Wednesday, November 4, 2026
spot_img
More
    spot_img
    HomeStateDistrictಚಾಮುಂಡಿಬೆಟ್ಟಕ್ಕೆ ಬರಬೇಕಿದ್ದ ಹರಕೆ ಇತ್ತು, ಈಗ ಚಾಮುಂಡಿಯೇ ನನ್ನನ್ನು ಕರೆಸಿಕೊಂಡಿದ್ದಾಳೆ ಎಂದ ಬಾನು ಮುಷ್ತಾಕ್

    ಚಾಮುಂಡಿಬೆಟ್ಟಕ್ಕೆ ಬರಬೇಕಿದ್ದ ಹರಕೆ ಇತ್ತು, ಈಗ ಚಾಮುಂಡಿಯೇ ನನ್ನನ್ನು ಕರೆಸಿಕೊಂಡಿದ್ದಾಳೆ ಎಂದ ಬಾನು ಮುಷ್ತಾಕ್

    ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದ್ದು, ಉದ್ಘಾಟಕಿ ಬಾನು ಮುಷ್ತಾಕ್‌ ಅವರು ಭಾಷಣ ಹೀಗಿದೆ.

    ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಬಾನು ಮುಷ್ತಾಕ್‌ ಅವರು, ಈ ದಿನ ದಸರಾ ಉತ್ಸವದ ಉದ್ಘಾಟನೆಯನ್ನು ತಾಯಿ ಚಾಮುಂಡೇಶ್ವರಿ ಕೃಪಾರ್ಶಿವಾದದಿಂದ ಉದ್ಘಾಟಿಸಿದ್ದೇನೆ. ನನ್ನ ಗೆಳತಿಯೊಬ್ಬರು ಚಾಮುಂಡಿ ಬೆಟ್ಟಕ್ಕೆ ಕರೆದುಕೊಂಡು ಬರುತ್ತೇನೆ ಎಂದು ಹರಕೆ ಹೊತ್ತಿದ್ದಳು. ಬರಲು ಸಾಧ್ಯವಾಗಿರಲಿಲ್ಲ. ಆದರೆ ರಾಜ್ಯ ಸರ್ಕಾರದ ಮೂಲಕ ನನ್ನನ್ನು ಚಾಮುಂಡೇಶ್ವರಿ ಕರೆಸಿಕೊಂಡಿದ್ದಾಳೆ. ಒಂದು ಚರಿತ್ರಿಕ ಸನ್ನಿವೇಶಗಳು ಉದ್ಭವವಾದರು ತಾಯಿ ಚಾಮುಂಡೇಶ್ವರಿ ಕರೆಸಿಕೊಂಡಿದ್ದಾಳೆ. ಸಾಂಸ್ಕೃತಿಕ ಉತ್ಸವ ಎಲ್ಲರನ್ನು ಸಮನ್ವಯಗೊಳಿಸುತ್ತದೆ. ಈ ಮಣ್ಣಿನಲ್ಲಿ ಹುಟ್ಟಿರುವ ಪ್ರತಿಯೊಬ್ಬರಿಗೂ ಪಾಲ್ಗೊಳ್ಳುವ ಅವಕಾಶ ಇದೆ. ಕನ್ನಡ ಭಾಷೆಯ ಹೃದಯದ ಸ್ಪಂದನೆಗೆ ಈ ಹಬ್ಬ ನೆನಪಿಸುತ್ತದೆ. ಏಕತೆಯ ಸುಗಂಧ ಈ ಹಬ್ಬದ ಪ್ರತೀಕವಾಗಿದೆ ಮೈಸೂರಿನ ಉರ್ದು ಭಾಷಿಕರು ದಸರಾ ಹಬ್ಬದ ಎಲ್ಲಾ ಹತ್ತು ದಿನಗಳಲ್ಲೂ ತಮ್ಮ ಗುರುತುಗಳನ್ನು ನೀಡಿದ್ದಾರೆ. ಎಲ್ಲರನ್ನು ಒಳಗೊಂಡು ಆಚರಿಸುವ ಸಂಸ್ಕೃತಿ ಇದಾಗಿದೆ. ನನ್ನ ಮಾವ ಮೈಸೂರು ಮಹಾರಾಜರ ಅಂಗ ರಕ್ಷಕರಾಗಿದ್ದರು. ಅಂತಹ ಅನೇಕ ಮುಸ್ಲಿಮರು ಮಹಾರಾಜರಿಗೆ ಅಂಗರಕ್ಷಕರಾಗಿದ್ದರು. ಮಹಾರಾಜರು ಮುಸ್ಲಿಂರನ್ನು ನಂಬಿ ಅವರನ್ನು ಅಂಗರಕ್ಷಕರಾಗಿ ಇಟ್ಟು ಕೊಂಡಿದ್ದು ಬಹಳ ಖುಷಿ. ನಾವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗೌರವಿಸೋಣ. ಈ ದಸರಾ ಕೇವಲ ಮೈಸೂರಿಗೆ ಸೀಮಿತವಾಗದೆ ಇಡೀ ಜಗತ್ತಿನ ಮಾನವ ಕುಲಕ್ಕೆ ಶಾಂತಿ, ನ್ಯಾಯ, ಸಮಾನತೆಯ ದೀಪವಾಗಲಿ. ಈ ದಸರಾ ಆಚರಣೆ ಇಡೀ ಪ್ರಪಂಚಾದ್ಯಂತ ನೆಲೆ ಕಂಡುಕೊಳ್ಳಲಿ ಎಂದು ಆಶಿಸುತ್ತೇನೆ. ನಾವೆಲ್ಲರೂ ಒಂದೇ ಗಗನದಡಿಯ ಪಯಣಿಗರು. ಮನುಷ್ಯ ಮಾತ್ರ ಗಡಿಗಳನ್ನು ಹಾಕಿಕೊಂಡಿರುತ್ತಾನೆ. ಪರಿಸರ ಎಂದಿಗೂ ಗಡಿ ಹಾಕಿಕೊಳ್ಳುವುದಿಲ್ಲ.. ಸ್ತ್ರೀ ಎಂದರೆ ಕೇವಲ ತಾಯಿ ಮಾತ್ರವಲ್ಲ ಅನ್ಯಾಯದ ವಿರುದ್ಧ ಹೊರಡುವ ಶಕ್ತಿಯು ಹೌದು. ನಾವೆಲ್ಲರೂ ಒಂದೇ ಗಗನದಡಿಯ ಪಯಣಿಗರು. ಮನುಷ್ಯ ಮಾತ್ರ ಗಡಿಗಳನ್ನು ಹಾಕಿಕೊಂಡಿರುತ್ತಾನೆ. ಪರಿಸರ ಎಂದಿಗೂ ಗಡಿ ಹಾಕಿಕೊಳ್ಳುವುದಿಲ್ಲ.. ನಾನು ನೂರಾರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಮಂಗಳಾರತಿಯನ್ನು ತೆಗೆದುಕೊಂಡಿದ್ದೇನೆ. ಎಷ್ಟೇ ಸವಾಲುಗಳು ಬಂದರು ದಿಟ್ಟವಾಗಿ ನಿಂತು ನೈತಿಕ ಬೆಂಬಲ ನೀಡಿದ ಸಿಎಂ ಸಿದ್ದರಾಮಯ್ಯ ಅವರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಭಾಷಣ ಮುಗಿಸಿದರು.

    ‌ಮೈಸೂರು ದಸರಾ ಉದ್ಘಾಟನೆಗೆ ಕ್ಷಣಗಣನೆ; ಗಾಢ ನೀಲಿ ರೇಷ್ಮೆ ಸೀರೆಯಲ್ಲಿ ಕಂಗೊಳಿಸಿದ ಚಾಮುಂಡಿ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search