ಬೆಂಗಳೂರು: ಧರ್ಮಸ್ಥಳ ಸರಣಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹರ್ಷೇಂದ್ರ ಕುಮಾರ್ ಡಿ (ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯ ಸಹೋದರ) ವಿರುದ್ಧ ಯಾವುದೇ ಅಪವಾದಾತ್ಮಕ ಸುದ್ದಿ ಹಾಗೂ ವಿಡಿಯೊವನ್ನು ಮಾಡುವುದನ್ನು ನಿರ್ಬಂಧಿಸುವ ಬೆಂಗಳೂರು ನಗರ ನಾಗರಿಕ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶಕ್ಕೆ ಎದುರಾಗಿ ‘ಥರ್ಡ್ ಐ ಕನ್ನಡ’ ಯೂಟ್ಯೂಬ್ ಚಾನೆಲ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಧರ್ಮಸ್ಥಳದ ಕೊಲೆಗಳ ಕುರಿತು ಈ ಹಿಂದಿನಿಂದಲೂ ವಿಡಿಯೊಗಳನ್ನು ಮಾಡುತ್ತಾ ಬಂದಿರುವ ಈ ಚಾನೆಲ್ ಸೆಷನ್ಸ್ ನ್ಯಾಯಾಲಯದಿಂದ ನೇರವಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ. ಅರ್ಜಿಯ ಪ್ರಕಾರ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಹರ್ಷೇಂದ್ರ ಕುಮಾರ್ (ಪರಿವಾದಿಗಳು) ತಪ್ಪು ಮಾಹಿತಿಗಳನ್ನು ನೀಡಿ ಪಡೆದಿದ್ದು, ಇದು ಧರ್ಮಸ್ಥಳ ಸಮಾಧಿ ಗಂಭೀರ ಅಪರಾಧಗಳ ಆರೋಪಗಳ ಬಗ್ಗೆ ರಾಜ್ಯದ ಉನ್ನತ ಮಟ್ಟದ ಕ್ರಿಮಿನಲ್ ತನಿಖೆಗೆ ನೇರವಾಗಿ ಅಡಚಣೆ ಉಂಟುಮಾಡುತ್ತದೆ.
“ಇದು ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕೋದ್ಯಮದ ಸ್ವಾತಂತ್ರ್ಯಕ್ಕೆ (ಅನುಚ್ಛೇದ 19(1)(a)) ಮತ್ತು ನ್ಯಾಯಸ್ಥಾನದ ಮೂಲಭೂತ ಸಿದ್ಧಾಂತಗಳು ಮತ್ತು ನ್ಯಾಯಯುತ ಪ್ರಕ್ರಿಯೆಗೆ (ಅನುಚ್ಛೇದ 21) ನೇರವಾಗಿ ದಾಳಿ ಮಾಡುತ್ತದೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಇನ್ನು ಈ ಹಿಂದೆ ಧರ್ಮಸ್ಥಳದಲ್ಲಿ ಸ್ವಚ್ಛತಾ ಸಿಬ್ಬಂದಿಯಾಗುತ್ತಿದ್ದ ವ್ಯಕ್ತಿಯೊಬ್ಬ ತಾನು ಹೂತಿಟ್ಟ ಕೊಲೆಯಾದ ಮೃತದೇಹಗಳ ಅಸ್ತಿಪಂಜರವನ್ನು ಅಗೆದು ತೋರಿಸಲು ಸಿದ್ಧ ಎಂದಮೇಲೆ ಈ ಕುರಿತ ಅನೇಕ ಡಿಜಿಟಲ್‌ನಲ್ಲಿ ಪ್ರಕಟವಾಗಿದ್ದು, ಹರ್ಷೇಂದ್ರ ಕುಮಾರ್ 8,842 ಲಿಂಕ್‌ಗಳನ್ನು, ಅದರಲ್ಲಿ 4,140 ಯೂಟ್ಯೂಬ್ ವೀಡಿಯೊಗಳು, 932 ಫೇಸ್‌ಬುಕ್ ಪೋಸ್ಟ್‌ಗಳು, 3,584 ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳು, 108 ಸುದ್ದಿ ಲೇಖನಗಳು, 37 ರೆಡಿಟ್ ಪೋಸ್ಟ್‌ಗಳು ಮತ್ತು 41 ಟ್ವೀಟ್‌ಗಳನ್ನು ಡಿಲಿಟ್ ಮಾಡಿಸುವಂತೆ ಸೆಷನ್ಸ್ ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿದ್ದರು.
ಸದ್ಯ ಇದರ ವಿರುದ್ಧ ಥರ್ಡ್ ಐ ಕನ್ನಡ ಯುಟ್ಯೂಬ್ ಚಾನೆಲ್ ತೊಡೆ ತಟ್ಟಿದ್ದು, ಸುಪ್ರೀಂ ಏನು ಆದೇಶ ಹೊರಡಿಸಲಿದೆ ಕಾದುನೋಡಬೇಕಿದೆ. ಒಂದುವೇಳೆ ಸುಪ್ರೀಂ ಹೈಕೋರ್ಟ್ ಆದೇಶವನ್ನು ತಳ್ಳಿಹಾಕಿದರೆ ಇನ್ನಷ್ಟು ಲಿಂಕ್‌ಗಳು ಉದ್ಭವಿಸುವುದು ಖಚಿತ.
ಆಗಸ್ಟ್ 1ರೊಳಗೆ ಒಳಮೀಸಲಾತಿ ಜಾರಿ ಮಾಡದಿದ್ದರೆ ಹೋರಾಟದ ಎಚ್ಚರಿಕೆ ನೀಡಿದ ಬಿಜೆಪಿ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


