Wednesday, September 2, 2026
spot_img
More
    spot_img
    HomeSportsCricketAsia Cup 2025: ಸಂಜು ಸ್ಯಾಮ್ಸನ್ ಪಿಚ್‌ಕ್ಯಾಚ್‌ ಹಿಡಿದರೂ ಔಟ್‌ ಕೊಟ್ಟ ಅಂಪೈರ್;‌ ಮೋಸದಾಟ ಎಂದ...

    Asia Cup 2025: ಸಂಜು ಸ್ಯಾಮ್ಸನ್ ಪಿಚ್‌ಕ್ಯಾಚ್‌ ಹಿಡಿದರೂ ಔಟ್‌ ಕೊಟ್ಟ ಅಂಪೈರ್;‌ ಮೋಸದಾಟ ಎಂದ ಪಾಕಿಸ್ತಾನ!

    ದುಬೈ: ದುಬೈ ಅಂತಾರಾಷ್ಟ್ರೀ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಿನ್ನೆ ( ಸೆಪ್ಟೆಂಬರ್‌ 21 ) ನಡೆದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾ ಕಪ್‌ 2025 ( Asia Cup 2025 ) ಸೂಪರ್ 4 ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿದೆ.

    Advertisement

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 171 ರನ್ ಕಲೆಹಾಕಿ ಭಾರತಕ್ಕೆ 172 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಭಾರತ 18.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 174 ರನ್‌ ಬಾರಿಸಿತು.

    ಇನ್ನು ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದಿದ್ದ ಫಾಖರ್‌ ಜಮಾನ್‌ ಔಟ್‌ ಆದ ಪರಿ ಸದ್ಯ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮೂರನೇ ಓವರ್‌ನ ಮೂರನೇ ಎಸೆತದಲ್ಲಿ ಹಾರ್ದಿಕ್‌ ಪಾಂಡ್ಯ ಎಸೆದ ಎಸೆತಕ್ಕೆ ಫಾಕರ್‌ ಜಮಾನ್‌ ಹೊಡೆತ ಬಾರಿಸುವ ಯತ್ನ ಮಾಡಿದರಾದರೂ ಚೆಂಡು ವಿಕೆಟ್‌ ಕೀಪರ್‌ನತ್ತ ಸಾಗಿತ್ತು.

    ವಿಕೆಟ್‌ ಕೀಪರ್‌ ಸಂಜು ಸ್ಯಾಮ್ಸನ್‌ ಇನ್ನೇನು ನೆಲಕ್ಕೆ ಬೀಳಲಿದ್ದ ಚೆಂಡನ್ನು ಹಿಡಿದಿದ್ದರು. ಮೂರನೇ ಅಂಪೈರ್‌ ಸಹ ಅದನ್ನು ಔಟ್‌ ಎಂದೇ ನಿರ್ಧರಿಸಿದರು. ಆದರೆ ಪಾಕಿಸ್ತಾನದ ಅಭಿಮಾನಿಗಳು ಹಾಗೂ ಕೆಲ ಕ್ರಿಕೆಟ್‌ ಪ್ರೇಮಿಗಳು ಇದನ್ನು ನಾಟ್‌ಔಟ್‌ ಎಂದು ವಾದಿಸಿ ಮೋಸ ಎನ್ನತೊಡಗಿದ್ದಾರೆ.

    ಹೌದು, ಸಂಜು ಸ್ಯಾಮ್ಸನ್‌ ಕ್ಯಾಚ್‌ ಪಡೆಯುವ ಮುನ್ನ ಚೆಂಡು ನೆಲಕ್ಕ ತಾಕಿದಂತೆ ಕಾಣುತ್ತಿದ್ದು, ಈ ಕಾರಣದಿಂದಾಗಿ ಇದನ್ನು ನಾಟ್‌ಔಟ್‌ ಎಂಬ ವಾದಗಳು ಕೇಳಿಬರುತ್ತಿವೆ. ಅಂಪೈರ್‌ ಔಟ್‌ ಎನ್ನುತ್ತಿದ್ದಂತೆ ಬ್ಯಾಟ್ಸ್‌ಮನ್‌ ಸಹ ನಗುತ್ತ ಇದು ನಾಟ್‌ಔಟ್‌ ಎಂಬಂತೆ ಪೆವಿಲಿಯನ್‌ ಕಡೆ ಹೆಜ್ಜೆ ಹಾಕಿದರು. ಅತ್ತ ಪಾಕಿಸ್ತಾನದ ಕೋಚ್‌ ಸಹ ಅಂಪೈರ್‌ ಜತೆ ಸಂವಾದ ನಡೆಸಿದರು.

    ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ವ್ಯಾಪಕ ಚರ್ಚೆ ಏರ್ಪಟ್ಟಿದ್ದು, ಪಾಕ್‌ ಕ್ರಿಕೆಟ್‌ ಅಭಿಮಾನಿಗಳು ಇದು ಪಿಚ್‌ಕ್ಯಾಚ್‌, ನಾಟ್‌ಔಟ್‌ ಎಂದರೆ, ಇನ್ನೂ ಕೆಲವರು ಚೆಂಡು ಸಂಜು ಸ್ಯಾಮ್ಸನ್‌ ಗ್ಲೌಸ್‌ ಮೇಲೆ ಪಿಚ್‌ ಬಿದ್ದಿದ್ದು, ನೆಲಕ್ಕೆ ತಾಕಿಲ್ಲ, ಹೀಗಾಗಿ ಇದು ಔಟ್‌ ಎಂದು ಪ್ರತಿವಾದಿಸಿದ್ದಾರೆ.

    ಮೈಸೂರು ದಸರಾ ಉದ್ಘಾಟನೆಗೆ ಕ್ಷಣಗಣನೆ; ಗಾಢ ನೀಲಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ಚಾಮುಂಡಿ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading