ದುಬೈ: ದುಬೈ ಅಂತಾರಾಷ್ಟ್ರೀ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ ( ಸೆಪ್ಟೆಂಬರ್ 21 ) ನಡೆದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಏಷ್ಯಾ ಕಪ್ 2025 ( Asia Cup 2025 ) ಸೂಪರ್ 4 ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿ ಭಾರತಕ್ಕೆ 172 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಭಾರತ 18.5 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 174 ರನ್ ಬಾರಿಸಿತು.
ಈ ಗೆಲುವಿನೊಂದಿಗೆ ಭಾರತ ಈ ಏಷ್ಯಾ ಕಪ್ ಟೂರ್ನಿಯಲ್ಲಿ ಎರಡನೇ ಬಾರಿಗೆ ಪಾಕಿಸ್ತಾನವನ್ನು ಮಣಿಸಿತು. ಹೌದು, ಗ್ರೂಪ್ ಹಂತದಲ್ಲಿ ಒಮ್ಮೆ ಹಾಗೂ ಈಗ ಮತ್ತೊಮ್ಮೆ ಪಾಕಿಸ್ತಾನ ಭಾರತದ ಎದುರು ಶರಣಾಗಿದೆ.
ಇನ್ನು ಪಂದ್ಯ ಮುಗಿದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಗಳನ್ನು ಯಾವುದೇ ಕಾರಣಕ್ಕೂ ಪೈಪೋಟಿ ಎನ್ನಲೇಬೇಡಿ. ಎರಡು ತಂಡಗಳು ಸೆಣಸಾಡುವಾಗ ಸಮನಾಗಿ 7 – 7 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ ಅಥವಾ 8 -7 ಪಂದ್ಯಗಳಲ್ಲಿ ಗೆದ್ದಿದ್ದರೆ ಅದನ್ನು ಪೈಪೋಟಿ ಎಂದು ಕರೆಯಿರಿ. 10 – 1 ಅಥವಾ 13 – 0 ಗೆಲುವುಗಳ ಅಂತರವಿರುವಾಗ ಅದನ್ನು ಪೈಪೋಟಿ ಎನ್ನಬೇಡಿ ಎಂದು ನೇರವಾಗಿ ಪಾಕಿಸ್ತಾನ ಮಾನ ಹರಾಜಾಕಿದ್ದಾರೆ.
ಮುಕಳೆಪ್ಪ ವಿರುದ್ಧ ಲವ್‌ಜಿಹಾದ್ ಆರೋಪ; ‘ನನ್ನ ಗಂಡ’ ಎಂದು ವಿಡಿಯೊ ಹರಿಬಿಟ್ಟು ಷಡ್ಯಂತ್ರ ಬಿಚ್ಚಿಟ್ಟ ಗಾಯತ್ರಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


