ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ಬಾಳಸಂದ್ರ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಆರನೇ ತರಗತಿ ವಿದ್ಯಾರ್ಥಿ ತನ್ನ ಸಹಪಾಠಿಗಳ ಜತೆ ತಮಾಷೆ ಮಾಡಿದ್ದಕ್ಕೆ ಕೋಪಗೊಂಡ ವಾರ್ಡನ್ ಮನ ಬಂದಂತೆ ಹಲ್ಲೆ ನಡೆಸಿದ್ದಾನೆ.
ಅನಂತಪುರ ಗ್ರಾಮದ ವಿದ್ಯಾರ್ಥಿಯನ್ನು ಆತನ ಪೋಷಕರು ಬಾಳಸಂದ್ರದ ವಸತಿ ಶಾಲೆಯಲ್ಲಿ ಇರಿಸಿ ವಿದ್ಯಾಭ್ಯಾಸ ಕೊಡಿಸುತ್ತಿದ್ದರು.
ಸಹಪಾಠಿಗಳನ್ನು ಹಲ್ಲೆಗೊಳಗಾದ ವಿದ್ಯಾರ್ಥಿ ವಸತಿ ನಿಲಯದಲ್ಲಿ ದೆವ್ವ ಇದೆ ಎಂದು ಹೆದರಿಸಿ ತಮಾಷೆ ಮಾಡುತ್ತಿದ್ದನಂತೆ. ಈ ವಿಷಯವನ್ನು ಇತರೆ ವಿದ್ಯಾರ್ಥಿಗಳು ವಾರ್ಡನ್‌ಗೆ ಹೇಳಿದ್ದಾರೆ. ವಿಷಯ ತಿಳಿದ ವಾರ್ಡನ್ ಬೆಲ್ಟ್ ಹಾಗೂ ಕೋಲಿನಿಂದ ಆ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿದ್ದಾನೆ.
ವಾರ್ಡನ್ ಕ್ರೌರ್ಯಕ್ಕೆ ವಿದ್ಯಾರ್ಥಿಯ ಮೈತುಂಬಾ ಬಾಸುಂಡೆ ಬಂದಿದ್ದು, ರಕ್ತ ಹೆಪ್ಪುಗಟ್ಟಿದೆ. ಸದ್ಯ ವಿಷಯ ಮೇಲಧಿಕಾರಿಗಳಿಗೆ ತಲುಪಿದ್ದು, ವಾರ್ಡನ್ ಮೇಲೆ ಶಿಸ್ತುಕ್ರಮ ಜರುಗಲಿದೆ.
ಬೆಂಗಳೂರು ನಂದಿನಿ ಬೂತ್‌ಗೆ ರೂ.1 ಕೋಟಿ 3 ಲಕ್ಷ ತೆರಿಗೆ ನೋಟಿಸ್
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


