ದುಬೈ: ಪ್ರಸ್ತುತ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂದು (ಫೆಬ್ರವರಿ 23) ದುಬೈ ಕ್ರೀಡಾಂಗಣದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಹೈ ವೋಲ್ಟೇಜ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2.30ಕ್ಕೆ ಪಂದ್ಯ ಆರಂಭವಾಗಲಿದ್ದು, ಈಗಾಗಲೇ ಒಂದು ಪಂದ್ಯ ಸೋತಿರುವ ಪಾಕ್ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾದರೆ, ಬಾಂಗ್ಲಾ ಸೋಲಿಸಿರುವ ಭಾರತ ಈ ಪಂದ್ಯ ಗೆದ್ದರೆ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತವಾಗಲಿದೆ.
ಹೀಗೆ ಪಾಕ್ ಹಾಗೂ ಭಾರತದ ಪಂದ್ಯ ಎನ್ನುವುದಕ್ಕಿಂತಲೂ ಫಲಿತಾಂಶ ದೊಡ್ಡ ಮಟ್ಟದ ಹೈಪ್ ಹುಟ್ಟುಹಾಕುತ್ತಿದ್ದು, ಯಾವ ತಂಡ ಗೆಲ್ಲಲಿದೆ ಎಂಬ ಚರ್ಚೆ ನಡೆಯುತ್ತಿವೆ.
ಇನ್ನು ಈ ಪಂದ್ಯದ ಕುರಿತು ಕೆಲ ಮಾಜಿ ಕ್ರಿಕೆಟಿಗರು ಮಾತನಾಡಿದ್ದು, ಭಾರತದ ಮಾಜಿ ಕ್ರಿಕೆಟಿಗ ಅತುಲ್ ವಾಸನ್ ಎಂಬುವವರು ಪಾಕ್ ಗೆಲ್ಲಬೇಕು ಎಂದು ಹೇಳಿಕೆ ನೀಡಿದ್ದಾರೆ.
“ನನಗೆ ಪಾಕಿಸ್ತಾನ ಗೆಲ್ಲಬೇಕೆಂಬ ಆಸೆ. ಏಕೆಂದರೆ ಪಾಕಿಸ್ತಾನ ಗೆದ್ದರೆ ಟೂರ್ನಮೆಂಟ್ ಮಜವಾಗಿರುತ್ತದೆ. ಪಾಕಿಸ್ತಾನವನ್ನು ಗೆಲ್ಲಲು ಬಿಡದಿದ್ದರೆ ಸ್ಪರ್ಧೆ ಚೆನ್ನಾಗಿರಲ್ಲ. ಪಾಕ್ ಗೆದ್ದರೆ ಒಳ್ಳೆಯ ಸ್ಪರ್ಧೆ ಇರಲಿದೆ. ಸಮನಾದ ಹೋರಾಟವಿರಬೇಕು” ಎಂದು ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


