ಕರ್ನಾಟಕ ಸರ್ಕಾರಿ ವಿಮಾ ಇಲಾಖೆ ಸುತ್ತೋಲೆಯೊಂದನ್ನು ಹೊರಡಿಸಿದೆ. ರಾಜ್ಯ ಸರ್ಕಾರಿ ನೌಕರರ ವೇತನದಿಂದ, ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲಿನ ವಿಮಾ ಕಂತು, ಸಾಲದ ಕಂತು ಮತ್ತು ಸಾಲದ ಬಡ್ಡಿಯ ಕಂತುಗಳ ನಿಖರ ಮೊಬಲಗಿನ ಕಟಾವಣೆ ಹಾಗೂ ಕಟಾವಣೆ ಮೊಬಲಗಿನ ತಿದ್ದುಪಡಿ ಮಾಡುವ ಬಗ್ಗೆ ಎಂಬ ವಿಷಯವನ್ನು ಈ ಸುತ್ತೋಲೆ ಒಳಗೊಂಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್.ಆರ್.ಎಂ.ಎಸ್. ಖಜಾನೆ ತಂತ್ರಾಂಶಗಳ ಅನುಕಲನ ವೇದಿಕೆಯ ಮೂಲಕ ರಾಜ್ಯ ಸರ್ಕಾರಿ ನೌಕರರ ವೇತನದಿಂದ ಕಟಾವಣೆಯಾಗುತ್ತಿರುವ ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲಿನ ವಿಮಾ ಕಂತು, ಸಾಲದ ಕಂತು ಮತ್ತು ಸಾಲದ ಬಡ್ಡಿಯ ಕಂತಿನ ಮೊಬಲಗುಗಳು, ವಿಮಾ ಇಲಾಖೆಯ ದತ್ತಾಂಶದಂತೆ ಕಟಾವಣೆಯಾಗಬೇಕಿರುವ ಮೊಬಲಗುಗಳಿಗಿಂತ ವ್ಯತ್ಯಾಸವಿರುವುದು ಕಂಡುಬಂದಿರುತ್ತದೆ ಎಂದು ಹೇಳಿದೆ.
ವ್ಯತ್ಯಾಸವಿರುವ ಪ್ರಕರಣಗಳನ್ನು ಗುರುತಿಸಿ, ದತ್ತಾಂಶವನ್ನು ಜಿಲ್ಲಾವಾರು ಪ್ರತ್ಯೇಕಿಸಿ, Excel Sheet ನಲ್ಲಿ ನಮೂದಿಸಿ, ಜಿಲ್ಲಾ ವಿಮಾಧಿಕಾರಿಗಳಿಗೆ ಕಳುಹಿಸಲಾಗಿದೆ. ಸದರಿ ಪ್ರಕರಣಗಳನ್ನು ಭೌತಿಕ ಕಡತಗಳೊಂದಿಗೆ ಪರಿಶೀಲಿಸಿ, ನ್ಯೂನತೆಯಿರುವ ಪ್ರಕರಣಗಳನ್ನು ಪ್ರತ್ಯೇಕಿಸಿ, ವಿಮಾದಾರರ ವೇತನ ಬಟವಾಡೆ ಅಧಿಕಾರಿಗಳಿಗೆ ಪತ್ರ ಬರೆದು, ರಾಜ್ಯ ಸರ್ಕಾರಿ ನೌಕರರ ವೇತನದಲ್ಲಿ ಕಟಾವಣೆ ಮಾಡುತ್ತಿರುವ ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲಿನ ವಿಮಾ ಕಂತು, ಸಾಲದ ಕಂತು ಮತ್ತು ಸಾಲದ ಬಡ್ಡಿಯ ಕಂತುಗಳ ಮೊಬಲಗುಗಳಲ್ಲಿ ವ್ಯತ್ಯಾಸವನ್ನು ಸರಿಪಡಿಸುವಂತೆ, ಹಾಗೂ ರದ್ದು ಪಡಿಸಬೇಕಿರುವ ಜೀವ ವಿಮಾ ಪಾಲಿಸಿಗಳನ್ನು ಪಟ್ಟಿಮಾಡಿ ನಿಯಮಾನುಸಾರ ಶಿಫಾರಸ್ಸಿನೊಂದಿಗೆ ಎ.ವಿ.ಜಿ., ಶಾಖೆಗೆ ಕಳುಹಿಸುವಂತೆ ಸೂಚಿಸಲಾಗಿತ್ತು.
ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲಿನ ವಿಮಾ ಕಂತು, ಸಾಲದ ಕಂತು ಮತ್ತು ಸಾಲದ ಬಡ್ಡಿಯ ಕಂತುಗಳ ಮೊಬಲಗುಗಳನ್ನು ನಿಯಮಾನುಸಾರ ಹೆಚ್.ಆರ್.ಎಂ.ಎಸ್., ನಲ್ಲಿ ತಿದ್ದುಪಡಿ ಮಾಡುವ ಅವಕಾಶವನ್ನು ವಿಮಾ ಇಲಾಖೆಗೆ ನೀಡಲಾಗಿರುತ್ತದೆ. ಈ ಕೆಲಸವನ್ನು ಪ್ರಸ್ತುತ ವಿಮಾ ಇಲಾಖೆಯ ಗಣಕ ವಿಭಾಗದಲ್ಲಿ ನಿರ್ವಹಿಸಲಾಗುತ್ತಿದೆ. ಆದುದರಿಂದ, ವಿಮಾ ಇಲಾಖೆಯ ಜಿಲ್ಲಾ ವಿಮಾಧಿಕಾರಿಗಳು ನಿರ್ವಹಿಸಬೇಕಾದ ಕಾರ್ಯವಿಧಾನ ಕೆಳಕಂಡಂತ್ತಿರುತ್ತವೆ.
* ಹೆಚ್.ಆರ್.ಎಂ.ಎಸ್., ನಲ್ಲಿ ವಿಮಾ ಕಂತು, ಸಾಲದ ಕಂತು ಮತ್ತು ಸಾಲದ ಬಡ್ಡಿಯ ಕಂತುಗಳ ಮೊಬಲಗು (Insurance Details / Loan and Recoveries) ಗಳನ್ನು ತಿದ್ದುಪಡಿ ಮಾಡುವ ಸಂಬಂಧ ಕೋರಿಕೆಗಳನ್ನು ವಿಮಾದಾರರಿಂದ ನೇರವಾಗಿ ವಿಮಾ ಇಲಾಖೆಯ ಗಣಕ ವಿಭಾಗದಲ್ಲಿ ಸ್ವೀಕರಿಸುವುದಿಲ್ಲ.
* ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ಮೇಲಿನ ವಿಮಾ ಕಂತು, ಸಾಲದ ಕಂತು ಮತ್ತು ಸಾಲದ ಬಡ್ಡಿಯ ಕಂತುಗಳ ಮೊಬಲಗುಗಳನ್ನು (Insurance Details / Loan and Recoveries) ಹೆಚ್.ಆರ್.ಎಂ.ಎಸ್., ನಲ್ಲಿ ತಿದ್ದುಪಡಿ ಮಾಡುವ ಬಗ್ಗೆ ವಿಮಾದಾರರಿಂದ ಜಿಲ್ಲಾ ವಿಮಾ ಕಛೇರಿಗಳಿಗೆ ಸಲ್ಲಿಕೆಯಾಗುವ ಕೋರಿಕೆಗಳನ್ನು ವಿಷಯವಾರು KGIDMIS Portal ತಂತ್ರಾಂಶದಲ್ಲಿ Ticket Rise ಮಾಡುವ ಮೂಲಕ ಕೋರಿಕೆಗಳನ್ನು ವಿಮಾ ಇಲಾಖೆಯ ಗಣಕ ವಿಭಾಗಕ್ಕೆ ಸಲ್ಲಿಸಬೇಕು.
* ರದ್ದುಪಡಿಸಿರುವ, ವಿಮಾ ಇಲಾಖೆಯ ಜೀವ ವಿಮಾ ಪಾಲಿಸಿಗಳ ವಿವರವನ್ನು ಪಟ್ಟಿ ಮಾಡಿ, ವಿಮಾ ಇಲಾಖೆಯ ಗಣಕ ವಿಭಾಗಕ್ಕೆ ಸಲ್ಲಿಸಬೇಕು. ಸದರಿ ವಿವರವನ್ನು ಗಣಕ ವಿಭಾಗದಲ್ಲಿ ಕ್ರೋಢೀಕರಿಸಿ, DataVerification Portal ನಲ್ಲಿ ರದ್ದಾದ ಪಾಲಿಸಿಗಳ ವಿಮಾ ಮೊತ್ತ ಮತ್ತು ವಿಮಾ ಕಂತನ್ನು ಶೂನ್ಯ (Zero) ಮಾಡಲಾಗುವುದು. Kgidverificationportal ನಲ್ಲಿ ಇ-ಸಹಿ ಮಾಡುವ ಮೂಲಕ ದತ್ತಾಂಶವನ್ನು kgidonline ತಂತ್ರಾಂಶಕ್ಕೆ ಕಳುಹಿಸಬೇಕು.
* ಜೀವ ವಿಮಾ ಪಾಲಿಸಿಗಳ ಮೇಲಿನ ವಿಮಾ ಕಂತುಗಳ ಕಟಾವಣೆಯನ್ನು ಪಾಲಿಸಿಯ ಹೊಣೆ ದಿನಾಂಕದಿಂದ ಆರಂಭಿಸದೇ, ವಿಮಾ ಕಂತು ಕಟಾವಣೆಯನ್ನು ಇತ್ತೀಚೆಗೆ ಆರಂಭಿಸಿರುವ ಪಾಲಿಸಿಗಳನ್ನು ಮುಂದುವರೆಸುವ/ ರದ್ದು ಪಡಿಸುವ ಬಗ್ಗೆ ಆದೇಶ ಕೋರಿ ಎ.ವಿ.ಜಿ. ಶಾಖೆಗೆ KGID MIS Portal (ವಿಮಾ ಇಲಾಖೆಯ ಸಹಾಯವಾಣಿ) ನಲ್ಲಿ Ticket Rise ಮಾಡುವ ಮೂಲಕ ಕೋರಿಕೆ ಸಲ್ಲಿಸಬೇಕು. ಎ.ವಿ.ಜಿ. ಶಾಖೆಯಿಂದ ಪಾಲಿಸಿ ರದ್ದತಿ ಬಗ್ಗೆ ಆದೇಶ ಬಂದಲ್ಲಿ ಅಂತಹ ಪಾಲಿಸಿಗಳ ವಿವರವನ್ನು KGID MIS Portal (ವಿಮಾ ಇಲಾಖೆಯ ಸಹಾಯವಾಣಿ) ನಲ್ಲಿ Ticket Rise ಮಾಡುವ ಮೂಲಕ ರದ್ದಾದ ಪಾಲಿಸಿಗಳ ವಿಮಾ ಮೊತ್ತ ಮತ್ತು ವಿಮಾ ಕಂತನ್ನು ಶೂನ್ಯಗೊಳಿಸಲು ಗಣಕ ವಿಭಾಗಕ್ಕೆ ಕೋರಿಕೆ ಸಲ್ಲಿಸಬೇಕು. ನಂತರ ಕ್ರಮ ಸಂಖ್ಯೆ 5 ರಲ್ಲಿ ತಿಳಿಸಿರುವಂತೆ ಕ್ರಮವಹಿಸಬೇಕು. ಪಾಲಿಸಿ ಮುಂದುವರೆಸುವಂತೆ ಆದೇಶ ಬಂದಲ್ಲಿ, ಕ್ರಮ ಸಂಖ್ಯೆ 4 ರಲ್ಲಿ ತಿಳಿಸಿರುವಂತೆ ಕ್ರಮವಹಿಸಬೇಕು.
* ಜೀವ ವಿಮಾ ಪಾಲಿಸಿಗಳ ಮೇಲಿನ ವಿಮಾ ಕಂತಿನ ಕಟಾವಣೆಯನ್ನು ಪಾಲಿಸಿಯ ಹೊಣೆಯ ದಿನಾಂಕದಿಂದ ಆರಂಭಿಸಿ, ನಂತರ ಕಟಾವಣೆ ಮಾಡದಿರುವ ಪ್ರಕರಣಗಳನ್ನು ಗುರುತಿಸಿ, ಅಂತಹ ಪಾಲಿಸಿಗಳನ್ನು ಮುಂದುವರೆಸುವ/ ರದ್ದುಪಡಿಸುವ ಬಗ್ಗೆ ಆದೇಶ ಕೋರಿ ಎ.ವಿ.ಜಿ. ಶಾಖೆಗೆ KGID MIS Portal (ವಿಮಾ ಇಲಾಖೆಯ ಸಹಾಯವಾಣಿ) ನಲ್ಲಿ Ticket Rise ಮಾಡುವ ಮೂಲಕ ಕೋರಿಕೆ ಸಲ್ಲಿಸಬೇಕು. ಎ.ವಿ.ಜಿ. ಶಾಖೆಯಿಂದ ಪಾಲಿಸಿ ರದ್ದತಿ ಬಗ್ಗೆ ಆದೇಶ ಬಂದಲ್ಲಿ ಅಂತಹ ಪಾಲಿಸಿಗಳ ವಿವರವನ್ನು KGID MIS Portal (ವಿಮಾ ಇಲಾಖೆಯ ಸಹಾಯವಾಣಿ) ನಲ್ಲಿ Ticket Rise ಮಾಡುವ ಮೂಲಕ ರದ್ದಾದ ಪಾಲಿಸಿಗಳ ವಿಮಾ ಮೊತ್ತ ಮತ್ತು ವಿಮಾ ಕಂತನ್ನು ಶೂನ್ಯಗೊಳಿಸಲು ಗಣಕ ವಿಭಾಗಕ್ಕೆ ಕೋರಿಕೆ ಸಲ್ಲಿಸಬೇಕು.
* ಸಾಲದ ಬಾಕಿ ಮೊತ್ತವನ್ನು ಪೂರ್ಣವಾಗಿ ಪಾವತಿಸಿ, ಸಾಲದ ಕಂತುಗಳ ಕಟಾವಣೆಯನ್ನು ನಿಲ್ಲಿಸುವಂತೆ ವಿಮಾದಾರರಿಂದ ಜಿಲ್ಲಾ ವಿಮಾ ಕಛೇರಿಗಳಿಗೆ ಸಲ್ಲಿಕೆಯಾಗಿರುವ ಕೋರಿಕೆಗಳನ್ನು, ಜಿಲ್ಲಾ ವಿಮಾ ಕಛೇರಿಗಳಲ್ಲಿ ಪರಿಶೀಲಿಸಿ, ಕೋರಿಕೆ ಪ್ರಕರಣದ ಸಾಲ ಮತ್ತು ಬಡ್ಡಿ ಪೂರ್ಣಪ್ರಮಾಣದಲ್ಲಿ ವಿಮಾ ಇಲಾಖೆಗೆ ಸ್ವೀಕೃತಿಯಾಗಿರುವುದನ್ನು ದೃಢಪಡಿಸಿಕೊಂಡು, ಸಾಲದ ಕಂತು ಮತ್ತು ಬಡ್ಡಿ ಕಂತುಗಳ ಕಟಾವಣೆಯನ್ನು ನಿಲ್ಲಿಸಲು KGID MIS Portal (ವಿಮಾ ಇಲಾಖೆಯ ಸಹಾಯವಾಣಿ) ನಲ್ಲಿ Ticket Rise ಮಾಡುವ ಮೂಲಕ ಗಣಕ ವಿಭಾಗಕ್ಕೆ ಕೋರಿಕೆ ಸಲ್ಲಿಸಬೇಕು.
* ಸಾಲದ ಬಾಕಿ ಮೊತ್ತವನ್ನು ಪೂರ್ಣವಾಗಿ ಪಾವತಿಸಿ, ಸಾಲದ ಕಟಾವಣೆಯನ್ನು ನಿಲ್ಲಿಸುವಂತೆ ಕೋರಿಕೆ ಸಲ್ಲಿಸಿರುವ ಪ್ರಕರಣಗಳನ್ನು ಪರಿಶೀಲಿಸಿ, ಸಾಲದ ಮೊತ್ತ ಪೂರ್ಣವಾಗಿ ವಿಮಾ ಇಲಾಖೆಗೆ ಪಾವತಿಯಾಗಿದ್ದು, ಸಾಲದ ಬಡ್ಡಿ ಮೊತ್ತ ಬಾಕಿಯಿರುವ ಪಕರಣಗಳಲ್ಲಿ ಕಟಾವಣೆ ಮಾಡಬೇಕಿರುವ ಸಾಲದ ಬಡ್ಡಿಯ ಮೊತ್ತ ಹಾಗೂ ಕಂತಿನ ಮೊಬಲಗಿನ ವಿವರಗಳೊಂದಿಗೆ KGID MIS Portal (ವಿಮಾ ಇಲಾಖೆಯ ಸಹಾಯವಾಣಿ) ನಲ್ಲಿ Ticket Rise ಮಾಡುವ ಮೂಲಕ ಸಾಲದ ಬಡ್ಡಿ ಕಂತಿನ ಕಟಾವಣೆಯನ್ನು ಆರಂಭಿಸಲು ಗಣಕ ವಿಭಾಗಕ್ಕೆ ಕೋರಿಕೆ ಸಲ್ಲಿಸಬೇಕು.
ಈ ಮೇಲೆ ತಿಳಿಸಿದಂತೆ Ticket Rise ಮಾಡುವಾಗ ತಪ್ಪು ಮಾಹಿತಿ ನೀಡಿ ಯಾವುದೇ ದತ್ತಾಂಶದಲ್ಲಿ ತಪ್ಪುಗಳಾದಲ್ಲಿ ಸಂಬಂಧಪಟ್ಟ ನೌಕರರು/ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


