ಬೆಂಗಳೂರು: ವಿಧಾನಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಟೀಕೆ ಪ್ರತಿ ಟೀಕೆ ನಡೆಯಿತು.
ಈ ಹಿಂದೆ ಮುಸ್ಲಿಂ ಮತ ಬೇಡ ಎಂದಿದ್ದ ಶಾಸಕ ಯತ್ನಾಳ್ ಹೇಳಿಕೆಯನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ಯತ್ನಾಳ್ ಕಾಲೆಳೆದರು. ಮುಂದಿನ ಬಾರಿ ನೀವು ಮುಖ್ಯಮಂತ್ರಿಯಾಗುವುದಿಲ್ಲ ಎಂದು ಹೇಳಿದ್ದೀರ ಎಂದ ಯತ್ನಾಳ್ ನಿಮ್ಮ ಮತವೆಲ್ಲ ನಮಗೆ ಬರುತ್ತೆ, ಆಗ ನಾನು ಮುಖ್ಯಮಂತ್ರಿಯಾಗುತ್ತೇನೆ ಎಂದರು.
ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಇವರಿಗೆ ಯಾವುದೇ ಕಾರಣಕ್ಕೂ ನಮ್ಮ ಮತಗಳು ಬೀಳುವುದಿಲ್ಲ. ಏಕೆಂದರೆ ಇವರು ಪರಿಶಿಷ್ಟ ಜಾತಿ ವಿರೋಧಿಗಳು, ಹಿಂದುಳಿದ ಜಾತಿಗಳ ವಿರೋಧಿಗಳು, ಅಲ್ಪ ಸಂಖ್ಯಾತರ ವಿರೋಧಿಗಳು, ಹಾಗಾಗಿ ಇವರಿಗೆ ಯಾವುದೇ ಕಾರಣಕ್ಕೂ ನಮ್ಮ ಮತಗಳು ಬೀಳುವುದಿಲ್ಲ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್ ನಾವು ಪರಿಶಿಷ್ಟ ಜಾತಿ ವಿರೋಧಿಗಳಲ್ಲ ದೇಶದ್ರೋಹಿಗಳ ವಿರೋಧಿಗಳು ಎಂದರು. ಈ ವೇಳೆ ಸಿದ್ದರಾಮಯ್ಯ ಬಹಿರಂಗವಾಗಿ ಟೋಪಿ ಹಾಕಿಕೊಂಡವರ ಮತ ಬೇಡ ಎಂದು ಬಹಿರಂಗವಾಗಿ ಹೇಳಿದ್ದು ನೀವೇ ಎಂದರು.
ಯತ್ನಾಳ್ ಹೌದು ಹೇಳಿದ್ದೆ, ಅದರಿಂದ ನನಗೆ ಯಾವುದೇ ಭಯವಿಲ್ಲ ಎಂದರು. ಸಿದ್ದರಾಮಯ್ಯ ಹೀಗೆ ಹೇಳುವುದಕ್ಕೆ ನೀವು ಮುಂದಿನ ಬಾರಿ ಅಧಿಕಾರಕ್ಕೆ ಬರುವುದಿಲ್ಲ, ನೀವು ಮುಖ್ಯಮಂತ್ರಿಯಾಗುವುದಿಲ್ಲ, ಮುಂದಿನ ಚುನಾವಣೆಯಲ್ಲಿ ಸೋಲುತ್ತೀರಿ ಎಂದು ಕುಟುಕಿದರು.
ಪಾಪ ಈ ಬುದ್ದಿವಂತ ನಾಯಕನಿಗೆ ಬಿಜೆಪಿಯಲ್ಲಿ ಸರಿಯಾದ ಸ್ಥಾನ ಸಿಕ್ಕಿಲ್ಲ ಎಂದು ಕಾಲೆಳೆದ ಸಿದ್ದರಾಮಯ್ಯ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


