ಹೊಸದಿಲ್ಲಿ: ಎಲ್ಲ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆಯ ಕುರಿತು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿರುತ್ತಿತ್ತು.
ಇಂದು ( ಜುಲೈ 22 ) ಸುಪ್ರೀಂ ಕೋರ್ಟ್‌ನಲ್ಲಿ ಹೈಕೋರ್ಟ್ ನೀಡಿರುವ ಜಾಮೀನು ವಿರುದ್ಧ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿತ್ತು. ಸದ್ಯ ಇದರಲ್ಲಿ ದರ್ಶನ್ ಪರ ವಕೀಲರ ವಾದ ಮಾತ್ರ ಬಾಕಿಯಿದ್ದು, ವಕೀಲ ಕಪಿಲ್ ಸಿಬಲ್ ವಾದ ಮಂಡಿಸಲಿದ್ದಾರೆ ಎನ್ನಲಾಗಿತ್ತು.
ಆದರೆ ಕಪಿಲ್ ಸಿಬಲ್ ಮಾತ್ರ ವಾದ ಮಂಡಿಸಲು ಬರಲೇ ಇಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಇತರೆ ವಕೀಲರು ಕಪಿಲ್ ಸಿಬಲ್ ನ್ಯಾಯಾಲಯಕ್ಕೆ ಗೈರಾಗಿದ್ದು, ಈ ಕಾರಣದಿಂದ ಅವರು ಅಲಭ್ಯರಾಗಿದ್ದಾರೆ ಎಂದಿದ್ದಾರೆ. ಸದ್ಯ ಕಪಿಲ್ ಸಿಬಲ್‌ರ ಈ ನಡೆ ನೋಡಿದರೆ ಉದ್ದೇಶಪೂರ್ವಕವಾಗಿಯೇ ಹಿಂದೆ ಸರಿದರಾ ಎಂಬ ಅನುಮಾನವೂ ಮೂಡಿದೆ.
ಇನ್ನು ಕಪಿಲ್ ಸಿಬಲ್ ಗೈರಾಗಿದ್ದನ್ನು ಕಂಡು ನ್ಯಾಯಾಲಯಕ್ಕೆ ತೆರಳಿದ್ದ ದರ್ಶನ್ ಸಹಚರರು ಪರದಾಡಿದ್ದು, ಕೊನೆಗೆ ಸಿದ್ಧಾರ್ಥ್ ದವೆ ಅವರನ್ನು ನೇಮಿಸಿಕೊಂಡಿತು. ಆದರೆ ಪ್ರಕರಣದ ಕುರಿತು ಅಧ್ಯಯನ ಮಾಡಲು ಕಾಲಾವಕಾಶ ಬೇಕಿದ್ದು, ನಾಡಿದ್ದು ( ಜುಲೈ 24 ) ತನಕ ಗಡುವು ನೀಡಿದೆ. ಅದೇ ದಿನ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.
ಯೆಮೆನ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕೇರಳ ಮೂಲದ ನರ್ಸ್ ನಿಮಿಷಾ ಪ್ರಿಯಾಗೆ ಬಿಗ್ ರಿಲೀಫ್
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


