Monday, August 31, 2026
spot_img
More
    spot_img
    HomeStateDistrictಹೆಣ ಹೂತಿದ್ದೇನೆ ಎನ್ನುತ್ತಿರುವ ವ್ಯಕ್ತಿ ಹೇಳಿಕೆ ನೂರಕ್ಕೆ ನೂರು ಸತ್ಯ ಎಂದ ಸೌಜನ್ಯ ತಾಯಿ

    ಹೆಣ ಹೂತಿದ್ದೇನೆ ಎನ್ನುತ್ತಿರುವ ವ್ಯಕ್ತಿ ಹೇಳಿಕೆ ನೂರಕ್ಕೆ ನೂರು ಸತ್ಯ ಎಂದ ಸೌಜನ್ಯ ತಾಯಿ

    ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ ಪ್ರಕರಣ ಇಂದು ಈ ಮಟ್ಟಿಗೆ ಗಂಭೀರ ಸ್ವರೂಪ ಪಡೆದುಕೊಂಡಿದೆ ಎನ್ನುವುದಕ್ಕೆ ದೊಡ್ಡ ಕಾರಣ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಕುರಿತ ಹೋರಾಟ ಎಂದರೆ ತಪ್ಪಾಗಲಾರದು.

    Advertisement

    ಹೌದು, ಸೌಜನ್ಯ ಸಾವಿಗೆ ನ್ಯಾಯಕ್ಕಾಗಿ ಅನೇಕ ಹೋರಾಟಗಳು ನಡೆದಿವೆ, ನಡೆಯುತ್ತಲೇ ಇವೆ. ಜನರಿಗೆ ಪದೇಪದೇ ಧರ್ಮಸ್ಥಳ ಕೊಲೆಗಳನ್ನು ನೆನಪಾಗುವಂತೆ ಮಾಡುತ್ತಿದ್ದದ್ದು ಇದೇ ಸೌಜನ್ಯ ಪ್ರಕರಣ. ಇದರಿಂದಲೇ ಇನ್ನೂ ಹಲವಾರು ಪ್ರಕರಣಗಳ ಕುರಿತು ಜನರಿಗೆ ತಿಳಿದದ್ದೂ ಸಹ ಹೌದು.

    ಇನ್ನು ಪಾಪಪ್ರಜ್ಞೆ ಕಾಡಿ ಹೂತಿದ್ದ ಹೆಣಗಳ ಅಸ್ತಿಪಂಜರ ತೆಗೆದು ತೋರಿಸುತ್ತೇನೆ ಎಂದಿರುವ ವ್ಯಕ್ತಿ ಮನಃಪರಿವರ್ತನೆಗೆ ಸಹ ಸೌಜನ್ಯ ಪ್ರಕರಣದ ಕುರಿತು ಜನರು ವ್ಯಕ್ತಪಡಿಸಿದ ರೀತಿ ಪ್ರಮುಖ ಕಾರಣವಾಗಿರಬಹುದು.

    ಆದರೆ ಇಂತಹ ಪ್ರಕರಣ ಸದ್ಯ ಸರ್ಕಾರ ರಚಿಸಿರುವ ಎಸ್‌ಐಟಿ ತನಿಖೆ ಅಡಿಗೆ ಬರುವುದಿಲ್ಲ. ಏಕೆಂದರೆ ಆ ಪ್ರಕರಣ ಸ್ಥಳೀಯ ಪೊಲೀಸರ ಮಹಾ ಎಡವಟ್ಟಿನಿಂದ ಹಳ್ಳ ಹಿಡಿದಿದ್ದು, ಸರಿಯಾದ ಸಾಕ್ಷಿಯಿಲ್ಲದೇ ಬಗೆಹರಿಯದ ಪ್ರಕರಣವಾಗಿ ಉಳಿದುಕೊಂಡಿದೆ.

    ಈ ಕುರಿತು ಸದ್ಯ ಸೌಜನ್ಯ ತಾಯಿ ಕುಸುಮಾವತಿ ಮಾತನಾಡಿದ್ದು, ಸಿದ್ದರಾಮಯ್ಯ ಸರ್ಕಾರ ಎಸ್‌ಐಟಿ ರಚಿಸಿರುವುದು ಸಂತಸ ತಂದಿದೆ ಎಂದಿದ್ದಾರೆ. ಅಲ್ಲದೇ ತಮ್ಮ ಮಗಳೂ ಸಹ ಇದೇ ಧರ್ಮಸ್ಥಳದಲ್ಲಿಯೇ ಅತ್ಯಾಚಾರವಾಗಿ ಕೊಲೆಯಾಗಿದ್ದು, ಆಕೆಯ ಪ್ರಕರಣವನ್ನೂ ಸಹ ಎಸ್‌ಐಟಿ ಅಡಿಯಲ್ಲಿ ತನಿಖೆ ನಡೆಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

    ಇನ್ನು ಸಾಕ್ಷಿ ದೂರುದಾರ ಹೆಣಗಳನ್ನು ಹೂತಿಟ್ಟಿದ್ದೇನೆ ಎಂದು ಆರೋಪ ಮಾಡುತ್ತಿರುವುದು ನೂರಕ್ಕೆ ನೂರು ಸತ್ಯ ಎಂದಿದ್ದಾರೆ. ತಾವೂ ಸಹ ಹೆಣ ಸಿಕ್ಕಿದೆ ಎಂಬ ಸುದ್ದಿಗಳನ್ನು ಈ ಹಿಂದೆ ಕೇಳುತ್ತಿದ್ದೆವು, ಆದರೆ ಈ ರೀತಿ ಮಾಡುತ್ತಾರೆ ಎಂದುಕೊಂಡಿರಲಿಲ್ಲ ಎಂದಿದ್ದಾರೆ.

    ಧರ್ಮಸ್ಥಳ ಸರಣಿ ಕೊಲೆ: ಕೈಕಾಲು ಕಟ್ಟಿಹಾಕಿದ್ದ ಸ್ಥಿತಿಯಲ್ಲಿ ಸಿಕ್ಕಿದ್ದ ಪದ್ಮಲತಾ ಅಸ್ತಿಪಂಜರ; ಸಿಗುತ್ತಾ ನ್ಯಾಯ?

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading