ಮಂಗಳೂರು: ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಹಾಗೂ ಬೆಳ್ತಂಗಡಿಯ ಬೆನಕ ಆಸ್ಪತ್ರೆಯಲ್ಲಿ ಗುಂಪು ಸೇರಿಸಿದ ಹಿನ್ನೆಲೆಯಲ್ಲಿ ಪೊಲೀಸರು ಅತ್ಯಾಚಾರಕ್ಕೊಳಗಾದ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿ ಇರಿಸಿದ್ದಾರೆ.
ಇನ್ನು ಮತ್ತೋರ್ವ ಸೌಜನ್ಯ ಪರ ಹೋರಾಟಗಾರ ಗಿರೀಶ್ ಮಟ್ಟೆಣ್ಣವರ್ ಬಂಧನ ಸಹ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಸ್ವತಃ ಗಿರೀಶ್ ಮಟ್ಟೆಣ್ಣವರ್ ಸಹ ಈ ಕುರಿತು ಹೇಳಿಕೆ ನೀಡಿ ತನ್ನ ವಿರುದ್ಧ 20 ಕೇಸ್ ಹಾಕಿದ್ದಾರೆ ಎಂದಿದ್ದಾರೆ.
ಇನ್ನು ಮೊನ್ನೆ ಒಟ್ಟು 4 ದೂರುಗಳ ಕುರಿತಾಗಿ ವಿಚಾರಣೆಗೆ ಹಾಜರಾದೆ, ಬೆಳಗ್ಗೆ 1 ಗಂಟೆಯವರೆಗೆ ವಿಚಾರಣೆ ಮಾಡಿದರು. ಆದರೆ ಅವೆಲ್ಲವೂ ಸುಳ್ಳು ಕೇಸ್ಗಳು ಎಂದರು. ಅಲ್ಲದೇ ಓರ್ವ ನಾಗರಿಕನಾಗಿ ಯಾವ ಕೇಸ್ ಹಾಕಿದ್ದಾರೆ ಎಂದು ಕೇಳುವ ಹಕ್ಕು ನನಗಿದೆ, ನಾನು ಪೊಲೀಸ್ ಠಾಣೆಗೆ ಬಂದಿದ್ದೇನೆ ಬಂಧನ ಮಾಡುವುದಾದರೆ ಮಾಡಲಿ ಎಂದರು. ಮಾನಹಾನಿ ಪ್ರಕರಣದಲ್ಲಂತೂ ಎರಡು ದಿನಕ್ಕೊಮ್ಮೆ ನೋಟಿಸ್ ಬರುತ್ತಲೇ ಇದೆ, ನನ್ನ ಮೇಲೆ 20 ಕೇಸ್ ಇವೆ ಎಂದರು.
ಬೆಂಗಳೂರಿನಲ್ಲಿ ಖಾಲಿ ಸೈಟ್ ಇದೆಯೇ? ಎಚ್ಚರ! ಹೊಸ ನಿಯಮ ಜಾರಿಗೆ ಬಂದ್ರೆ ಭಾರೀ ದಂಡ ಕಟ್ಟೋದು ಪಕ್ಕಾ!
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


