ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಸರಣಿ ಕೊಲೆ ಹಾಗೂ ಅತ್ಯಾಚಾರ ಕೊಲೆಗಳು ನಡೆದಿವೆ, ಅವುಗಳ ಹೆಣಗಳನ್ನು ತಾನೇ ಹೂತಿದ್ದು, ಅಸ್ತಿಪಂಜರವನ್ನು ಹೊರತೆಗೆಯಲು ಸಿದ್ಧ ಎಂದು ವ್ಯಕ್ತಿಯೊಬ್ಬ ಎಫ್‌ಐಆರ್ ದಾಖಲಿಸಿದ ಬಳಿಕ ಪ್ರಕರಣ ಭಾರೀ ತಿರುವು ಪಡೆದುಕೊಂಡಿದೆ.
ರಾಜ್ಯ ಸರ್ಕಾರ ಈ ಕುರಿತು ತನಿಖೆ ನಡೆಸಲು ಎಸ್‌ಐಟಿ ರಚಿಸಿದ್ದು, ಪ್ರಕರಣ ಸದ್ಯ ಭಾರೀ ಮಹತ್ವ ಪಡೆದುಕೊಂಡಿದೆ.
ಹೀಗೆ ಎಸ್‌ಐಟಿ ತನಿಖೆ ಆದೇಶ ಹೊರಡಿಸಿದ ಬೆನ್ನಲ್ಲೇ ಈ ಹಿಂದೆ ಸಿಐಡಿ ʼಪತ್ತೆಯಾಗದ ಪ್ರಕರಣʼ ಎಂದು ಕೈಚೆಲ್ಲಿದ್ದ ಪದ್ಮಲತಾ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ. ಪದ್ಮಲತಾ ಕುಟುಂಬದವರು ಎಸ್‌ಐಟಿ ತನಿಖೆಯಿಂದಾದರೂ ತಮಗೆ ನ್ಯಾಯ ದೊರಕುತ್ತಾ ಎಂದು ಎದುರು ನೋಡುತ್ತಿದ್ದಾರೆ.
1986ರ ಡಿಸೆಂಬರ್ 22ರಂದು ಧರ್ಮಸ್ಥಳದ ಬೋಳಿಯಾರು ಗ್ರಾಮದ ಪದ್ಮಲತಾ ಕಮ್ಯೂನಿಷ್ಟ್ ಪಕ್ಷದ ಮುಖಂಡರೊಬ್ಬರ ಮಗಳಾಗಿದ್ದರು. ಹೀಗೆ ನಾಪತ್ತೆಯಾದ ಪದ್ಮಲತಾ ಅಸ್ತಿಪಂಜರ ಕೈಕಾಲು ಕಟ್ಟಿಹಾಕಿದ ರೀತಿಯಲ್ಲಿ ಪತ್ತೆಯಾಗಿತ್ತು. ಈ ಮೂಲಕ 39 ವರ್ಷಗಳ ಹಿಂದೆ ನಡೆದ ಈ ಪ್ರಕರಣದ ಹಿಂದಿನ ಸತ್ಯಾಂಶ ಈಗಲಾದರೂ ಹೊರಬರುತ್ತಾ ನೋಡಬೇಕಿದೆ.
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


