ದುಬೈ: ಇಂದು (ಫೆಬ್ರವರಿ 23) ದುಬೈ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಐದನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.
ಮಧ್ಯಾಹ್ನ 2.30ಕ್ಕೆ ಈ ಪಂದ್ಯ ಆರಂಭವಾಗಲಿದ್ದು, ಈಗಾಗಲೇ ಒಂದು ಪಂದ್ಯ ಸೋತಿರುವ ಪಾಕ್‌ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾದರೆ, ಬಾಂಗ್ಲಾ ಸೋಲಿಸಿರುವ ಭಾರತ ಈ ಪಂದ್ಯ ಗೆದ್ದರೆ ಸೆಮಿಫೈನಲ್ ಪ್ರವೇಶ ಬಹುತೇಕ ಖಚಿತವಾಗಲಿದೆ.
ಹೀಗೆ ಪಾಕ್ ಹಾಗೂ ಭಾರತದ ಪಂದ್ಯ ಎನ್ನುವುದಕ್ಕಿಂತಲೂ ಫಲಿತಾಂಶ ದೊಡ್ಡ ಮಟ್ಟದ ಹೈಪ್ ಹುಟ್ಟುಹಾಕುತ್ತಿದ್ದು, ಯಾವ ತಂಡ ಗೆಲ್ಲಲಿದೆ ಎಂಬ ಚರ್ಚೆ ನಡೆಯುತ್ತಿವೆ.
ಇನ್ನು ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಟ್ಟು 5 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ ಎರಡು ಪಂದ್ಯಗಳಲ್ಲಿ ಗೆದ್ದಿದ್ದರೆ, ಪಾಕ್ ಇನ್ನುಳಿದ ಮೂರು ಪಂದ್ಯಗಳಲ್ಲಿ ಗೆದ್ದಿದೆ.
ಭಾರತ ಹಾಗೂ ಪಾಕ್ ನಡುವಿನ ಚಾಂಪಿಯನ್ಸ್ ಟ್ರೋಫಿ ಎಲ್ಲಾ ಪಂದ್ಯಗಳ ಪಟ್ಟಿ
ಚಾಂಪಿಯನ್ಸ್ ಟ್ರೋಫಿ 2004 – ಪಾಕ್‌ಗೆ ಮೂರು ವಿಕೆಟ್‌ಗಳ ಜಯ – ಬರ್ಮಿಂಗ್‌ಹ್ಯಾಮ್
ಚಾಂಪಿಯನ್ಸ್ ಟ್ರೋಫಿ 2009 – ಪಾಕ್‌ಗೆ 54 ರನ್‌ಗಳ ಜಯ – ಸೆಂಚುರಿಯನ್
ಚಾಂಪಿಯನ್ಸ್ ಟ್ರೋಫಿ 2013 – ಭಾರತಕ್ಕೆ 8 ವಿಕೆಟ್‌ಗಳ ಜಯ – ಬರ್ಮಿಂಗ್‌ಹ್ಯಾಮ್
ಚಾಂಪಿಯನ್ಸ್ ಟ್ರೋಫಿ 2017 – ಪಾಕಿಸ್ತಾನಕ್ಕೆ 180 ರನ್‌ಗಳ ಜಯ – ದ ಓವಲ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


