ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ ಹಾಗೂ ಅತ್ಯಾಚಾರ ಆರೋಪಗಳನ್ನು ಮಾಡಿರುವ ಅನಾಮಿಕನ ದೂರಿನ ಆಧಾರದ ಮೇಲೆ ಸದ್ಯ ಎಸ್‌ಐಟಿ ತನಿಖೆ ನಡೆಯುತ್ತಿದೆ.
ಹೀಗೆ ಎಸ್‌ಐಟಿ ರಚನೆಯಾಗುತ್ತಿದ್ದಂತೆ ಸುಜಾತಾ ಭಟ್ ಎಂಬ ಮಹಿಳೆ 2003ರಲ್ಲಿ ಧರ್ಮಸ್ಥಳಕ್ಕೆ ತೆರಳಿದ್ದ ತನ್ನ ಮಗಳು ಅನನ್ಯ ಭಟ್ ನಾಪತ್ತೆಯಾಗಿದ್ದಾಳೆ, ಅವಳ ಅಸ್ತಿಪಂಜರವನ್ನು ಹುಡುಕಿಕೊಡಿ ಅಂತ್ಯಸಂಸ್ಕಾರ ಮಾಡುತ್ತೇನೆ ಎಂದು ಮನವಿ ಮಾಡಿಕೊಂಡಿದ್ದರು.
ಹೀಗೆ ಸುಜಾತಾ ಭಟ್ ಹೇಳಿದ ಅನನ್ಯ ಭಟ್ ಕುರಿತಾದ ವಿಷಯ ಸಂಶಯಗಳಿಗೂ ಸಹ ಎಡೆಮಾಡಿಕೊಟ್ಟಿತು. ಸದ್ಯ ಈ ಪ್ರಕರಣವೂ ಸಹ ಎಸ್‌ಐಟಿ ಹೆಗಲಿಗೆ ಬಿದ್ದಿದೆ.
ಇನ್ನು ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಮೆನಯಲ್ಲೂ ಸಹ ಸ್ವಲ್ಪ ದಿನಗಳ ಕಾಲ ಇದ್ದ ಸುಜಾತಾ ಭಟ್ ಬಗ್ಗೆ ತಿಮರೋಡಿ ಆಪ್ತ ಜಯಂತ್ ಸ್ಪೋಟಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಎಸ್‌ಐಟಿ ರಚನೆಯಾದ ಕೆಲ ದಿನಗಳು ಸುಜಾತಾ ಭಟ್ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿದ್ದರು, ಆ ಸಮಯದಲ್ಲಿ ಅನನ್ಯ ಭಟ್ ಓದುತ್ತಿದ್ದ ಕಾಲೇಜಿಗೆ ತೆರಳಿ ದಾಖಲೆ ತೆಗೆಯೋಣ ಎಂದು ಕೇಳಿದ್ದೆವು, ಆದರೆ ಆಕೆ ಬೇಡ ಬೇಡ ಬೆಂಗಳೂರಿನಲ್ಲಿ ಫೋಟೊ ಇದೆ, ಅದನ್ನೇ ಕೊಡುತ್ತೇನೆ ಎಂದು ಹೇಳಿದರು ಎಂದು ಜಯಂತ್ ಹೇಳಿದ್ದಾರೆ. ಆ ಬಳಿಕ ಅವರು ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ ಬೆಂಗಳೂರಿಗೆ ತೆರಳಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಯತ್ನಾಳ್ ನೀವು ಮುಂದಿನ ಚುನಾವಣೆಯಲ್ಲಿ ಸೋಲ್ತೀರ ಎಂದ ಸಿದ್ದರಾಮಯ್ಯ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


