Tuesday, November 3, 2026
spot_img
More
    spot_img
    HomeLatest newsಪದವೀಧರರಿಗೆ ಉದ್ಯೋಗಾವಕಾಶ

    ಪದವೀಧರರಿಗೆ ಉದ್ಯೋಗಾವಕಾಶ

    ಬೆಂಗಳೂರು: ಭಾರತ-ಆಫ್ರಿಕಾ ನಡುವಿನ ಒಪ್ಪಂದ ಮಹತ್ವದ ಹೆಗ್ಗುರುತು ಮೂಡಿಸಿದೆ, ಕರ್ನಾಟಕದ ಸರ್ಕಾರಿ ಸ್ವಾಮ್ಯದ ಸರ್ಕಾರಿ ಉಪಕರಣ ಮತ್ತು ತರಬೇತಿ ಕೇಂದ್ರವನ್ನು (ಜಿಟಿಟಿಸಿ) ನಮೀಬಿಯಾ ಈಗ ತನ್ನ ತಾಂತ್ರಿಕ ಜ್ಞಾನ ಮತ್ತು ವೃತ್ತಿಪರ ತರಬೇತಿ ಪಾಲುದಾರನಾಗಿ ಆಯ್ಕೆ ಮಾಡಿದೆ.

    ಭಾನುವಾರ ವಿಕಾಸಸೌಧದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್‌ ಅವರ ಸಮ್ಮುಖದಲ್ಲಿ ಜಿಟಿಟಿಸಿಯ ಡಾ.ವೈ.ಕೆ.ದಿನೇಶ್ ಕುಮಾರ್ ಮತ್ತು ಆಫ್ರಿಕಾ ಇ೦ಡಿಯಾ ಎಕನಾಮಿಕ್ ಫೌಂಡೇಶನ್ (ಎಐಐಎಫ್ ) ಪ್ರಧಾನ ಕಾರ್ಯದರ್ಶಿ ಅನಿಲ್‌ ಶಿಂಧೆ ಅವರು ಸಹಯೋಗವನ್ನು ಔಪಚಾರಿಕಗೊಳಿಸುವ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿದರು.

    ಈ ಕುರಿತು ಮಾತನಾಡಿದ ಸಚಿವರು, ಜಿಟಿಟಿಸಿಯು ಆಫ್ರಿಕಾದ ಕೈಗಾರಿಕಾ ಕೌಶಲ್ಯ ಅಗತ್ಯಗಳಿಗೆ ಒಂದು ದೃಢವಾದ ಮಾದರಿಯಾಗಿದೆ. ಇದು ಆಫ್ರಿಕನ್ ಪರಿಸ್ಥಿತಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ ಪಾಲುದಾರಿಕೆಯು ನಮೀಬಿಯಾದಲ್ಲಿ ಕೌಶಲಪೂರ್ಣ ಪ್ರತಿಭೆಯ ಕಣಜ ನಿರ್ಮಿಸುತ್ತದೆ. ಆಫ್ರಿಕಾದಾದ್ಯಂತ ಜಿಟಿಸಿಸಿ ಪದವೀಧರರಿಗೆ ಹೊಸ ಉದ್ಯೋಗಾವಕಾಶವನ್ನು ಸೃಷ್ಟಿಸುತ್ತದೆ ಎಂದು ಸಚಿವರು ತಿಳಿಸಿದರು.

    ಕರ್ನಾಟಕ ಮೂಲದ ಎಂಎಸ್‌ ಎಂಐಗಳಿಗೆ ಹೆಚ್ಚುವರಿ ಮಾರುಕಟ್ಟೆ ಅವಕಾಶ ಒದಗಿಸಲಿದೆ ಮತ್ತು ಶಿಕ್ಷಣ, ಕೌಶಲದಲ್ಲಿ ಜಾಗತಿಕ ಮನ್ನಣೆಯನ್ನು ನೀಡಲಿದೆ. ಶಿಕ್ಷಣ ರಾಜತಾಂತ್ರಿಕತೆಯ ಮೂಲಕ ಕರ್ನಾಟಕದ ಶಕ್ತಿಯನ್ನು ಸಬಲೀಕರಣಗೊಳಿಸಲಿದೆ ಎಂದು ಎಂದು ಹೇಳಿದರು. ಜಿಟಿಟಿಸಿಯ ವ್ಯವಸ್ಥಾಪಕ ನಿರ್ದೇಶಕ ಡಾ.ವೈ.ಕೆ.ದಿನೇಶ್ ಕುಮಾರ್‌ ಮಾತನಾಡಿ, ಈ ಉಪಕ್ರಮವು ಕರ್ನಾಟಕವನ್ನು ಕೌಶಲ ಅಭಿವೃದ್ಧಿಯಲ್ಲಿ ಜಾಗತಿಕ ನಾಯಕನನ್ನಾಗಿ ಮಾಡಿದೆ. ಉಪಕರಣ ತಯಾರಿಕೆ ಮತ್ತು ಮುಂದುವರಿದ ಉತ್ಪಾದನೆಯಲ್ಲಿ ಜಿಟಿಟಿಸಿಯ ಪರಿಣತಿಯು ಈಗ ಜಾಗತಿಕ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

    ಧರ್ಮಸ್ಥಳ ಸರಣಿ ಕೊಲೆ: ಕೈಕಾಲು ಕಟ್ಟಿಹಾಕಿದ್ದ ಸ್ಥಿತಿಯಲ್ಲಿ ಸಿಕ್ಕಿದ್ದ ಪದ್ಮಲತಾ ಅಸ್ತಿಪಂಜರ; ಸಿಗುತ್ತಾ ನ್ಯಾಯ?

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search