Tuesday, November 3, 2026
spot_img
More
    spot_img
    HomeCCL 2025CCL 2025: ಪಂಜಾಬ್ ವಿರುದ್ಧ ಕರ್ನಾಟಕಕ್ಕೆ 2 ರನ್ ಸೋಲು; ಅತಿಯಾದ ವಿಶ್ವಾಸ, ಬಾಲ್ ಬೌಂಡರಿ...

    CCL 2025: ಪಂಜಾಬ್ ವಿರುದ್ಧ ಕರ್ನಾಟಕಕ್ಕೆ 2 ರನ್ ಸೋಲು; ಅತಿಯಾದ ವಿಶ್ವಾಸ, ಬಾಲ್ ಬೌಂಡರಿ ತಲುಪಿದ್ರೂ ರನ್ ಓಡದೇ ನಿಂತ ಆಟಗಾರ! ವಿಡಿಯೊ ವೈರಲ್

    ಸೂರತ್: ಪ್ರಸ್ತುತ ನಡೆಯುತ್ತಿರುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ನಿನ್ನೆ (ಫೆಬ್ರವರಿ 22) ಕರ್ನಾಟಕ ಬುಲ್ಡೋಜರ್ಸ್ ಹಾಗೂ ಪಂಜಾಬ್ ದೆ ಶೇರ್ ತಂಡಗಳು ಮುಖಾಮುಖಿಯಾಗಿದ್ದವು.

    ತನ್ನ ನಾಲ್ಕನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಕರ್ನಾಟಕ ಬುಲ್ಡೋಜರ್ಸ್ ಪಂಜಾಬ್ ದೆ ಶೇರ್ ವಿರುದ್ಧ 2 ರನ್‌ಗಳ ಸೋಲನ್ನು ಕಂಡಿತು.

    ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ದೆ ಶೇರ್ ಮೊದಲನೇ ಇನ್ನಿಂಗ್ಸ್‌ನಲ್ಲಿ 10 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 121 ರನ್ ಕಲೆಹಾಕಿತು. ಅತ್ತ ಕರ್ನಾಟಕ ಬುಲ್ಡೋಜರ್ಸ್ ಮೊದಲ ಇನ್ನಿಂಗ್ಸ್‌ನಲ್ಲಿ 10 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 91 ರನ್ ಕಲೆಹಾಕಿತು.


    ಹೀಗೆ ಮೊದಲ ಇನ್ನಿಂಗ್ಸ್ ಬಳಿಕ 30 ರನ್‌ಗಳ ಮುನ್ನಡೆಯನ್ನು ಸಾಧಿಸಿದ ಪಂಜಾಬ್ ದೆ ಶೇರ್ ಎರಡನೇ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 94 ರನ್ ಕಲೆಹಾಕಿ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಗೆಲ್ಲಲು 124 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಲು ಯತ್ನಿಸಿದ ಕರ್ನಾಟಕ ಬುಲ್ಡೋಜರ್ಸ್ 10 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 122 ರನ್ ಮಾತ್ರ ಕಲೆಹಾಕಿತು.

    ಹೀಗೆ ಎರಡೇ ಎರಡು ರನ್‌ಗಳ ಅಂತರ ಕರ್ನಾಟಕ ಬುಲ್ಡೋಜರ್ಸ್‌ ತಂಡಕ್ಕೆ ಟೂರ್ನಿಯಲ್ಲಿ ಮೊದಲ ಸೋಲಿನ ದರ್ಶನ ಮಾಡಿಸಿದೆ. ಅಂದಹಾಗೆ ಕರ್ನಾಟಕ ಬುಲ್ಡೋಜರ್ಸ್ ಈ ಪಂದ್ಯವನ್ನೂ ಸಹ ಗೆಲ್ಲಬಹುದಿತ್ತು. ಆದರೆ ತಂಡದ ಕರಣ್ ಆರ್ಯನ್ ಪಂದ್ಯದ ಅಂತಿಮ ಓವರ್‌ನಲ್ಲಿ 6 ಎಸೆತಕ್ಕೆ 7 ರನ್ ಬೇಕಿದ್ದಾಗ ಮೊದಲನೇ ಎಸೆತವನ್ನೇ ಬೌಂಡರಿವರೆಗೂ ಹೋಗುವ ಮಟ್ಟಕ್ಕೆ ಹೊಡೆದರು. ಆದರೂ ಸಹ ಕರಣ್ ಆರ್ಯನ್ ರನ್ ಓಡಲಿಲ್ಲ. ಒಂದು ಸಿಕ್ಸರ್ ಬಾರಿಸಿದ್ದ ಅತಿಯಾದ ವಿಶ್ವಾಸದಿಂದ ಕರಣ್ ಆರ್ಯನ್ ಹೀಗೆ ಮಾಡಿರಬಹುದು. ಮತ್ತೊಂದೆಡೆ ಇದ್ದ ಚಂದನ್ ಕುಮಾರ್ ರನ್ ಓಡುವಂತೆ ಎಷ್ಟೇ ಕೇಳಿದರೂ ಸ್ಟ್ರೈಕ್ ಬಿಟ್ಟುಕೊಡದ ಕರಣ್ ಆರ್ಯುನ್ ಸೋಲಿಗೆ ಕಾರಣರಾಗಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search