾಕ್ಷಿಯನ್ನು ಪತ್ತೆ ಹಚ್ಚಿದ ಪೊಲೀಸರು ಆಕೆಯನ್ನು ಪತಿ ಹಾಗೂ ತಾಯಿಗೆ ಹಸ್ತಾಂತರಿಸಿ ಕೇಸ್‌ ಕ್ಲೋಸ್‌ ಮಾಡಿದ್ದರು.

    ಆದರೆ ಠಾಣೆಯಿಂದ ಹೊರಬಂದ ಸೋನಾಕ್ಷಿ ತಾಯಿ ಹಾಗೂ ಪತಿ ಜತೆ ಹೋಗದೇ ಪತಿಯ ಊರು ಮೋಳೆಗೆ ಹೋಗದೇ ಬಸ್ತೀಪುರಕ್ಕೆ ಹೋಗಿ ಪ್ರತ್ಯೇಕವಾಗಿ ವಾಸಿಸತೊಡಗಿದ್ದಳು. ಸೋನಾಕ್ಷಿ ಕಾಣೆಯಾಗಿದ್ದ ಸಂದರ್ಭದಲ್ಲಿ ಪೊಲೀಸರು ಆಕೆಯನ್ನು ಪತ್ತೆ ಹಚ್ಚಲು ಕಾಲ್‌ ರೆಕಾರ್ಡಿಂಗ್‌ ಸಹಾಯ ಪಡೆದಿದ್ದ ಪೊಲೀಸರಿಗೆ ಆಕೆ ಮಾದೇಶ ಎಂಬಾತನ ಜೊತೆ ಹೆಚ್ಚು ಮಾತನಾಡಿದ್ದು ಕಂಡುಬಂದಿತ್ತು. ಆತನ ಸಹಾಯವನ್ನೇ ಪಡೆದು ಟಿ ನರಸೀಪುರದಲ್ಲಿ ವಾಸವಿದ್ದದ್ದನ್ನು ಪತ್ತೆ ಹಚ್ಚಿದ್ದರು.

    ಹೀಗಾಗಿ ಈಗ ಮಾದೇಶನನ್ನು ವಿಚಾರಣೆ ನಡೆಸಿದಾಗ ಆತನೇ ಸೋನಾಕ್ಷಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಸೋನಾಕ್ಷಿಗೆ ಆಕೆಯ ಪತಿ ಹಾಗೂ ತಾಯಿಯ ಜತೆ ಜೀವಿಸುವುದು ಇಷ್ಟವಿರಲಿಲ್ಲ. ಹೀಗಾಗಿ ಆಕೆ ದೂರ ಹೋಗಿದ್ದಳು. ಆದರೆ ಮಾದೇಶ ಆಕೆಯನ್ನು ಪತ್ತೆ ಹಚ್ಚಲು ಸಹಾಯ ಮಾಡಿದ ಕಾರಣಕ್ಕೆ ಸೋನಾಕ್ಷಿ ಜಗಳವಾಡಿದ್ದಳು. ಈ ಸಂದರ್ಭದಲ್ಲಿ ಮಾದೇಶ ತಳ್ಳಿದ ರಭಸಕ್ಕೆ ತಲೆ ಗೋಡೆಗೆ ಡಿಕ್ಕಿಯಾಗಿ ಸೋನಾಕ್ಷಿ ಸಾವನ್ನಪ್ಪಿದ್ದಾಳೆ ಎಂಬುದು ಈ ತನಿಖೆವರೆಗೆ ತಿಳಿದುಬಂದಿದೆ ಎನ್ನುತ್ತಾರೆ ಪೊಲೀಸರು. ಹಾಗೂ ಇಲ್ಲಿನ ಜನರು ನದಿ ತೀರದಲ್ಲಿ ಪೂಜೆ ಮಾಡುವುದು ಸಾಮಾನ್ಯ. ಆ ಪೂಜೆಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದೂ ಸಹ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್‌ ಮಾಡಿ

    ವಸತಿ ಇಲಾಖೆ ಅಕ್ರಮ ವಿಚಾರ: ಸಿಎಂ ಸಿದ್ದುಗೆ ಬಹಿರಂಗ ಸವಾಲು ಹಾಕಿದ ಆರ್‌ ಆಶೋಕ್‌; R Ashok


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search