ದುಬೈ: ಇಂದು (ಫೆಬ್ರವರಿ 23) ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯ ಐದನೇ ಪಂದ್ಯ ನಡೆಯುತ್ತಿದ್ದು, ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆರಿಸಿಕೊಂಡಿದೆ.
ಆರಂಭದಿಂದಲೂ ರನ್ ಗಳಿಸಲು ಪರದಾಡಿದ ಪಾಕಿಸ್ತಾನದ ಆಟಗಾರರು ನಿಧಾನಗತಿಯಲ್ಲೇ ಬ್ಯಾಟ್ ಬೀಸಿದರು. ಪಾಕ್ ತನ್ನ ಮೊದಲೆರಡು ಕೇವಲ 47 ರನ್ಗಳಿಗೆ ಕಳೆದುಕೊಂಡ ಪಾಕ್ ಸಂಕಷ್ಟಕ್ಕೆ ಸಿಲುಕಿತು. ಹೀಗಾಗಿ ಬಳಿಕ ಕಣಕ್ಕಿಳಿದ ಆಟಗಾರರು ಜಾಗರೂಕತೆಯಿಂದ ಆಟವನ್ನಾಡಬೇಕಿತ್ತು.
ಮೂರನೇ ವಿಕೆಟ್ಗೆ ಜತೆಯಾದ ರಿಜ್ವಾನ್ ಹಾಗೂ ಸೌದ್ ಶಕೀಲ್ ಉತ್ತಮ ಆಟವನ್ನಾಡಿದರಾದರೂ ತಂಡದ ಸುದೀರ್ಘ ಕಾಲ ಈ ಜೋಡಿ ಉಳಿಯಲಿಲ್ಲ.
40 ಓವರ್ಗೆ ಪಾಕ್ 5 ವಿಕೆಟ್ ಕಳೆದುಕೊಂಡು 183 ರನ್ ಕಲೆಹಾಕಿದೆ. ಇನ್ನು ಇಲ್ಲಿಯವರೆಗೆ ಔಟ್ ಆಗಿರುವ ಎಲ್ಲಾ ಆಟಗಾರರ ವಿಕೆಟ್ ಅನ್ನೂ ಗುಜರಾತ್ ಮೂಲದ ಬೌಲರ್ಗಳೇ ಪಡೆದಿರುವುದರಿಂದ ಎಕ್ಸ್ ನಲ್ಲಿ ಇದು ಭಾರತ vs ಪಾಕ್ ಪಂದ್ಯವಲ್ಲ, ಗುಜರಾತ್ vs ಪಾಕ್ ಪಂದ್ಯ ಎಂದು ಕಾಲೆಳೆದಿದ್ದಾರೆ. ಹೌದು, ಹಾರ್ದಿಕ್ ಪಾಂಡ್ಯ ಎರಡು ವಿಕೆಟ್ ಪಡೆದಿದ್ದರೆ, ರವೀಂದ್ರ ಜಡೇಜಾ ಸಹ ಎರಡು ವಿಕೆಟ್ ಪಡೆದಿದ್ದಾರೆ ಹಾಗೂ ಅಕ್ಷರ್ ಪಟೇಲ್ ಒಂದು ವಿಕೆಟ್ ಪಡೆದಿದ್ದು, ಒಂದು ರನ್ಔಟ್ ಅನ್ನೂ ಸಹ ಮಾಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


