ಹೊಸದಿಲ್ಲಿ: ದೆಹಲಿಯಲ್ಲಿ ಬೀದಿ ನಾಯಿಗಳನ್ನು ನಗರ ಪ್ರದೇಶದಿಂದ ಹೊರಹಾಕಿ ಎಂದು ಆದೇಶ ನೀಡಿ ಶ್ವಾನ ಪ್ರಿಯರಿಗೆ ಬೇಸರವನ್ನುಂಟುಮಾಡಿದ್ದ ಸುಪ್ರೀಂ ಕೋರ್ಟ್ ಇದೀಗ ಬೀದಿನಾಯಿಗಳ ವಿಚಾರವಾಗಿ ಎಲ್ಲ ರಾಜ್ಯಗಳಿಗೂ ಸೂಚನೆಯನ್ನು ಹೊರಡಿಸಿದೆ.
ಶೆಲ್ಟರ್‌ನಲ್ಲಿ ಇರಿಸಲಾಗಿರುವ ಬೀದಿನಾಯಿಗಳನ್ನು ಹೊರಗೆ ಬಿಟ್ಟುಬಿಡಿ, ಆದರೆ ಹೊರಗೆ ಬಿಡುವ ಮುನ್ನ ಸಂತಾನಹರಣ ಇಂಜೆಕ್ಷನ್ ನೀಡಿ ಎಂದು ಹೇಳಿದೆ. ಅಲ್ಲದೇ ಆಕ್ರಮಣಕಾರಿ ನಾಯಿಗಳನ್ನು ಬಂಧನದಲ್ಲಿ ಇರಿಸಬೇಕು ಎಂದೂ ಸಹ ಸುಪ್ರೀಂ ತಿಳಿಸಿದೆ.
ಇನ್ನು ಶ್ವಾನಗಳಿಗೆ ಆಹಾರ ನೀಡುವ ಕುರಿತಾಗಿಯೂ ಸಹ ನಿಯಮ ತಂದಿರುವ ಸುಪ್ರೀಂ ಕೋರ್ಟ್ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ನೀಡುವಂತಿಲ್ಲ, ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ಆಹಾರವನ್ನು ನೀಡಬೇಕು, ಇದು ಎಲ್ಲ ರಾಜ್ಯಗಳಿಗೂ ಅನ್ವಯವಾಗಲಿದೆ ಎಂದು ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
ಕಾಂಗ್ರೆಸ್ ನಾಯಕಿ ಕುಸುಮಾ ನಿವಾಸದ ಮೇಲೆ ಇ.ಡಿ. ದಾಳಿ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


