ಬಾಲಗಕೋಟೆ: ಹುನಗುಂದ ತಾಲೂಕಿನ ಬೆನಕನವಾರಿ ಗ್ರಾಮದಲ್ಲಿ ಅಂಗನವಾಡಿಗೆ ತೆರಳಿದ್ದ 3 ವರ್ಷದ ಮಗುವನ್ನು ಸ್ವಂತ ಚಿಕ್ಕಪ್ಪನೇ ಕೊಲೆ ಮಾಡಿರುವ ದಾರುಣ ಘಟನೆ ನಡೆದಿದೆ.
ಮಾರುತಿ ವಲಿಕಾರ ಎಂಬುವರ ಮೂರು ವರ್ಷದ ಮಗುವನ್ನು ಕತ್ತು ಕೊಯ್ದು ಹತ್ಯೆ ಮಾಡಲಾಗಿದೆ. ಮಾರುತಿ ವಲಿಕಾರ ಅವರ ಭೀಮಪ್ಪ ವಲಿಕಾರನಿಂದಲೇ ಈ ನೀಚ ಕೃತ್ಯ ನಡೆದಿದ್ದು, ಘಟನೆ ಮನುಕುಲವೇ ತಲೆ ತಗ್ಗಿಸುವಂತಿದೆ ಹಾಗೂ ಸ್ಥಳೀಯರು ಭಯ ಭೀತರಾಗಿದ್ದಾರೆ.
ಈ ಕುರಿತು ಅಮೀನ್ಗಢ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇನ್ನು ಕೊಲೆಯ ಹಿಂದಿನ ಉದ್ದೇಶವೇನು, ಸ್ವಂತ ಸೋದರನ ಮಗುವನ್ನು ಕನಿಕರವೂ ಇಲ್ಲದೇ ಚಾಕುವಿನಿಂದ ಕತ್ತು ಕೊಯ್ದು ಕೊಲ್ಲುವಂತಹ ಕಾರಣವಾದರೂ ಏನಿತ್ತು ಎಂಬುದು ಹೊರಬರಬೇಕಿದೆ.
ವಿದ್ಯಾರ್ಥಿನಿಗೆ ಚಾಕುವಿನಿಂದ ಬೆದರಿಕೆ; ಕಿಡಿಗೇಡಿಯನ್ನು ಹಿಂಬದಿಯಿಂದ ಬಂದು ಬಗ್ಗುಬಡಿದ ಹೀರೊ; ವಿಡಿಯೊ
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


