ಧಾರವಾಡ: ಇನ್ಸ್ಟಾಗ್ರಾಮ್ ಹಾಗೂ ಯುಟ್ಯೂಬ್ನಲ್ಲಿ ಉತ್ತರ ಕರ್ನಾಟಕದ ಸೊಗಡಿನ ಕಾಮಿಡಿ ವಿಡಿಯೊಗಳನ್ನು ಮಾಡಿ ರಾಜ್ಯದ ಜನತೆಯ ಮನ ಗೆದ್ದಿದ್ದ ಕ್ವಾಜಾ ಬಂದೇನ್ವಾಜಾ ಮಹಮದ್ ಹನೀಫ್ ಅಲಿಯಾಸ್ ಮುಕಳೆಪ್ಪ ವಿರುದ್ಧ ನಿನ್ನೆ ( ಸೆಪ್ಟೆಂಬರ್ 21 ) ಇದ್ದಕ್ಕಿದ್ದಂತೆ ಗಂಭೀರ ಆರೋಪವೊಂದು ಕೇಳಿಬಂದಿತ್ತು.
ಮುಕಳೆಪ್ಪ ಜತೆ ವಿಡಿಯೊ ಮಾಡುತ್ತಿದ್ದ ಗಾಯತ್ರಿಯ ತಂದೆ ಹಾಗೂ ತಾಯಿ ಈ ಗಂಭೀರ ಆರೋಪವನ್ನು ಮಾಡಿದ್ದರು. ಮುಕಳೆಪ್ಪ ತಮ್ಮ ಮಗಳನ್ನು ಲವ್ ಜಿಹಾದ್ ಮಾಡಿದ್ದಾನೆ ಎಂದು ಹೇಳಿಕೆ ನೀಡಿ ಆತನನ್ನು ವಶಕ್ಕೆ ಪಡೆಯಬೇಕೆಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಕೋಮುಗಲಭೆಯಾದರೆ ಸಾಕು ತಮ್ಮ ಬೇಳೆ ಬೇಯಿಸಿಕೊಳ್ಳೋಣ ಎಂದು ಕಾಯುತ್ತಿದ್ದ ಮಂದಿ ಇದರಲ್ಲೂ ಲಾಭ ಪಡೆದುಕೊಳ್ಳಲು ಮುಂದಾಗಿದ್ದರು. ಗಾಯತ್ರಿ ತಂದೆ – ತಾಯಿ ಪಕ್ಕ ನಿಂತು ಘೋಷಣೆ ಕೂಗುತ್ತಾ ದೊಡ್ಡ ವಿವಾದ ಸೃಷ್ಟಿಸಿಬಿಡೋಣ ಎಂದು ಕಾಯುತ್ತಿದ್ದರು.
ಆದರೆ ಈ ಎಲ್ಲ ಬೆಳವಣಿಗೆಗಳಿಗೆ ಗಾಯತ್ರಿ ತನ್ನ ಹೇಳಿಕೆಯ ವಿಡಿಯೊ ಬಿಡುಗಡೆ ಮಾಡುವ ಮೂಲಕ ಎಳ್ಳೆ ನೀರು ಬಿಟ್ಟಿದ್ದಾಳೆ. ವಿಡಿಯೊದಲ್ಲಿ ನನ್ನ ಗಂಡನ ಬಗ್ಗೆ ಮುಕಳೆಪ್ಪ ಲವ್ ಜಿಹಾದ್ ಎಂದು ಸುದ್ದಿ ಹಾಗೂ ಆರೋಪ ಮಾಡುತ್ತಿದ್ದಾರೆ, ಅದೆಲ್ಲ ಸುಳ್ಳು. ಇಬ್ಬರೂ ಸ್ವಇಚ್ಛೆಯಿಂದ ಪ್ರೀತಿಸಿ ಮದುವೆಯಾಗಿದ್ದೇವೆ. ರಿಜಿಸ್ಟರ್ ಮ್ಯಾರೇಜ್ ಸಹ ಆಗಿದ್ದೇವೆ. ನಮ್ಮ ತಾಯಿ ಮೀಡಿಯಾ ಮುಂದೆ ಸುಳ್ಳುಗಳನ್ನು ಹೇಳುತ್ತಿದ್ದಾರೆ. ನಮ್ಮ ಮದುವೆಯಾದ ಬಳಿಕ ನಮ್ಮ ತಾಯಿಯೇ ಸಹಾಯ ಮಾಡಿದ್ದಾರೆ. ಆ ಎಲ್ಲ ಸಾಕ್ಷಿ ನನ್ನ ಬಳಿ ಇದೆ, ಅದನ್ನು ಅಪ್ಲೋಡ್ ಮಾಡುತ್ತೇನೆ. ಈಗ ಯಾರು ಆಕೆಯ ಮೈಂಡ್ವಾಷ್ ಮಾಡಿದ್ದಾರೋ ಗೊತ್ತಿಲ್ಲ ಎಂದು ಲವ್ ಜಿಹಾದ್ ಆರೋಪ ಒಂದು ಷಡ್ಯಂತ್ರ ಎಂಬುದನ್ನು ಬಟಾಬಯಲು ಮಾಡಿದ್ದಾಳೆ.
ಇನ್ನು ಮುಕಳೆಪ್ಪ ತನಗೆ ಮೈಂಡ್ವಾಷ್ ಮಾಡಿ ಕರೆದುಕೊಂಡು ಹೋಗಿದ್ದಾನೆ ಎಂದು ಹೇಳುತ್ತಿದ್ದಾರೆ. ಆದರೆ ಅದೆಲ್ಲ ಸುಳ್ಳು, ನಾನೇ ಸ್ವಇಚ್ಛೆಯಿಂದ ಬಂದಿದ್ದೇನೆ, ನನಗೆ ಹಾಗೂ ನನ್ನ ಗಂಡನ ಕುಟುಂಬಕ್ಕೆ ಏನಾದರೂ ಆದರೆ ಕಾನೂನಿನಿಂದ ನ್ಯಾಯ ಸಿಗಬೇಕು, ನೀವು ಈ ಯಾವ ಸುದ್ದಿಗಳನ್ನೂ ನಂಬಬೇಡಿ ಎಂದು ಸ್ಪಷ್ಟನೆ ನೀಡಿದ್ದಾಳೆ.
ಗ್ರಾಚ್ಯುಟಿ ಎಂದರೇನು? ಲೆಕ್ಕ ಹಾಕುವ ವಿಧಾನ ಮತ್ತು ಪಡೆಯಲು ಬೇಕಾದ ಸೇವಾ ಅವಧಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


