ದುಬೈ: ಇಲ್ಲಿನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಐದನೇ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 49.4 ಓವರ್‌ಗಳಲ್ಲಿ 241 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲ್‌ಔಟ್ ಆಗಿ ಭಾರತಕ್ಕೆ 242 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಯಶಸ್ವಿಯಾದ ಭಾರತ ವಿರಾಟ್ ಕೊಹ್ಲಿ ಶತಕದ ನೆರವಿನಿಂದ 42.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 244 ರನ್ ಬಾರಿಸಿತು.
ಇನ್ನು ಈ ಗೆಲುವಿನ ಮೂಲಕ ಕುಂಭಮೇಳದಲ್ಲಿ ಭಾಗವಹಿಸಿ ತನ್ನ ಮಾತುಗಳಿಂದ ಫೇಮಸ್ ಆಗಿದ್ದ ಐಐಟಿ ಬಾಬಾ ಭಾರೀ ಮುಖಭಂಗಕ್ಕೆ ಒಳಗಾಗಿದ್ದಾರೆ. ಹೌದು, ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಈ ಪಂದ್ಯದ ಬಗ್ಗೆ ಕೆಲ ದಿನಗಳ ಹಿಂದೆ ಮಾತನಾಡಿದ್ದ ಐಐಟಿ ಬಾಬಾ “ನನ್ನ ಮಾತನ್ನು ನೆನಪಿಟ್ಟುಕೊಳ್ಳಿ. ಈ ಬಾರಿ ಭಾರತ ಗೆಲ್ಲುವುದಿಲ್ಲ. ವಿರಾಟ್ ಕೊಹ್ಲಿ ಹಾಗೂ ಇತರರು ಪ್ರಯತ್ನಿಸಿದರೂ ಅವರಿಗೆ ಚಾಲೆಂಜ್ ಮಾಡುತ್ತೇನೆ. ನಾನು ಅವರು ಗೆಲ್ಲುವುದಿಲ್ಲ ಎಂದಿದ್ದೇನೆ. ದೇವರು ದೊಡ್ಡವನಾ ಇಲ್ಲ ಅಥವಾ ಅವರ ಆಟದ ವೈಖರಿಯ ನೋಡಿಯೇ ಬಿಡೋಣ” ಎಂದಿದ್ದರು.
ಆದರೆ ಇದಿಗ ಭಾರತ ಗೆದ್ದಿದ್ದು ಈ ಮೇಲಿನ ಹೇಳಿಕೆಯನ್ನು ರಾಜಾರೋಷವಾಗಿ ನೀಡಿದ್ದ ಐಐಟಿ ಬಾಬಾಗೆ ತೀವ್ರ ಮುಖಭಂಗವಾಗಿದೆ. ಮೈಕ್ ಮುಂದೆ ಸುಖಾಸುಮ್ಮನೆ ಏನೇನೋ ಮಾತನಾಡಿ ತಾನೇ ಚಾಲೆಂಜ್ ಮಾಡಿದ್ದ ಬಾಬಾ ಕುಂಭಮೇಳದಲ್ಲಿ ಸಿಕ್ಕ ಖ್ಯಾತಿಯನ್ನು ಕಳೆದುಕೊಳ್ಳುವ ದಿನ ಸಮೀಪಿಸಿದಂತಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


