ರಾಂಡ್‌ಸ್ಟಾಡ್ ಇಂಡಿಯಾ ಎಂಬ ಪ್ರಮುಖ ಎಲೆಕ್ಟ್ರಾನಿಕ್ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮಹಿಳಾ ಅಭ್ಯರ್ಥಿಗಳು ಇದರ ಸದುಪಯೋಗ ಪಡೆಯಲು ಹೆಸರು ನೋಂದಾಯಿಸಿ ಮತ್ತು ಅರ್ಜಿ ಸಲ್ಲಿಸುವಂತೆ ಕೊಪ್ಪಳ ಜಿಲ್ಲಾ ಕೌಶಲ್ಯ ಮಷಿನ್ ಮತ್ತು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕೆ. ರವಿಶಂಕರ್ ತಿಳಿಸಿದ್ದಾರೆ.
ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ವಿಶಿಷ್ಟ ಸಾರ್ವಜನಿಕ ಖಾಸಗಿ ಸಹಭಾಗಿತ್ವ ಸಂಸ್ಥೆಯಾದ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ, ಭಾರತದಾದ್ಯಂತ ದೊಡ್ಡ ಪ್ರಮಾಣದ ಕೌಶಲ್ಯ ಅಭಿವೃದ್ಧಿ ಉಪಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.
ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳ ನಡುವಿನ ಅಂತರವನ್ನು ಕಡಿಮೆ ಮಾಡಲು. ಜಾಬ್ ಎಕ್ಸ್ ಎಂಬ ಡಿಜಿಟಲ್ ಉದ್ಯೋಗ ವಿನಿಮಯ ವೇದಿಕೆಯನ್ನು ಪರಿಚಯಿಸಿದ್ದು. ಇದನ್ನು ಅಭ್ಯರ್ಥಿಗಳನ್ನು ಉದ್ಯೋಗ ಅವಕಾಶಗಳೊಂದಿಗೆ ಸಂಪರ್ಕಿಸಲು ವಿನ್ಯಾಸಗೊಳಿಸಲಾಗಿದೆ.
ರಾಂಡ್ ಸ್ಟಾಡ್ ಇಂಡಿಯಾದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಮಹಿಳಾ ಅಭ್ಯರ್ಥಿಗಳಿಂದ ಉದ್ಯೋಗ ಅವಕಾಶಕ್ಕಾಗಿ ಅರ್ಜಿಯನ್ನು ಕರೆದಿದ್ದು, ಈ ಉದ್ಯೋಗದ ಅವಕಾಶವನ್ನು ಸದುಪಯೋಗ ಪಡೆಯಬಹುದಾಗಿದೆ.
ಉದ್ಯೋಗ ವಿವರ: ಅಸೆಂಬ್ಲಿ ಲೈನ್ ಆಪರೇಟರ್ (ಮಹಿಳೆಯರು ಮಾತ್ರ). ಸ್ಥಳ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಗ್ರಾಮ. ವೇತನ 14,285 ರೂ.ಗಳು. ಪಿಎಫ್, ಇಎಸ್‌ಐ, ಬೋನಸ್, ಹಾಜರಾತಿ ಬೋನಸ್. ತ್ರೈಮಾಸಿಕ ರಜೆ ನಗದು, ಸಬ್ಸಿಡಿ ದರದಲ್ಲಿ, ಆಹಾರ, ಕ್ಯಾಂಟೀನ್, ಹಾಸ್ಟೆಲ್ ಮತ್ತು ಮಹಿಳೆಯರಿಗೆ ಭದ್ರತೆ ಮತ್ತು ಸುರಕ್ಷಿತ ಪ್ರಯಾಣವನ್ನು ಖಾತ್ರಿಪಡಿಸುವ ವಾಹನಗಳವ್ಯವಸ್ಥೆ ಇರುತ್ತದೆ. ಜೊತೆಗೆ ಪ್ರಯಾಣ ಸೌಲಭ್ಯಗಳನ್ನು 15 ತಿಂಗಳ ಒಪ್ಪಂದದ ಅವಧಿ ಹೆಚ್ಚುವರಿಯಾಗಿ ಒದಗಿಸುತ್ತದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿ ಅಥವಾ ಯಾವುದೇ ಪದವಿ (ಬಿ.ಕಾಂ, ಬಿಬಿಎ, ಬಿಬಿಎಂ, ಬಿಎ, ಬಿಎಸ್ಸಿ, ಬಿಸಿಎ), ಐಟಿಐ, ಡಿಪ್ಲೊಮಾ ವ್ಯಾಸಂಗ ಮಾಡಿದ್ದು, 18 ರಿಂದ 30 ವರ್ಷಗಳೊಳಗೆ ಇರಬೇಕು.
NSDC Jobx ವೇದಿಕೆಯ ಮೂಲಕ ಅಭ್ಯರ್ಥಿ ನೋಂದಣಿ ಮತ್ತು ಅರ್ಜಿಗಳನ್ನು ಸಲ್ಲಿಸಬೇಕು. ಅಭ್ಯರ್ಥಿ ನೋಂದಣಿ ಮಾಡಲು https://www.nsdcjobx.com/jobseeker/QuickReg ಲಿಂಕ್ ಮತ್ತು https://www.nsdcjobx.com/homejob view?id=66041 ಲಿಂಕ್ ನಲ್ಲಿ ಉದ್ಯೋಗ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿ ಸಮನ್ವಯಕ್ಕಾಗಿ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿನ ಕೆ.ಜಿ.ಐ.ಡಿ ಕಚೇರಿ ಎದುರುಗಡೆ ಇರುವ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳ ಕಚೇರಿಗೆ ಸಂಪರ್ಕಿಸಬಹುದು.
ಆಕ್ಷೇಪಣೆ ಆಹ್ವಾನ: ಕೊಪ್ಪಳ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಪೋಷಣ ಅಭಿಯಾನ ಯೋಜನೆಯಡಿ ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿ ಗುತ್ತಿಗೆ ಆಧಾರದ 3 ಹುದ್ದೆಗೆ ಸ್ವೀಕೃತಗೊಂಡ ಅರ್ಜಿಗಳಿಗೆ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಪೋಷಣ ಅಭಿಯಾನ ಯೋಜನೆಯಡಿ ಜಿಲ್ಲಾ ಮತ್ತು ತಾಲ್ಲೂಕು ಹಂತದಲ್ಲಿನ ಗುತ್ತಿಗೆ ಆಧಾರದ 3 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಈ 3 ಹುದ್ದೆಗಳಿಗೆ ಅರ್ಹ, ಅನರ್ಹ ಹಾಗೂ ತಾತ್ಕಾಲಿಕ ಆಯ್ಕೆಯಾದ ಅರ್ಜಿಗಳ ವಿವರಗಳನ್ನು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಛೇರಿಯ ಪ್ರದರ್ಶನಾ ಫಲಕದಲ್ಲಿ ಪ್ರದರ್ಶೀಸಲಾಗಿದೆ.
ಈ ಅರ್ಜಿಗಳ ಮಾಹಿತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಂದ ಯಾವುದಾದರೂ ಅಕ್ಷೇಪಣೆಗಳಿದ್ದಲ್ಲಿ ಡಿಸೆಂಬರ್ 24ರ ವರೆಗೆ ಸಮಯ ಅವಕಾಶ ನೀಡಲಾಗಿದ್ದು, ಆಕ್ಷೇಪಣೆ ಸಲ್ಲಿಸಬಹುದಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


