ಬೀದಿ ನಾಯಿಗಳ ಸಮಸ್ಯೆ ದೇಶಾದ್ಯಂತ ಇದೆ. ಈ ವರ್ಷದ ಮೊದಲ 7 ತಿಂಗಳಲ್ಲಿ ಕರ್ನಾಟಕದಾದ್ಯಂತ ಬರೋಬ್ಬರಿ 2.81 ಲಕ್ಷ ಜನ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ರೇಬೀಸ್ನಿಂದ ಈಗಾಗಲೇ 26 ಅಮೂಲ್ಯ ಜೀವಗಳು ಬಲಿಯಾಗಿವೆ. ಕಳೆದ ವರ್ಷಕ್ಕಿಂತ ಇದು ಶೇ.37ರಷ್ಟು ಹೆಚ್ಚಾಗಿದೆ.
ಬೆಂಗಳೂರಿನಲ್ಲಿ ಬೀದಿ ನಾಯಿಗಳ ನಿಜವಾದ ಸಂಖ್ಯೆ ಎಷ್ಟು? ಗೊತ್ತೆ. ಬಿಬಿಎಂಪಿ 2023ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂಖ್ಯೆ ಸುಮಾರು 2.7 ಲಕ್ಷದಿಂದ 2.8 ಲಕ್ಷದವರೆಗೆ ಇದೆ. ಬೆಂಗಳೂರಿನ ಹೊರವಲಯದಲ್ಲಿರುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿಯೇ ಸುಮಾರು 70,000 ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರಲ್ಲಿ ಕಳೆದ 7 ತಿಂಗಳಲ್ಲಿ ಅಂದ್ರೇ ಈ ವರ್ಷದ ಜುಲೈವರೆಗೆ 13,821 ನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ. ರಾಜ್ಯದಲ್ಲಿ ಈ ಸಂಖ್ಯೆ 2.81 ಲಕ್ಷ ಇದೆ. ಬೆಂಗಳೂರಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ.
.ಡಿಕಥ್ಲಾನ್ ಭಾರತದಲ್ಲಿ €100 ಮಿಲಿಯನ್ ಹೂಡಿಕೆ !
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


