ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಬಿಆರ್ ಪಾಟೀಲ್ ಹಾಗೂ ಜಮೀರ್ ಅಹ್ಮದ್ ಖಾನ್ ಆಡಿಯೊ ವಿವಾದದ ಕುರಿತು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ( hd kumaraswamy ) ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಬಿಆರ್ ಪಾಟೀಲ್ ಆಡಿಯೊದಲ್ಲಿರುವುದು ತಮ್ಮದೇ ಧ್ವನಿ ತಾನು ತನಿಖೆ ಎದುರಿಸಲು ಸಿದ್ಧ ಎನ್ನುತ್ತಿದ್ದು, ಸರ್ಕಾರ ಅಕ್ರಮ ನಡೆದೇ ಇಲ್ಲ ಎನ್ನುತ್ತಿದೆ. ಬಿಆರ್ ಪಾಟೀಲ್ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಜತೆ ಮಾತನಾಡಿ ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ ಅಕ್ರಮ ನಡೆದಿದೆ, ಹಣ ನೀಡಿದವರಿಗೆ ಮಾತ್ರ ಮನೆ ಮಂಜೂರಾಗಿದೆ ಎಂದು ಆರೋಪಿಸಿದ್ದರು, ತಾನು ಮಾತನಾಡಿದರೆ ಸರ್ಕಾರ ಅಲುಗಾಡಿ ಹೋಗುತ್ತೆ ಎಂದು ಎಚ್ಚರಿಕೆ ನೀಡಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಎಚ್‌ಡಿ ಕುಮಾರಸ್ವಾಮಿ ಸರ್ಕಾರ ಅಕ್ರಮ ನಡೆದಿಲ್ಲ ಎನ್ನುವುದನ್ನು ಬಿಟ್ಟರೆ ಎನ್ನೇನು ಹೇಳಲು ಸಾಧ್ಯ? ಸರ್ಕಾರದಲ್ಲಿ ಏನು ನಡೆಯುತ್ತಿದೆ ಎಂದು ಎಲ್ಲ 224 ಶಾಸಕರಿಗೂ ಗೊತ್ತಿದೆ, ಶಾಸಕರ ಕ್ಷೇತ್ರಕ್ಕೆ ಹಣ ತೆಗೆದುಕೊಂಡು ಹೋಗಬೇಕು ಎಂದರೆ ಎಲ್ಲ ಇಲಾಖೆಯಲ್ಲೂ ಪೇಮೆಂಟ್ ಆಗಲೇಬೇಕು, ನಾಚಿಕೆ ಇಲ್ಲ ಸಿದ್ದರಾಮಯ್ಯಗೆ ಪಕ್ಕದಲ್ಲಿ ಕೂರಿಸಿಕೊಳ್ಳುತ್ತಾರೆ ಎಂದು ಪರೋಕ್ಷವಾಗಿ ಜಮೀರ್‌ಗೆ ಟಾಂಗ್ ಕೊಟ್ಟರು.
ಕೃಷಿ ಎಐ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
ನನಗೆ ಯಾವನಿಗೂ ಉತ್ತರ ಕೊಡೋಕೆ ಇಷ್ಟ ಇಲ್ಲ: ಸುದೀಪ್‌ಗೆ ಡಿಕೆಶಿ ಏಕವಚನದಲ್ಲೇ ತಿರುಗೇಟು; DK Shivakumar
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


