ದುಬೈ: ಇಲ್ಲಿನ ದುಬೈ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಲೀಗ್ ಹಂತದ ಐದನೇ ಪಂದ್ಯದಲ್ಲಿ ಭಾರತ ಹಾಗೂ ಪಾಕ್ ಮುಖಾಮುಖಿಯಾಗಿದ್ದು, ಈ ಬದ್ಧ ವೈರಿಗಳ ಕಾಳಗದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 49.4 ಓವರ್‌ಗಳಲ್ಲಿ 241 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲ್‌ಔಟ್ ಆಗಿ ಭಾರತಕ್ಕೆ 242 ರನ್‌ಗಳ ಗುರಿಯನ್ನು ನೀಡಿದೆ.
ಪಾಕ್ ಇನ್ನಿಂಗ್ಸ್: ಪಾಕ್ ಪರ ಆರಂಭಿಕರಾಗಿ ಕಣಕ್ಕಿಳಿದ ಬಾಬರ್ ಅಜಮ್ 23 ಹಾಗೂ ಇಮಾಮ್ ಉಲ್ ಹಕ್ 10 ರನ್ ಗಳಿಸಿ ಔಟ್ ಆದರು. ಕೇವಲ 47 ರನ್‌ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕ್‌ಗೆ ಮೂರನೇ ವಿಕೆಟ್‌ಗೆ ಒಂದಾದ ಮೊಹಮ್ಮದ್ ರಿಜ್ವಾನ್ ಹಾಗೂ ಸೌದ್ ಶಕೀಲ್ ಜೋಡಿ 104 ರನ್‌ಗಳ ಜತೆಯಾಟವನ್ನಾಡಿದರು. ಆಮೆ ವೇಗದಲ್ಲಿ ರನ್ ಕಲೆಹಾಕಿದರೂ ಆ ಸಂದರ್ಭದಲ್ಲಿ ಇಂತಹ ಇನ್ನಿಂಗ್ಸ್ ಅನಿವಾರ್ಯವಾಗಿತ್ತು. ರಿಜ್ವಾನ್ 46 ರನ್ ಗಳಿಸಿದರೆ, ಸೌದ್ ಶಕೀಲ್ 62 ರನ್ ಗಳಿಸಿದರು. ಇನ್ನುಳಿದಂತೆ ಸಲ್ನಾ ಆಘಾ 19, ತಯ್ಯಬ್ ತಾಹಿರ್ 4 ರನ್, ಶಾಹಿನ್ ಅಫ್ರಿದಿ ಗೋಲ್ಡನ್ ಡಕ್‌ಔಟ್, ನಸೀಮ್ ಶಾ 14, ಹ್ಯಾರಿಸ್ ರೌಫ್ 8 ರನ್, ಅಂತಿಮ ಹಂತದಲ್ಲಿ ಜವಾಬ್ದಾರಿಯುತ ಆಟವನ್ನಾಡಿದ ಖುಷ್‌ದಿಲ್ ಷಾ 38 ರನ್ ಗಳಿಸಿದರು ಹಾಗೂ ಯಾವುದೇ ಎಸೆತ ಎದುರಿಸದ ಅಬ್ರಾರ್ ಅಹ್ಮದ್ ಅಜೇಯರಾಗಿ ಉಳಿದರು.
ಭಾರತದ ಪರ ಕುಲ್‌ದೀಪ್ ಯಾದವ್ 3 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 2 ವಿಕೆಟ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಹಾಗೂ ಹರ್ಷಿತ್ ರಾಣಾ ತಲಾ ಒಂದೊಂದು ವಿಕೆಟ್ ಪಡೆದರು. ಭಾರತದ ಬೌಲಿಂಗ್ ದಾಳಿಗೆ ಪಾಕ್ ಮಂಕಾಗಿದ್ದು, ರನ್ ಗಳಿಸಲು ಪರದಾಡಿತು. ಇಡೀ ಇನ್ನಿಂಗ್ಸ್‌ನಲ್ಲಿ ಖುಷ್‌ದಿಲ್ ಷಾ ಹೊರತುಪಡಿಸಿ ಇನ್ಯಾವುದೇ ಆಟಗಾರ ಸಹ ಸಿಕ್ಸರ್ ಬಾರಿಸಲಾಗದ ಮಟ್ಟಿಗೆ ಭಾರತದ ಬೌಲಿಂಗ್ ಪಾಕ್ ಆಟಗಾರರನ್ನು ಕಾಡಿತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


