ಸತಾರ: ಸತಾರದ ಬಸಪ್ಪ ಪೇಠ ಕರಂಜೆ ಪ್ರದೇಶದಲ್ಲಿ ಆಘಾಟಕಾರಿ ಘಟನೆಯೊಂದು ನಡೆದಿದ್ದು, 18 ವರ್ಷದ ಯುವಕನೊಬ್ಬ 10ನೇ ತರಗತಿಯ ಹುಡುಗಿಯನ್ನು ಚಾಕುವಿನಿಂದ ಚುಚ್ಚುವುದಾಗಿ ಬೆದರಿಸಿದ ಘಟನೆ ವರದಿಯಾಗಿದೆ. ಈ ಘಟನೆಯಿಂದಾಗಿ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಈ ವಿಡಿಯೊ ವೈರಲ್ ಆಗಿದ್ದು, ಆರೋಪಿ ಹುಡುಗಿಯನ್ನು ಬೆದರಿಸುತ್ತಿರುವುದನ್ನು ಕಾಣಬಹುದಾಗಿದೆ. ಬಾಲಕಿ ಎಷ್ಟೇ ಚೀರಿದರೂ ಬಿಡದ ಆತ ಚಾಕು ಹಾಕುವುದಾಗಿ ಬೆದರಿಕೆ ಹಾಕುತ್ತಲೇ ಇದ್ದ.
ಇನ್ನು ಸ್ಥಳೀಯರು ಆತನ ಮನವೊಲಿಸಲು ಮುಂದಾಗಿದ್ದು, ಅದ್ಯಾವುದನ್ನೂ ಕೇಳದ ಆತ ಬಾಲಕಿಗೆ ಚಾಕು ಇರಿಯುವುದಾಗಿ ಬೆದರಿಸಿದ್ದಾನೆ. ಇನ್ನು ಅನೇಕ ದಿನಗಳಿಂದ ಬಾಲಕಿಯನ್ನು ಹಿಂಬಾಲಿಸುತ್ತಿದ್ದ ಯುವಕ ಆಕೆಗೆ ಪ್ರೇಮ ನಿವೇದನೆ ಮಾಡಿದ್ದ. ಆದರೆ ಬಾಲಕಿ ಅದನ್ನು ತಿರಸ್ಕರಿಸಿದ್ದಳು. ಈ ಕಾರಣಕ್ಕಾಗಿಯೇ ಆತ ಚಾಕುವಿನಿಂದ ಆಕೆಯನ್ನು ಬೆದರಿಸಿದ್ದಾನೆ.
ಹೀಗೆ ಹುಚ್ಚಾಟ ಮೆರೆಯುತ್ತಿದ್ದಾಗ ನೆರೆದವರು ಭಯಭೀತರಾಗಿ ಹೇಗೆ ಕಾಪಾಡುವುದು ಎಂದು ಯೋಚಿಸುತ್ತಿದ್ದರು. ಈ ಸಮಯದಲ್ಲಿ ಹಿಂದಿನಿಂದ ಕಾಂಪೌಂಡ್ ಏರಿ ಬಂದ ವ್ಯಕ್ತಿಯೋರ್ವ ಯುವಕನನ್ನು ಬಗ್ಗು ಬಡಿದಿದ್ದಾರೆ. ಹೀಗೆ ಸಿಕ್ಕಿಬಿದ್ದ ಆತನನ್ನು ಸ್ಥಳೀಯರು ಗುಂಪಲ್ಲಿ ಥಳಿಸಿದ್ದಾರೆ ಹಾಗೂ ಆ ಯುವತಿಯನ್ನು ರಕ್ಷಿಸಿದ್ದಾರೆ. ಆರೋಪಿ ಸದ್ಯ ಪೊಲೀಸರ ವಶದಲ್ಲಿದ್ದಾನೆ.
ಬೆಂಗಳೂರು ನಂದಿನಿ ಬೂತ್ಗೆ ರೂ.1 ಕೋಟಿ 3 ಲಕ್ಷ ತೆರಿಗೆ ನೋಟಿಸ್
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


