Monday, November 2, 2026
spot_img
More
    spot_img
    HomeLatest newsಮಳೆಗಾಲದಲ್ಲಿ ಫುಡ್ ಪಾಯ್ಸನ್ ಎಚ್ಚರಿಕೆ! ಲಕ್ಷಣಗಳು ಮತ್ತು ತಡೆಗಟ್ಟಲು ಸರಳ ಟಿಪ್ಸ್

    ಮಳೆಗಾಲದಲ್ಲಿ ಫುಡ್ ಪಾಯ್ಸನ್ ಎಚ್ಚರಿಕೆ! ಲಕ್ಷಣಗಳು ಮತ್ತು ತಡೆಗಟ್ಟಲು ಸರಳ ಟಿಪ್ಸ್

    ಇತ್ತೀಚಿನ ಅನಾರೋಗ್ಯಕರವಾದ ಆಹಾರ (Food) ಹಾಗು ಜೀವನಶೈಲಿಯು (Lifestyle) ಅನೇಕ ರೋಗ (Disease)ಗಳಿಗೆ ಆಹ್ವಾನ ನೀಡುತ್ತಿದೆ. ಅವುಗಳ ಪಟ್ಟಿಯಲ್ಲಿ ಫುಡ್ ಪಾಯಿಸನ್ (Food poison) ಕೂಡ ಒಂದು.ಮಾನ್ಸೂನ್‌ ಕಾಲದಲ್ಲಿ ಹೊರಗಿನ ಆಹಾರ ಸೇವಿಸುವ ಮುನ್ನ ಹೆಚ್ಚಾದ ಎಚ್ಚರಿಕೆ ವಹಿಸಬೇಕು. ಈ ಋತುವಿನಲ್ಲಿ ಗಾಳಿಯ ಮೂಲಕ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಸುಲಭವಾಗಿ ಹರಡಬಹುದು. ಪರಿಣಾಮವಾಗಿ, ದೇಹದ ಒಳಗೆ ಸೋಂಕು ತಲುಪಿ ಅನಾರೋಗ್ಯ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ.ಸೂಕ್ಷ್ಮಜೀವಿಗಳಿಂದ ಕಲುಷಿತಗೊಂಡ ಆಹಾರ ಸೇವಿಸಿದಾಗ, ಅದು ಫುಡ್ ಪಾಯಿಸನ್‌ಗೆ ಕಾರಣವಾಗಬಹುದು. ಇದರ ಪ್ರಮುಖ ಕಾರಣಗಳಲ್ಲಿ ಬ್ಯಾಕ್ಟೀರಿಯಾ, ವೈರಸ್ ಮತ್ತು ಇತರ ಹಾನಿಕಾರಕ ಸಾಂಕ್ರಾಮಿಕ ಜೀವಿಗಳು ಸೇರಿವೆ. ಈ ಸೂಕ್ಷ್ಮಜೀವಿಗಳು ಆಹಾರ ಅಥವಾ ಪಾನೀಯಗಳ ಮೂಲಕ ದೇಹಕ್ಕೆ ಪ್ರವೇಶಿಸಿ ವಿವಿಧ ಆರೋಗ್ಯ ಸಮಸ್ಯೆಗಳನ್ನುಂಟುಮಾಡುತ್ತವೆ.ಹೀಗಾಗಿ ವಿಶೇಷವಾಗಿ ಮಳೆಗಾಲದಲ್ಲಿ ಹೊಟ್ಟೆ ತೊಂದರೆ, ಫುಡ್ ಪಾಯಿಸನ್ ಮುಂತಾದ ಸಮಸ್ಯೆಗಳಿಂದ ದೂರವಿರಲು ಮನೆಮದೆ ತಯಾರಿಸಿದ ತಾಜಾ ಹಾಗೂ ಶುದ್ಧ ಆಹಾರ ಸೇವಿಸುವುದು ಉತ್ತಮ.

    ಫುಡ್ ಪಾಯ್ಸನ್‌ನ ಲಕ್ಷಣಗಳು

    ವಾಕರಿಕೆ, ವಾಂತಿ ಮತ್ತು ಅತಿಸಾರ, ಹೊಟ್ಟೆನೋವು ಇತರ ರೋಗಲಕ್ಷಣಗಳೂ ಇರಬಹುದು. ಆಹಾರ ವಿಷಪೂರಿತ ಜನರು ಜ್ವರ, ಆಯಾಸ ಮತ್ತು ದೌರ್ಬಲ್ಯ, ತಲೆನೋವು, ಹೊಟ್ಟೆ ನೋವು ಮತ್ತು ನಿರಂತರ ಅತಿಸಾರವನ್ನು ಅನುಭವಿಸಬಹುದು.

    ​ಫುಡ್ ಪಾಯಿಸನ್ ತಡೆಗಟ್ಟಲು ಸುರಕ್ಷತಾ ಕ್ರಮಗಳು

    ಆಹಾರ ಸುರಕ್ಷತೆ ಮನೆಯಲ್ಲಿಯೇ ಆರಂಭವಾಗುತ್ತದೆ. ಕೆಲವು ಸರಳ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಫುಡ್ ಪಾಯಿಸನ್‌ ಮತ್ತು ಚಿಕತ್ಸೆಯಲ್ಲಿ ಸಹಾಯ ಮಾಡಬಹುದು:

    ಆಹಾರ ತಯಾರಿಕೆಗೆ ಮುನ್ನ:

    ತರಕಾರಿ, ಹಣ್ಣುಗಳು ಅಥವಾ ಇತರ ಪದಾರ್ಥಗಳನ್ನು ಮನೆಗೆ ತಂದ ತಕ್ಷಣ ಶುದ್ಧ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ.

    ಅಡುಗೆಮನೆ ಸ್ವಚ್ಛವಾಗಿರಲಿ. ಅಡುಗೆ ಮಾಡುವ ಮೊದಲು ಮತ್ತು ನಂತರ ಕೈಗಳನ್ನು ಚೆನ್ನಾಗಿ ತೊಳೆಯುವುದು ಮರೆಯಬೇಡಿ.

    ಕೋಳಿ, ಮಾಂಸ, ಮೊಟ್ಟೆ ಇತ್ಯಾದಿಗಳನ್ನು ಶುದ್ಧವಾಗಿ ತೊಳೆಯಬೇಕು ಮತ್ತು ಸಂಪೂರ್ಣವಾಗಿ ಬೇಯಿಸಬೇಕು.

    ತ್ವರಿತವಾಗಿ ಹಾಳಾಗುವ ಆಹಾರಗಳನ್ನಾದ್ರೆ ಫ್ರಿಡ್ಜ್‌ನಲ್ಲಿ ಶೇಖರಿಸಿ.

    ಫುಡ್ ಪಾಯಿಸನ್ ಆದಾಗ:

    ಆರೋಗ್ಯಕ್ಕೆ ಹಾನಿಕಾರಕವಾದ ಆಹಾರವನ್ನು ತಕ್ಷಣ ನಿಲ್ಲಿಸಿ. ಬಾಳೆಹಣ್ಣು, ಬೇಯಿಸಿದ ಅನ್ನ, ಚಪಾತಿ, ಬ್ರೆಡ್, ಹಾಲು, ಸೇಬು ಹೀಗೆ ಸೌಮ್ಯವಾದ ಆಹಾರಗಳನ್ನು ಸೇವಿಸಬಹುದು.

    ಶುದ್ಧ ನೀರು, ಓಆರ್‌ಎಸ್‌, ಎಳನೀರು, ಬಾಯಿಗೆ ತಂಪು ನೀಡುವ ತರಕಾರಿ ಕಟ್ಟುಗಳನ್ನು ಕುಡಿಯಿರಿ. ಆದರೆ ಅವುಗಳನ್ನು ಒಂದೇ ಬಾರಿಗೆ ಹೆಚ್ಚು ಕುಡಿಯಬೇಡಿ.

    ಶುಂಠಿ ಚಹಾ ಸೇವನೆ ಬಹಳ ಉತ್ತಮ. ಶುಂಠಿಯಲ್ಲಿರುವ ಆಂಟಿಮೈಕ್ರೊಬಿಯಲ್ ಗುಣಗಳು ಆಹಾರದಿಂದ ಹರಡುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತವೆ.

    ಮೊಸರು ಪ್ರಾಕೃತಿಕ ಪ್ರತಿಜೀವಕ (probiotic) ಆಗಿದ್ದು, ದೇಹಕ್ಕೆ ಶಾಂತಿ ನೀಡುತ್ತದೆ. ಅದಕ್ಕೆ ಸ್ವಲ್ಪ ಕಪ್ಪು ಉಪ್ಪು ಸೇರಿಸಿ ಸೇವಿಸಬಹುದು ಅಥವಾ ನೀರು ಹಾಗೂ ಸಕ್ಕರೆಯನ್ನು ಸೇರಿಸಿ ಲಸ್ಸಿಯಾಗಿ ಕುಡಿಯಬಹುದು.

    ಪ್ರತಿ ದಿನ 2 ವಾಲ್‌ನಟ್ ತಿಂದರೆ ದೊರೆಯುವ ಅಚ್ಚರಿದಾಯಕ ಆರೋಗ್ಯ ಲಾಭಗಳು


    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search