Wednesday, November 4, 2026
spot_img
More
    spot_img
    HomeChampions Trophy 2025Champions Trophy 2025: ನಿಮ್ಮ ಆಟ ನೋಡಿ ನಿದ್ರೆ ಬಂತು; ಪಾಕ್ ಕಾಲೆಳೆದ ರಾಯಲ್ ಚಾಲೆಂಜರ್ಸ್...

    Champions Trophy 2025: ನಿಮ್ಮ ಆಟ ನೋಡಿ ನಿದ್ರೆ ಬಂತು; ಪಾಕ್ ಕಾಲೆಳೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು

    ದುಬೈ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಲೀಗ್ ಹಂತದ ಐದನೇ ಪಂದ್ಯದಲ್ಲಿ ಭಾರತ ಹಾಗೂ ಪಾಕ್ ಮುಖಾಮುಖಿಯಾಗಿದ್ದು, ಈ ಬದ್ಧ ವೈರಿಗಳ ಕಾಳಗದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 49.4 ಓವರ್‌ಗಳಲ್ಲಿ 241 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲ್‌ಔಟ್ ಆಗಿ ಭಾರತಕ್ಕೆ 242 ರನ್‌ಗಳ ಗುರಿಯನ್ನು ನೀಡಿದೆ.

    ಭಾರತದ ಬೌಲಿಂಗ್ ದಾಳಿಗೆ ಆರಂಭದಲ್ಲೇ ತನ್ನ ಓಪನರ್ಸ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ ಪಾಕ್ ಇನ್ನಿಂಗ್ಸ್‌ವುದ್ದಕ್ಕೂ ನಿಧಾನಗತಿಯಲ್ಲೇ ರನ್ ಗಳಿಸುತ್ತಾ ಬಂತು.

    ನಾಯಕ ಮೊಹಮ್ಮದ್ ರಿಜ್ವಾನ್ ಹಾಗೂ ಸೌದ್ ಶಕೀಲ್ ಮೂರನೇ ವಿಕೆಟ್‌ಗೆ ತಂಡಕ್ಕೆ ತುಸು ಚೇತರಿಕೆ ನೀಡಿದರು. ಈ ಜೋಡಿ 104 ರನ್‌ಗಳ ಜತೆಯಾಟವನ್ನಾಡಿದರೂ ಸಹ ನಿಧಾನಗತಿಯ ಬ್ಯಾಟಿಂಗ್‌ ಮಾಡಿದ ಕಾರಣಕ್ಕಾಗಿ ಟ್ರೋಲ್‌ಗೀಡಾಗಿದ್ದಾರೆ. ಕ್ರಿಕೆಟ್ ಪ್ರೇಮಿಗಳು ಟೆಸ್ಟ್ ಪಂದ್ಯ ವೀಕ್ಷಿಸಿದಂತಾಗುತ್ತಿದೆ ಎಂದರೆ ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಹ ಪಾಕ್ ತಂಡವನ್ನು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಟ್ರೋಲ್ ಮಾಡಿದೆ.

    ಪಾಕ್ ತನ್ನ ಮೊದಲ 10 ಓವರ್‌ಗಳಲ್ಲಿ 2 ವಿಕೆಟ್‌ಗೆ 52 ರನ್ ಹಾಗೂ 10ರಿಂದ 20 ಓವರ್‌ಗಳ ತನಕ ಗಳಿಸಿದ್ದು ಕೇವಲ 26 ರನ್ ಎಂದು ಅಂಕಿಅಂಶವನ್ನು ಹಂಚಿಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಕ್‌ನ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ವಿಕೆಟ್ ಕೀಪಿಂಗ್ ವೇಳೆ ಆಕಳಿಸುತ್ತಾ ಇರುವ ಮೀಮ್ ಫೋಟೊವನ್ನು ಬಳಸಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search